

1. ನೀವು ಇಷ್ಟಪಡುವ ದೇವರು ಯಾವುದು?
- 'ಗೌರಿಗಣೇಶ'.
2. ನಿಮ್ಮನ್ನು ಖುಷಿಪಡಿಸಲು ನಿಮ್ಮನೆಯವರು ಆಗಾಗ ಹೇಳೋ ಮಾತೇನು?
- 'ನೀನು ನಕ್ಕರೆ ಹಾಲು ಸಕ್ಕರೆ'!
3. ಅದ್ಸರಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
- 'ವಿನಯವಂತ'.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
---
ಹುಡುಗಿಯರ ಬಗ್ಗೆ ಚಿಂತೆ (ಹಾರ್ಡ್ ವರ್ಡ್)
ನಾನೊಬ್ಬ ಸ್ಟೂಡೆಂಟು. ನನಗೊಂದು ಕೆಟ್ಟ ಚಟ ಇದೆ. ಇಪ್ಪತ್ನಾಲ್ಕು ಗಂಟೆ ಹುಡುಗಿಯರದ್ದೇ ಆಲೋಚನೆ. ಅವರು ಯಾವ ಡ್ರೆಸ್ ಹಾಕ್ಕೊಂಡಿದ್ದಾರೆ, ಹ್ಯಾಗೆ ಸ್ಟೈಲ್ ಮಾಡ್ತಾರೆ ಎಂಬುದೇ ನನಗೆ ಚಿಂತೆ. ಅವರ ಅಂದಚೆಂದದ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ಳುತ್ತೇನೆ. ಯಾಕೆ ಹೀಗೆ?
- ಸುಜನ್, ಊರುಬೇಡ
ನಿನ್ನ ವ್ಯಕ್ತಿತ್ವದ ಮೂಲದಲ್ಲೇನೂ 'ದೋಷ' ಇಲ್ಲ, ಇರೋದು ನಿನ್ನ ಚಿಂತನೆಗಳಲ್ಲೇ. ಮಾಡಬೇಕಾದ ಕೆಲಸ ಮರೆತು ಮಾನಿನಿಯರೆಡೆಗೆ ಮಗ್ನನಾಗುವುದು ತಪ್ಪು. ಏನಾದರೂ ಸಾಧನೆಯ ಕಡೆಗೆ ಗಮನ ಕೊಡು. ಆಗ ನೀನು ಕನಸು ಕಾಣುವಂಥ ನೂರಾರು ಹುಡುಗಿಯರು ನಿನ್ನ ಮುಂದೆ ನಿಲ್ಲುತ್ತಾರೆ. ತಲೆಕೆಡಿಸಿಕೊಳ್ಳೋದನ್ನು ಸ್ಟಾಪ್ ಮಾಡು... <
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
ಡಾ. ಸ್ಯಾಟಲೈಟ್
anekaby2@gmail.com