

ನಮ್ಮ ಕೆಎಂಎಫ್ ಮಾಡುತ್ತಿರುವ ಕೆಲಸ ಗೊತ್ತಲ್ವಾ? ಮನೆ-ಮನೆಯಿಂದ ಹಾಲು ಸಂಗ್ರಹಿಸುವ ಕೆಎಂಎಫ್ ಘಟಕಗಳು ಅದನ್ನು ಸಂಸ್ಕರಿಸಿ, ಪ್ಯಾಕೆಟ್ಗಳಲ್ಲಿ ತುಂಬಿ ಮತ್ತೆ ಗ್ರಾಹಕರಿಗೆ ತಲುಪಿಸುತ್ತದೆ. ಅದೇ ರೀತಿಯಲ್ಲಿ ಇಂದು ರಾಜ್ಯದಲ್ಲಿ ಉದ್ಭವವಾಗಿರುವ ವಿದ್ಯುತ್ ಸಮಸ್ಯೆ ನಿವಾರಣೆಗೆ ಪ್ರತಿ ಗ್ರಾಹಕ ತನ್ನ ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮಾಡಿ ಸರ್ಕಾರಕ್ಕೆ ಸರಬರಾಜು ಮಾಡುವುದಾದರೇ..!? ಅದು ಪ್ರತಿ ಯೂನಿಟ್ಗೆ ಕೇವಲ 10ರಿಂದ 15 ಪೈಸೆಯ ಖರ್ಚಿನಲ್ಲಿ..!
ಹುಚ್ಚು ಕಲ್ಪನೆ ಅನ್ನಿಸುತ್ತೆ ಅಲ್ವಾ? ಇದೆಲ್ಲಾ ಸಾಧ್ಯವೇನ್ರಿ ಅನ್ನುತ್ತೀರಾ? ಕಲ್ಪನೆ ಅಲ್ಲ, ಸಾಧ್ಯವಿದೆ ಎನ್ನುತ್ತಾನೆ ಅಭಿಷೇಕ್. ಈತನಿನ್ನೂ 10ನೇ ತರಗತಿಯ ಪೋರ. ಹಾಗೆಂದು ಲಘುವಾಗಿ ಪರಿಗಣಿಸಬೇಡಿ.
ಯೋಜನೆಯ ರೂವಾರಿ
ಹೋಲಿ ಏಂಜೆಲ್ಸ್ ಪ್ರೌಢಶಾಲೆಯಲ್ಲಿ 10ನೇ ತರಗತಿಕಲಿಯುತ್ತಿರುವ ಕೌಶಿಕ್ ಎನ್.ಕೆ. ಮೂಲತಃ ದಾವಣಗೆರೆಯ ಕೆ.ನಾರಾಯಣ್ ಮತ್ತು ಜಿ.ಎಸ್. ಉಷಾರಾಣಿ ದಂಪತಿಯ ಪುತ್ರ. ವಿದ್ಯುತ್ ಸಮಸ್ಯೆ ನಿವಾರಣೆಯ ಯೊಚನೆ ಬಂದದ್ದು ಒಂದು ವರ್ಷದ ಹಿಂದೆ. ಇದಕ್ಕಾಗಿ ಏನಾದರೂ ಮಾಡಬೇಕೆಂಬುದನ್ನೇ ಗೀಳಾಗಿಸಿಕೊಂಡ ಈತ. ಈ ಸಂದರ್ಭದಲ್ಲಿ ಹೊಳೆದ ಚಿಂತನೆಯನ್ನು 'ಯಾರೋ ವಿಜ್ಞಾನಿಗಳು ಮಾಡಿರಬಹುದು. ನನ್ನದು ಕೂಡ ಅದೇ ಯೋಚನೆ, ಅಷ್ಟೆ' ಎಂದುಕೊಂಡು ಸುಮ್ಮನಿದ್ದ. ಆದರೆ ಮನಸ್ಸು ಸುಖಾ ಸುಮ್ಮನಿರಗೊಡಲಿಲ್ಲ. ಗೂಗಲ್ ಮತ್ತಿತರ ಜಾಲತಾಣಗಳಲ್ಲಿ ಹುಡುಕಾಡಿದ. ಎಲ್ಲೂ ಇಂತಹ ಯೋಜನೆಯ ಬಗ್ಗೆ ಸುಳಿವು ದೊರೆಯಲಿಲ್ಲ. ಇದನ್ನು ಖಾತ್ರಿಪಡಿಸಿಕೊಂಡ ನಂತರ ಹೆಚ್ಚಿನ ಸಂಶೋಧನೆಗೆ ಮುಂದಾದ. ಅಲ್ಲಿಂದ ಶುರುವಾಯ್ತು ವಿದ್ಯುತ್ ಸಂಚಾರ!
ಶಾಲೆಯಲ್ಲಿ ಈ ಸಂಬಂಧ ಒಂದು ಪ್ರಬಂಧವನ್ನೇ ಮಂಡಿಸಿದ್ದಾನೆ. ಇದರಲ್ಲಿ ಸಿಕ್ಕ ಯಶಸ್ಸನ್ನು ಆಧರಿಸಿ ಸಾರ್ವಜನಿಕರು, ಸಹಪಾಠಿಗಳು, ಶಾಲಾ ಮಂಡಳಿ ಕೂಡ ಹಾಡಿ ಹೊಗಳುವಂತೆ ಯೋಜನೆಯನ್ನು ಪರಿಪೂರ್ಣಗೊಳಿಸಿದ್ದಾನೆ.
ಹೊಸ ಚಿಂತನೆಯೇನು?
ಈಗಂತೂ ಪ್ರತಿ ಮನೆ-ಮನೆಯಲ್ಲೂ ವಾಟರ್ ಟ್ಯಾಂಕ್ಗಳು ಮತ್ತು ಸಂಪುಗಳು ಸಾಮಾನ್ಯ. ಅವುಗಳ ಮೂಲಕವೇ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಿರುವುದು ವಿಶೇಷ. ಆದರೆ, ಇದಕ್ಕಾಗಿ ಪಂಪಿಂಗ್ ಮೋಟರ್ ಖರೀದಿಸಲು ಹಣ ವಿನಿಯೋಗಿಸಬೇಕಿದೆ ಅಷ್ಟೇ. ಕೆಳಗೆ ಶೇಖರವಾಗಿರುವ ನೀರನ್ನು ಈ ಮೋಟರ್ ಸಹಾಯದಿಂದ ಮೇಲಿನ ಟ್ಯಾಂಕ್ನಲ್ಲಿ ಶೇಖರಿಸುವುದು ಅಥವಾ ನಿರಂತರವಾಗಿ ಅಲ್ಲಿಂದಲೇ ಹರಿಬಿಡುವುದು. ಈ ಮೋಟಾರ್ಗೆ ವಿದ್ಯುತ್ ಬೇಕಿಲ್ಲ. ಇದು ಸೋಲಾರ್ ಘಟಕದ ಮೂಲಕವೇ ನೀರನ್ನು ಮೇಲಕ್ಕೆ ಪಂಪ್ ಮಾಡುತ್ತದೆ. ಮತ್ತೆ ಮೇಲಿಂದ ಬೀಳುವ ನೀರು ನಿರಂತರವಾಗಿ ಜನರೇಟರ್ ಮೇಲೆ ಬೀಳುತ್ತಾ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದನ್ನು ಪ್ರತಿ ಮನೆಯಲ್ಲೂ ಅಳವಡಿಸಿಕೊಳ್ಳಬಹುದು. ಇಂಥ ಮಾದರಿಯನ್ನು ಹೆಚ್ಚಾಗಿ ಹಿಮಾಲಯ ಪರ್ವತ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿ ನೋಡಬಹುದಾಗಿದೆ.
ಉಪಯೋಗಗಳೇನು?