ಬೈಟುಕಾಫಿ

ಮಹಾತ್ಮರನ್ನು ಅರಿಯಿರಿ

Published On :

'ಇತಿಹಾಸ ಅರಿಯಲಾರದವನು ಇತಿಹಾಸ ನಿರ್ಮಿಸಲಾರ' ಎಂಬ ಮಾತಿನಂತೆ ಮಹಾತ್ಮರನ್ನು ಅರಿಯಲಾರದೆ ಜೀವನದ ದಿವ್ಯತೆಯನ್ನು ಬೆಳಗಲಾರೆವು. ಪ್ರತಿಯೊಂದು ಕ್ಷೇತ್ರದಲ್ಲಿ ಮಹಾನ್ ಸಾಧಕರಿದ್ದಾರೆ. ಭಾರತದ ಪುರಾತನ ಋಷಿಮುನಿಗಳು ತಮ್ಮ ಇಡೀ ಜೀವಮಾನವನ್ನು ಅರ್ಪಿಸಿ ಸಾರ್ವತ್ರಿಕ, ಸಾರ್ವಕಾಲಿಕ ಸತ್ಯಗಳಿಂದ ಕೂಡಿದ ಮಹಾತತ್ತ್ವ, ಸಿದ್ಧಾಂತಗಳನ್ನು ನೀಡಿ ಮಹಾತ್ಮರೆನಿಸಿದ್ದಾರೆ. ಅವರಂತೆ ಋಷಿಮುಖಿಗಳಾಗದ ನಾವು ಅವರು ನೀಡಿರುವ ಅಮೂಲ್ಯ ತತ್ತ್ವಗಳನ್ನು ಸಮಕಾಲೀನ ಸತ್ಯದೊಡನೆ ಪರೀಕ್ಷಿಸಿ, ಸನ್ಮಾರ್ಗಗಳನ್ನು ತೋರುವ ಕಾರ್ಯವನ್ನು ಕೈಗೊಳ್ಳಬೇಕು.
'ಪ್ರತಿಯೊಬ್ಬರೂ ಪೂರ್ವ ಸಿದ್ಧಾಂತಗಳೂ ಸೇರಿ ಮಾಡಲಾದ ಈ ಹೊಸ ಹಾಗೂ ನಿಜತತ್ತ್ವಗಳನ್ನು ಬೋಧಿಸುವ ಪ್ರವಾದಿಗಳಾಗಬೇಕಾಂದು ಬಯಸುತ್ತೇನೆ. ಹಿಂದಿನ ಎಲ್ಲ ಸಂದೇಶಗಳನ್ನೂ ತೆಗೆದುಕೊಳ್ಳಿ. ಅವುಗಳಿಗೆ ನಿಮ್ಮದೇ ಆದ ಸಾಕ್ಷಾತ್ಕಾರಗಳ ಅನುಭವಗಳನ್ನು ಸೇರಿಸಿ, ಇತರರ ಪಾಲಿಗೆ ನೀವೇ ಪ್ರವಾದಿಗಳಾಗಿ. ಈ ಜಗತ್ತಿನಲ್ಲಿ ಉದಿಸಿದ ಗುರುಗಳಲ್ಲಿ ಪ್ರತಿಯೊಬ್ಬರೂ ಮಹಾತ್ಮರೇ ಸರಿ. ಅವರೆಲ್ಲರೂ ನಮಗೆ ಏನಾದರೊಂದನ್ನು ಉಳಿಸಿ ಹೋಗಿದ್ದಾರೆ. ಅವರೇ ನಮ್ಮ ಪಾಲಿಗೆ ದೇವರಾಗಿದ್ದಾರೆ. ನಾವು ಅವರ ಕಿಂಕರರು. ಅವರನ್ನು ಭಗವಂತನ ಪುತ್ರರು ಎನ್ನುವುದಾದರೆ ನಾವೂ ಅದೇ ಆಗಿದ್ದೇವೆ. ಅವರು ತಮ್ಮದೇ ಆದ ರೀತಿಯಲ್ಲಿ ಪರಿಪೂರ್ಣತೆಯನ್ನು ಸಾಧಿಸಿದರು. ನಾವೀಗ ನಮ್ಮ ರೀತಿಯಲ್ಲಿ ಅದನ್ನು ಸಾಧಿಸಲಿದ್ದೇವೆ. ಈ ಕ್ಷಣದಲ್ಲಿಯೇ ನಾವು ದೃಢ ನಿರ್ಧಾರವನ್ನು ಕೈಗೊಳ್ಳೋಣ. ನಾನೊಬ್ಬ ಪ್ರವಾದಿಯಾಗುತ್ತೇನೆ, ನಾನು ದಿವ್ಯಜ್ಯೋತಿಯ ದೂತನಾಗುತ್ತೇನೆ, ನಾನು ಭಗವಂತನ ಪುತ್ರನಾಗುತ್ತೇನೆ, ನಾನು ಭಗವಂತನೇ ಆಗುತ್ತೇನೆ.'
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.