ಬೈಟುಕಾಫಿ

ಪಾಂಡಿ-ಕ್ಯೂಟರ್ ಎಕ್ಸಿಬಿಷನ್

Published On :

ಯುವ ವಸ್ತ್ರ ವಿನ್ಯಾಸಕಾರರಿಂದ ವಿವಿಧ ವಿಶಿಷ್ಟ ಉಡುಪುಗಳನ್ನು ಡಿಸೈನ್ ಮಾಡಿಸಿ ಫ್ಯಾಷನ್ ಲೋಕಕ್ಕೆ ಪರಿಚಯಿಸುತ್ತಿರುವ ಇಲ್ಕ್ ಎ ಕಾನ್ಸೆಪ್ಟ್ ಬುಟಿಕ್ ಇದೀಗ ಇಬ್ಬರು ವಸ್ತ್ರ ವಿನ್ಯಾಸಕಾರರು ರೂಪಿಸಿದ ಡಿಸೈನ್‌ಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದೆ. ಫ್ರೆಂಚ್ ಡಿಸೈನರ್ ಮೆಲಿಸ್ಸಾ ಡೇ ವಲೇರಾ ಮತ್ತು ಕೆದಾರ್ ಅವರ ಡಿಸೈನ್‌ಗಳ ಅಪೂರ್ವ ಪ್ರದರ್ಶನ ಇದಾಗಿದೆ.
ಇಲ್ಕ್ ಹನ್ನೆರಡು ವಿಶ್ವಪ್ರಸಿದ್ಧ ವಸ್ತ್ರ ವಿನ್ಯಾಸಕಾರರು ರೂಪಿಸಿದ ಡಿಸೈನ್‌ಗಳ ಮಾರಾಟ ಮತ್ತು ಪ್ರಚಾರದಲ್ಲಿತೊಡಗಿಸಿಕೊಂಡಿದ್ದು, ಭಾರತದಾದ್ಯಂತ ಡಿಸೈನರ್‌ಗಳು ಹಾಗೂ ನೇಕಾರ ಸಂಸ್ಥೆಗಳೊಂದಿಗೆ ನೇರ ಸಂಪರ್ಕದ ಮೂಲಕ ಆರ್ಗ್ಯಾನಿಕ್ ವಸ್ತುಗಳನ್ನು ಬಳಸಿ ಅಪೂರ್ವ ಫ್ಯಾಷನ್ ಡಿಸೈನ್‌ಗಳನ್ನು ಸೃಷ್ಟಿಸಿದೆ. 'ಪಾಂಡಿ-ಕ್ಯೂಟರ್‌' ಹೆಸರಿನ ಈ ಪ್ರದರ್ಶನ ಸೆಪ್ಟೆಂಬರ್ 14ರಿಂದ 22ರವರೆಗೆ ಇಲ್ಕ್ ಬುಟಿಕ್‌ನಲ್ಲಿ ನಡೆಯಲಿದೆ.
ಸ್ಥಳ: ಇಲ್ಕ್ ಬುಟಿಕ್, ನಂ. 100, 34ನೇ ಬಿ ಕ್ರಾಸ್, 11ನೇ ಮುಖ್ಯರಸ್ತೆ (ಸಬ್‌ವೇ ಹತ್ತಿರ), 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041. ವಿವರಗಳಿಗೆ 080-41695719, 9972319188 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.