ಬೈಟುಕಾಫಿ

ಪ್ರೀತಿಯೆಂಬ ಕೆರೆನೀರು

ಪ್ರೀತಿಯೆಂಬ ಕೆರೆನೀರು
Published On :

ನೀರಿಲ್ಲದ ಕೆರೆಗೆ ಯಾವ ಬೆಲೆಯಿದೆ? ಅದರತ್ತ ಯಾರು ತಾನೆ ತಿರುಗಿ ನೋಡಲು ಸಾಧ್ಯ? ಹೆಚ್ಚೆಂದರೆ ಅಳಿದುಳಿದ ಕೆಸರಿನಲ್ಲಿ ಬಿದ್ದು ಹೊರಳಾಡಲು ಒಂದಷ್ಟು ಜಾನುವಾರಗಳು ಅತ್ತ ಸುಳಿದಾವು ಎಂಬುದನ್ನು ಬಿಟ್ಟರೆ ಯಾವ ಜೀವಂತಿಕೆಯೂ ಆ ಕೆರೆಯಲ್ಲಿ ಉಳಿದಿರುವುದಿಲ್ಲ. ಪ್ರಿತಿಯಿಲ್ಲದ ಬದುಕು ಸಹ ಬರಡು ನೆಲದಂತೆಯೇ. ಅಲ್ಲಿ ಬೇರಿನ್ನೇನೂ ಚಿಗುರಲು ಸಾಧ್ಯವಿಲ್ಲ. ಒಂದಷ್ಟು ಒರಟುತನ, ಅಸಡ್ಡೆ, ಆಲಸ್ಯ ಇತ್ಯಾದಿ ಜಾನುವಾರುಗಳು ಮೇಯುವ ತಾಣವಾಗಿ ಅಂಥ ಮನಸ್ಸು ಪರಿವರ್ತನೆಯಾಗಿರುತ್ತದೆ. ಅಲ್ಲಿ ಮತ್ತೆ ಜೀವಂತಿಕೆ, ಚೇತನ ಮೊಳೆಯಬೇಕೆಂದರೆ ಪ್ರೀತಿಯ ಮಳೆ ಸುರಿಯಲೇಬೇಕು. ನಮ್ಮೆಲ್ಲ ಅಪಸವ್ಯಗಳನ್ನು ಅಂಥ ಪ್ರವಾಹ ಕೊಚ್ಚಿಕೊಂಡು ಬಂದು ಸೇರಬೇಕು. ಒಂದಷ್ಟು ದಿನ ಬಗ್ಗಡವಾಗಿಯಾದರೂ ಮನಸ್ಸು ತುಂಬಿಕೊಳ್ಳಬೇಕು. ಹೊಯ್ದಾಟಗಳೆಲ್ಲ ನಿಂತ ಮೇಲೆ ತಂತಾನೆ ಅವೆಲ್ಲವೂ ಮನದ ತಳಕ್ಕೆ ಸರಿದು ಮೇಲಿನ ತಿಳಿನೀರು ಮಿನುಗಬೇಕು. ಆಗಲೇ ನಮ್ಮ ವ್ಯಕ್ತಿತ್ವದೆಡೆಗೆ ಇತರರೂ ಆಕರ್ಷಿತರಾಗಲು ಸಾಧ್ಯ. ಪ್ರೀತಿಯ ಧಾರೆ ಮಾತ್ರವೇ ನಮ್ಮನ್ನು ಚೇತನಗೊಳಿಸಲು ಸಾಧ್ಯ. ಅದೊಂದೇ ನಮ್ಮನ್ನು ಲವಲವಿಕೆಯಿಂದ ಇಡಲು ಸಮರ್ಥ. ಮಾತ್ರವಲ್ಲ ಅಂಥ ಪ್ರೀತಿ ತುಂಬಿದ ಮನಸ್ಸಿನ ಸುತ್ತಲಿನ ವಾತಾವರಣವೂ ಸದಾ ಹಸಿರಾಗಿ ನಳನಳಿಸುತ್ತಿರುತ್ತದೆ. ಅಂಥ ಶಕ್ತಿ ಪ್ರೀತಿಗಿದೆ. ನಮ್ಮ ಮನಸೆಂಬ ಕೆರೆಯನ್ನು ಯಾವತ್ತಿಗೂ ಬತ್ತಲು ಬಿಡದೇ ಸದಾ ಪ್ರೀತಿಯ ಧಾರೆಯಲ್ಲಿ ತುಂಬಿಸಿಕೊಂಡಿದ್ದರೆ ಎಷ್ಟು ಚೆನ್ನ ಅಲ್ಲವೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.