ಬೈಟುಕಾಫಿ

ಸಂವಿಧಾನದಲ್ಲೇ ಸಮ್ಮತಿ

Published On :

ಭಾರತೀಯರೂ ಒಪ್ಪಿಕೊಳ್ಳುವ ದಿನ ದೂರವಿಲ್ಲ

ವಯೋಸಹಜ ಬಯಕೆಗಳು ಕಾಡುವ ಮೊದಲೇ ಸಂಗಾತಿಯನ್ನು ಪಡೆದುಕೊಳ್ಳುತ್ತಿದ್ದ ಅಂದಿನವರಿಗೂ, ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ ಭದ್ರ ನೆಲೆಕಾಣುವವರೆಗೂ ಮದುವೆಮುಂದೂಡಬೇಕಾಗಿರುವ ಇಂದಿನ ತರುಣ-ತರುಣಿಯರ ಪರಿಸ್ಥಿತಿಗೂ ಸಾಕಷ್ಟು ಅಂತರವಿದೆ. ಈ ಅಗತ್ಯವನ್ನು ಮನಗಂಡದ್ದರಿಂದಲೇ ವಿವಾಹ ಪೂರ್ವ ಲೈಂಗಿಕತೆಗೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದೆ. ಹಾಗೆಂದ ಮಾತ್ರಕ್ಕೆ, ಅದನ್ನೇ ಜೀವನ ಕ್ರಮವಾಗಿ ರೂಢಿಸಿಕೊಳ್ಳಬೇಕೆಂದೇನೂ ಇಲ್ಲ. ವಿವಾಹ ಪೂರ್ವ ಲೈಂಗಿಕತೆಯಿಂದ ವಿವಾಹದ ಆಕರ್ಷಣೆಯು ತಗ್ಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಏಕೆ, ಇನ್ನೆರಡು-ಮೂರು ತಲೆಮಾರಿನ ನಂತರ ವಿವಾಹಗಳೇ ಮಾಯವಾಗಬಹುದು! ಸಂಪ್ರದಾಯ-ಆಧುನಿಕತೆಯ ನಡುವೆ ತೊಳಲಾಡುವ ದೇಶದಲ್ಲಿ, ಮುಂದೊಂದು ದಿನ ಎಲ್ಲವನ್ನೂ ಜೀರ್ಣಿಸಿಕೊಳ್ಳುವುದು ಖಚಿತ.
-ಕವಿತಾ ಮೇಗೂರು, ಕೊಪ್ಪಳ ಜಿಲ್ಲೆ

ಪ್ರಳಯ ಗ್ಯಾರಂಟಿ

ಭದ್ರ ಬುನಾದಿ ಇರುವ ಭಾರತೀಯ ಸಂಸ್ಕೃತಿ ವಿರುದ್ಧ ನಾವು ನಡೆದರೆ ಪ್ರಳಯ ಗ್ಯಾರಂಟಿ! ವಿವಾಹ ಪೂರ್ವ ಲೈಂಗಿಕತೆ ಎನ್ನುವುದು ಹಲವು ಯುವಕ-ಯುವತಿಯರನ್ನು ದಾರಿತಪ್ಪಿಸುತ್ತಿರುವುದನ್ನು ದಿನನಿತ್ಯ ಮಾಧ್ಯಮ ಗಳಲ್ಲಿ ಗಮನಿಸುತ್ತಿದ್ದೇವೆ. ವಿವಾಹ ನಂತರದಲ್ಲೇ ಹತ್ತಾರು ಸಮಸ್ಯೆಗಳು ಸಂಸಾರದಲ್ಲಿ ತಾಂಡವ ಆಡುತ್ತಿರುವಾಗ, ವಿವಾಹ ಪೂರ್ವ ಲೈಂಗಿಕತೆ ಎಷ್ಟರಮಟ್ಟಿಗೆ ಸರಿ? 'ಹದಿಹರಯ ಕುದಿಹೃದಯ' ಎಂಬ ಮಾತಿದೆ. ಈ ಹಂತದಲ್ಲಿ ಇಂದಿನ ಯುವಜನತೆ ಪ್ರೀತಿ-ಪ್ರೇಮಕ್ಕೂ ಮೀರಿದ್ದನ್ನು ಅನುಭವಿಸಲು ಹೋಗಿ ದುರಂತಗಳಲ್ಲಿ ತಮ್ಮ ಅಂತ್ಯ ಕಂಡುಕೊಳ್ಳುತ್ತಿದ್ದಾರೆ. ಯುವಜನತೆಯು ಉತ್ತಮ ಶಿಕ್ಷಣ ಪಡೆದು, ಪರಿಪಕ್ವ ಕಾಲದಲ್ಲಿ ಮದುವೆಯಾಗಿ ಸಂಸಾರ ಜೀವನ ನಡೆಸುವುದೊಳಿತು.
-ಕಾಳೀಹುಂಡಿ ಶಿವಕುಮಾರ್, ಮೈಸೂರು

ಸರ್ಕಾರ ಲೈಸೆನ್ಸ್ ಕೊಡಲಿ

ಜಗತ್ತಿನಲ್ಲಿ ಸಂಪ್ರದಾಯದ ಶ್ರೀಮಂತ ದೇಶವಾಗಿರುವ ಭಾರತಕ್ಕೆ ಲೈಂಗಿಕತೆಯಂಥ ಜಟಿಲ ಸಮಸ್ಯೆ ಪರಿಹರಿಸಿಕೊಳ್ಳುವುದು ಅಸಾಧ್ಯ. ನಮ್ಮ ದೇಶದ ಹೆಣ್ಣು ಮಕ್ಕಳು ಮದುವೆ ಆಗದಿದ್ದರೆ ಜೀವನ ಪರ್ಯಂತ ಹಾಗೇ ಇರುತ್ತಾರೆ ಹೊರತು ಪರಪುರುಷನ ಸಹವಾಸ ಬಯಸುವುದಿಲ್ಲ. ಗಂಡಸಿಗೆ ಅದು ಅಸಾಧ್ಯ. ಅನೇಕ ಕ್ಲಿಷ್ಟಕರ ಸಮಸ್ಯೆಗಳಿವೆ. 40 ವರ್ಷ ಕಳೆದರೂ ಮದುವೆ ಆಗಿಲ್ಲದ, ಹರೆಯದಲ್ಲೇ  ವಿಧವೆಯಾದ ಹೆಣ್ಣು ಮಕ್ಕಳಿದ್ದಾರೆ. ಅವರ ಕಥೆ ಏನು? 60 ವರ್ಷ ವಯಸ್ಸಿನ ಗಂಡಸಿಗೆ ಹೆಂಡತಿ ಸತ್ತ ವಾರದಲ್ಲೇ ಹೆಣ್ಣು ನಿಶ್ಚಯ ಮಾಡುವವರಿದ್ದಾರೆ. ಈ ಭಾಗ್ಯ ನಮ್ಮ ಹೆಣ್ಣು ಮಕ್ಕಳಿಗಿಲ್ಲ. ಬೇರೆ ಹೆಂಗಸಿನೊಂದಿಗೆ ಚೆಲ್ಲಾಟವಾಡಿ ಹೆಂಡತಿಯನ್ನು ಕಣ್ಣೆತ್ತಿ ನೋಡದವರೂ ಇದ್ದಾರೆ. ಆದ್ದರಿಂದ ಆರೋಗ್ಯವಂತ ಮಹಿಳೆಯರು ಸ್ವ-ಇಚ್ಛೆಯಿಂದ ಸೆಕ್ಸ್ ವರ್ಕರ್‌ಗಳಾಗಲು ಸರ್ಕಾರ ಅನುಮತಿ ಕೊಟ್ಟರೆ ಅಂತಹವರ ಬದುಕು ಲೈಂಗಿಕವಾಗಿ ಹಸನಾದೀತು.
- ಶಿವಮೂರ್ತಿ ಅಚಿಗೇರಿ, ಹಾವೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.