ಬೈಟುಕಾಫಿ

ಅಪೂರ್ವ ಗುಣಗಳ ಸಂಗಮನೋಟ!

Published On :

ವಿವೇಕಾನಂದರ ವ್ಯಕ್ತಿತ್ವದ ಅಪೂರ್ವ ಗುಣಗಳೆಂದರೆ ಸರಳತೆ, ಅಹಂಕಾರರಾಹಿತ್ಯ ಮತ್ತು ಸ್ವಾತಂತ್ರ್ಯಪ್ರಿಯತೆ. ಸ್ವಾಮೀಜಿ ಎಲೆನ್‌ಳ ಮನೆಯ ಕೊಠಡಿಯಲ್ಲಿ ಉಳಿದಿದ್ದರು. ಕೋಣೆಯಲ್ಲಿ ದೊಡ್ಡ ದಾದ ನಿಲುಗನ್ನಡಿಯೊಂದು ಇತ್ತು. ಆ ಕನ್ನಡಿಯ ಮುಂದೆ ನಿಂತು ತಮ್ಮನ್ನು ತಾವೇ ದಿಟ್ಟಿಸಿ ನೋಡಿಕೊಳ್ಳುತ್ತ ಆಲೋಚನಾ ಮಗ್ನರಾದರು. ಸ್ವಲ್ಪ ಹೊತ್ತು ಹಾಗೇ ತಮ್ಮ ಪ್ರತಿಬಿಂಬವನ್ನು ದಿಟ್ಟಿಸಿದ ಬಳಿಕ ಮತ್ತೆ ನಾಲ್ಕು ಹೆಜ್ಜೆ ಅಡ್ಡಾಡುತ್ತಿದ್ದರು. ಇದನ್ನು ಕಂಡ ಎಲೆನ್ 'ಸ್ವಾಮೀಜಿ ತಮ್ಮ ಸ್ಫುರದ್ರೂಪವನ್ನು ಕಂಡು ತಾವೇ ಮರುಳಾಗುತ್ತಿದ್ದಾರೆ' ಎಂದು ಮನಸ್ಸಿನಲ್ಲಿ ಅಂದು ಕೊಂಡಳು. ಆ ವೇಳೆಗೆ ಸ್ವಾಮೀಜಿ ಎಲೆನ್ ಕಡೆ ತಿರುಗಿ 'ಎಲೆನ್, ನಿಜಕ್ಕೂ ಇದೊಂದು ಆಶ್ಚರ್ಯವೇ ಸರಿ. ನಾನು ಹೇಗಿದ್ದೇನೆಂದು ನೆನಪಿಟ್ಟುಕೊಳ್ಳಲು ನನಗೆ ಸಾಧ್ಯವೇ ಆಗುತ್ತಿಲ್ಲ! ಕನ್ನಡಿಯಲ್ಲಿ ನಾನು ನನ್ನನ್ನು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ. ಆದರೆ ಇತ್ತ ಕಡೆಗೆ ಬಂದ ತಕ್ಷಣವೇ ನಾನು ಹೇಗೆ ಕಾಣುತ್ತೇನೆ ಎಂಬುದು ಮರೆತೇ ಹೋಗುತ್ತದೆ' ಎಂದರು. ಮಿಸ್ ಎಲೆನ್ ಸ್ವಾಮೀಜಿಯ ಬಗ್ಗೆ ತಾನು ಆಲೋ ಚಿಸಿದ ಸಣ್ಣತನದ ಬಗ್ಗೆ ನಾಚಿಕೊಂಡಳು. ಸ್ವಾಮೀಜಿಯ 'ದೇಹ ದರ್ಶನಕ್ಕಿಂತ ಆತ್ಮ ದರ್ಶನಕ್ಕೆ ಆದ್ಯತೆ ನೀಡಬೇಕು' ಎಂಬ ವಿಚಾರ ಹೆಚ್ಚು ಪ್ರಸ್ತುತವೆನಿಸುತ್ತದೆ.
ಸ್ವಾಮೀಜಿಯ ವ್ಯಕ್ತಿತ್ವದಲ್ಲಿ ಕಂಡುಬರುತ್ತಿದ್ದ ಮತ್ತೊಂದು ಅಂಶವೆಂದರೆ ಅವರ ಸ್ವತಂತ್ರ ಮನೋವೃತ್ತಿ. ಅವರ ಆಲೋಚನೆ-ಮಾತು-ಕೃತಿಗಳೆಲ್ಲದರಲೂ ಇದು ಎದ್ದು ತೋರುತ್ತಿತ್ತು. ಅವರು ಯಾರ ಹಂಗಿಗೂ ಸಿಕ್ಕಿಕೊಳ್ಳುತ್ತಿರಲಿಲ್ಲ. ತಮಗೆ ಅತಿ ಸಣ್ಣ ಉಪಕಾರ ಮಾಡಿದವರ ಬಗ್ಗೆಯೂ ಅವರು ಎಂದೆಂದಿಗೂ ಕೃತಜ್ಞರಾಗಿರುತ್ತಿದ್ದರು. ಆದರೆ ತಮಗೆ ನೆರವಾಗಲೆಂದು ಬಂದು ತಮ್ಮ ಮೇಲೆ ಒತ್ತಡ ಹೇರುವುದನ್ನು ಅವರು ಸಹಿಸುತ್ತಿರಲಿಲ್ಲ.

- ಆನಂದ. ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.