

ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು - ಎರಡು ಕಪ್, ಬೆಣ್ಣೆ ಅಥವಾ ತುಪ್ಪ - ಮೂರು ಅಥವಾ ನಾಲ್ಕು ಕಪ್, ಕೆಂಪು ಮೆಣಸಿನ ಪುಡಿ -ಒಂದು ಟೀ ಸ್ಪೂನ್, ಶುಂಠಿ - ಒಂದು ತುಂಡು, ಹಸಿರು ಅಥವಾ ಒಣಗಿದ ಮೆಣಸು -ಎರಡು, ಇಂಗು - ಒಂದು ಚಿಟಿಕೆ, ಉಪ್ಪು- ಒಂದು ಚಮಚ ಅಥವಾ ರುಚಿಗೆ ತಕ್ಕಷ್ಟು, ಕರಿಬೇವು -ಒಂದಷ್ಟು ಎಸಳು, ಸಕ್ಕರೆ -ಎರಡು ಚಮಚ
ಮಾಡುವ ವಿಧಾನ
ಮೇಲೆ ಕೊಟ್ಟಿರುವ ಎಲ್ಲ ವಸ್ತುಗಳನ್ನು ಒಂದು ಬಾಣಲೆಯಲ್ಲಿ ಸುರಿಯಿರಿ. ಚಪಾತಿ ಹಿಟ್ಟಿನಂತೆ ಕಲೆಸಿರಿ. ತುಂಬಾ ಒಣಒಣ ಅನಿಸಿದರೆ ಒಂಚೂರು ಮೊಸರು ಸೇರಿಸಿಕೊಳ್ಳಿ. ಹಿಟ್ಟಿನಂತೆ ಚೆನ್ನಾಗಿ ಮುದ್ದೆ ಆದ ನಂತರ ನೀಟಾಗಿ ಹರಡಿರಿ. ಈಗ ನಿಮಗೆ ಬೇಕಾದ ಶೇಪಿಗೆ ಅದನ್ನು ಕತ್ತರಿಸಿ. ಈಗ ಕಟ್ ಮಾಡಿದ ತುಂಡುಗಳನ್ನು ಕುಕರ್ ಅಥವಾ ಇನ್ಯಾವುದಾದರೂ ಪಾತ್ರೆಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ಚೆನ್ನಾಗಿ ಕಾಯಿಸಿರಿ. ನಂತರ ತಣ್ಣಗಾಗಲು ಬಿಡಿ. ತಣಿದ ನಂತರ ಬಿಸ್ಕೆಟ್ ತಿನ್ನಲು ತಯಾರಾಗಿ. ಇದನ್ನು ನೀವು ತಿಂಗಳುಗಟ್ಟಲೆ ಇಡಬಹುದು ಕೂಡ.