ನಗುವಿನ ವೆರೈಟಿ

ನಗುವಿನ ವೆರೈಟಿ
Updated on: 

ಫ್ಲರ್ಟಿ ಮುಗುಳ್ನಗು
ಈ ನಗುವಿನಲ್ಲಿ ಫ್ಲರ್ಟಿ ಭಾವಗಳು ತುಂಬಿರುತ್ತವೆ. ಸುಮ್ಮನೆ ಕಾಲ ಹರಣಕ್ಕೆ ವಿರುದ್ಧ ಲಿಂಗಿಗಳೊಡನೆ ಪರಸ್ಪರ ಸಂಧಿಸುವಾಗ, ಮಾತನಾಡುವಾಗ ಚೆಲ್ಲುವ ಮುಗುಳ್ನಗು. ಅದನ್ನು ಅರ್ಥೈಸದೆ ಹಿಂದೆ ಹೋದಲ್ಲಿ ನೋವು ಕಟ್ಟಿಟ್ಟ ಬುತ್ತಿ. ಫ್ಲರ್ಟಿ ಮುಗುಳ್ನಗುವಾಗ ಕಣ್ಣುಗಳು ಮೇಲೆ ನೋಡುವಂತಿರುತ್ತವೆ. ಹುಬ್ಬು ಮೇಲೇರಿರುತ್ತವೆ.

ಪರಿಣಾಮಕಾರಿ ನಗು
ಹೆಚ್ಚು ಶಕ್ತಿಶಾಲಿ, ವಿಶ್ವಾಸದಿಂದ ಹೊರಚೆಲ್ಲುವ ನಗು. ಕಣ್ಣಿನ ಹುಬ್ಬುಗಳಲ್ಲಿ ಸಾಮಾನ್ಯ ಪ್ರಮಾಣದಿಂದ ಇಳಿಕೆಯತ್ತ ಚಾಚಿರುತ್ತದೆ. ಉದ್ದೇಶಪೂರ್ವಕವಾಗಿ ಪರಿಣಾಮಕಾರಿ ನಗು ಹೊರಚೆಲ್ಲಲು ಸಾಧ್ಯವಿಲ್ಲ. ಆತ್ಮವಿಶ್ವಸ, ನಂಬಿಕೆ ಮತ್ತು ಏದುರಿಗಿರುವ ವ್ಯಕ್ತಿಯ ಕುರಿತಾದ ಹೆಮ್ಮೆ ಇದ್ದರಷ್ಟೇ ಅಂತಹ ನಗು ಒಡಮೂಡಲು ಸಾಧ್ಯ.

ಪ್ರಾಮಾಣಿಕ ನಗು
ಡ್ಯುಚೆನ್ನೆ ಕಿರುನಗೆ ಎಂದು ಕರೆಯಲಾಗುತ್ತದೆ. ಮುಕ್ತ ಮತ್ತು ನಿಜವಾದ ಭಾವದ ಮುಗುಳ್ನಗುವಾಗಿರುತ್ತದೆ. ಅಲ್ಲಿ ಯಾವುದೇ ಮುಚ್ಚುಮರೆ, ವ್ಯಂಗ್ಯ ಇತ್ಯಾದಿ ಭಾವಗಳು ಅಡಕವಾಗಿರುವುದಿಲ್ಲ. ನಿಮ್ಮ ಸ್ನೇಹ, ಮಾತು ಇತ್ಯಾದಿಗಳ ಮೇಲೆ ಸಹಜವಾಗಿ ಉಂಟಾಗುವ ನಗುವನ್ನೇ ಬಹಳ ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಭಾವವದು.

ಡಾಮಿನೆಂಟ್ ನಗು
ಕಣ್ಣಿನ ಹುಬ್ಬುಗಳೆರಡನ್ನೂ ಬಹಳ ಎತ್ತರಕ್ಕೇರಿಸಿದ ನಗು. ಅದರಲ್ಲಿ ಸಂಮೋಹಕ ಶಕ್ತಿ ತುಳುಕಾಡುತ್ತಿರುತ್ತದೆ. ಎದುರಿಗಿರುವ ವ್ಯಕ್ತಿಯನ್ನು ಸಂಪೂರ್ಣವಾಗಿ ಆವರಿಸುವ ಶಕ್ತಿಯಿದೆ. ನಿಮ್ಮನ್ನು ಸಂಪೂರ್ಣವಾಗ ಹತೋಟಿಗೆ ತೆಗೆದುಕೊಳ್ಳಬೇಕು ಎಂಬ ಹಂಬಲ ಇರುತ್ತದೆ. ನೀವು ಹೇಳಿದ  ಜೋಕು ಹಿಂದೆಂದೂ ಕೇಳಿರದವರಂತೆ ಆಡುತ್ತಾರೆ.

ವಿಧೇಯ ನಗು
ತುಟಿ, ಮನಸ್ಸು ಯಾವುದನ್ನೂ ಬಿಗಿಹಿಡಿಯದೆ ಹೊರಸೂಸುವ ನಗು. ಮುಗ್ದ ಮತ್ತು ಮುಕ್ತತೆಯ ಆರಾಧನೆ ವಿಧೇಯ ನಗುವಿನಲ್ಲಿ ಇರುತ್ತದೆ. ಮುಚ್ಚುಮರೆ ಸುಳಿಯುವುದೇ ಇಲ್ಲ. ಭಾವುಕ ಜೀವಿಗಳಿಂದ ಮಾತ್ರ ವ್ಯಕ್ತಪಡಿಸಲು ಸಾಧ್ಯ. ನಗುವಿನಷ್ಟೇ ಸಹಜವಾಗಿ ಅತ್ತುಬಿಡುತ್ತಾರೆ. ಮಗುವಿನ ಮನಸ್ಸುಳ್ಳವರು ಎಂದರೂ ತಪ್ಪಲ್ಲ.

ರಹಸ್ಯ ನಗು
ನಕ್ಕಿದ್ದೇ ಗೊತ್ತಾಗುವುದಿಲ್ಲ. ತುಟಿ ಬಿಚ್ಚಿಕೊಂಡರೆ ತಾನೆ ಅರ್ಥೈಸುವುದು! ವಕ್ರ ನಗು ಎನ್ನಲೂಬಹುದು. ವ್ಯಂಗ್ಯ, ಅಹಿತ, ಅಮುಖ್ಯ ಅಥವಾ ಇನ್ನಾವುದೋ ವ್ಯಕ್ತಪಡಿಸಲಾದ ಭಾವ ವ್ಯಕ್ತವಾಗಿರುತ್ತದೆ. ಯಾವುದೋ ರಹಸ್ಯ ಆ ನಗುವಿನ ಹಿಂದೆ ಅಡಗಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com