ಮಾರಿಯೋ ಗೆರೆಗಳು

ಮಾರಿಯೋ ಗೆರೆಗಳು
Updated on: 

ಮಾರಿಯೋ ಮಿರಾಂಡ ಅವರ ಗೆರೆಗಳು ಅಂದರೆ ಅಲ್ಲೊಂದು ಮ್ಯಾಜಿಕ್ ಇದೆ ಅಂತಾನೇ ಅರ್ಥ. ಗೋವಾದಲ್ಲಿ ನೆಲೆಸಿದ್ದು, ಕಳೆದ ವರ್ಷ ನಿಧನರಾದ ಮಿರಾಂಡ, ಜಗತ್ಪ್ರಸಿದ್ಧ ವ್ಯಂಗ್ಯಚಿತ್ರಕಾರ. ಗೋವಾದ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಇವರು ಕರ್ನಾಟಕವನ್ನು ಕೂಡ ತಮ್ಮ ಚಿತ್ರಗಳಲ್ಲಿ ಬಿಂಬಿಸಿದ್ದರು ಎನ್ನವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.  1976ರಲ್ಲಿ ಕರ್ನಾಟಕದ ಬಗ್ಗೆ ಕೆಲ ಪುಸ್ತಕಗಳನ್ನು ಹೊರತರಲು ರಾಜ್ಯ ಸರ್ಕಾರ ನಿರ್ಧರಿಸಿತು. ಅವುಗಳಲ್ಲಿ ಡಾಮ್ ಮೊರೇಸ್ ಬರೆದ 'ದಿ ಓಪನ್ ಐಸ್- ಎ ಜರ್ನಿ ತ್ರೂ ಕರ್ನಾಟಕ' ಕೃತಿಯೂ ಒಂದಾಗಿತ್ತು. ಮೊರೇಸ್ ಅವರ ಕೃತಿಗೆ ಮಿರಾಂಡ ಬರೆದ ಚಿತ್ರಗಳು, ಬರಹಗಳನ್ನೂ ಮೀರಿ ನಿಂತವು ಎಂದರೆ ಉತ್ಪ್ರೇಕ್ಷೆಯಲ್ಲ. ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಮಿರಾಂಡ ಕರ್ನಾಟಕದ ನಾಡಿಯನ್ನು ಅರಿತಿದ್ದರು. ಮಿರಾಂಡ ಕರ್ನಾಟಕದ ಬಗ್ಗೆ ರಚಿಸಿದ ಈ ಚಿತ್ರಗಳು ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಮತ್ತು ರಾಜ್ಯ ವಾರ್ತಾ ಇಲಾಖೆ ಪ್ರಾಯೋಜಿಸಿರುವ 'ಮಾರಿಯೋಸ್ ಕರ್ನಾಟಕ' ಪ್ರದರ್ಶನ ಜನವರಿ 19ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ.

ಮಾರಿಯೋಸ್ ಕರ್ನಾಟಕ
ಎಲ್ಲಿ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ಟ್ರಿನಿಟಿ ಸರ್ಕಲ್, ಬೆಂಗಳೂರು
ಯಾವಾಗ: ಜ.19ರಿಂದ ಫೆಬ್ರವರಿ 9. ಬೆಳಗ್ಗೆ 10ರಿಂದ ಸಂಜೆ 6 ಗಂಟೆ.
ಸಂಪರ್ಕ:    9980091428

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com