ಬೈಟುಕಾಫಿ

ಕರ್ತವ್ಯವನ್ನು ಮರೆಯದಿರಿ

Published On :

ಇಪ್ಪತ್ತೈದರ ವಯೋವಾನದ ಅಪರಾಧಿಗೆ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿತು. ಅಪರಾಧಿ ಕೈಕಟ್ಟಿಕೊಂಡು ಮೌನವಾಗಿ ಶಿಕ್ಷೆಯನ್ನು ಒಪ್ಪಿಕೊಂಡ. ಪೊಲೀಸರು ಅವನ ಕೈಗೆ ಕೋಳ ತೊಡಿಸಿ ಎಳೆದುಕೊಂಡು ಹೋಗುತ್ತಿದ್ದಾಗ ಅವನು ತುಂಬಿದ ನ್ಯಾಯಲಯಕ್ಕೆಲ್ಲಾ ಕೇಳಿಸುವಂತೆ ಕೂಗಿಕೊಂಡ. 'ನನಗೆ ಶಿಕ್ಷೆಯನ್ನು ವಿಧಿಸಿದ ನ್ಯಾಯಧೀಶರ ಬಗ್ಗೆಯೂ ಹಾಗೂ ನನ್ನನ್ನು ಹಿಡಿದುಕೊಂಡು ಬಂದು ಕೋರ್ಟಿಗೆ ಹಾಜರು ಪಡಿಸಿದ ಪೊಲೀಸರ ಬಗ್ಗೆಯೂ ನಾನು ದೂರುವುದಿಲ್ಲ. ಇವರಿಬ್ಬರೂ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಆದರೆ ಇನ್ನಿಬ್ಬರನ್ನು ಮಾತ್ರ ನಾನು ಕ್ಷಮಿಸುವುದಿಲ್ಲ, ಅವರೇ ನನ್ನ ತಂದೆ ಮತ್ತು ತಾಯಿ ಅವರು ತಮ್ಮ ಕರ್ತವ್ಯವನ್ನು ಮಾಡಲಿಲ್ಲ. ಶಾಲೆಗೆ ಹೋಗುವ ವಯಸ್ಸಿನಲ್ಲಿ ಶಾಲೆಗೆ ಚಕ್ಕರ್ ಹೊಡೆದು ಗಂಟೆಗಟ್ಟಲೆ ಬೀದಿ ಸುತ್ತುವುದು, ನೋಡಬಾರದ ಸಿನಿಮಾಗಳನ್ನು ನೋಡಿದಾಗ ಅವರು ಬಯ್ಯಲಿಲ್ಲ. ನಾನು ನೋಡಿದ ಸಿನಿಮಾಗಳಲ್ಲಿ ಹಿಂಸೆ, ಕ್ರೌರ್ಯ, ಕಪಟ, ಸುಳ್ಳುಗಳೇ ತುಂಬಿದ್ದವು. ಕೆಟ್ಟದ್ದನ್ನು ನೋಡಬೇಡವೆಂದೂ ಹೇಳಲಿಲ್ಲ. ಯಾವ ರೀತಿಯ ಗೆಳೆಯರಿದ್ದಾರೆಂದು ತಿಳಿಯಲಿಲ್ಲ. ಅಧಮರ ಜೊತೆ ಸೇರಬೇಡವೆಂದು ಬುದ್ಧಿವಾದ ಮಾಡಲಿಲ್ಲ. ನಾನು ಏನು ಮಾಡುತ್ತಿದ್ದೇನೆ ಯಾವ ತರಹದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆಂದು ಒಮ್ಮೆಯೂ ಪ್ರಶ್ನಿಸಲಿಲ್ಲ. ಇವೆಲ್ಲದರ ಫಲವಾಗಿ ಇವತ್ತು ನಾನು ಅಪರಾಧಿಯಾಗಿ ಈ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ಪೂರ್ತಿ ತಪ್ಪು ನನ್ನದಲ್ಲ. ಪೋಷಕರ ಬೇಜವಾಬ್ದಾರಿಯ ಫಲವೇ ಈ ಶಿಕ್ಷೆ' ಎಂದು ಸಾರಿ ಹೇಳಿದನು.
ಮನುಷ್ಯರು ತಮ್ಮ ನಾಯಿಯ ಬಗ್ಗೆ ವಹಿಸುವಷ್ಟು ಕಾಳಜಿಯನ್ನು ತಮ್ಮ ಮಕ್ಕಳ ಬಗ್ಗೆ ವಹಿಸುವುದಿಲ್ಲ. ಇದು ಹೀಗಾಗಬಾರದು. ಮೇಲ್ಕಂಡ ಮಾತುಗಳು ಎಲ್ಲರಿಗೂ ಅನ್ವಯಿಸುತ್ತದೆ. ಎಳೆತನದಲ್ಲಿ ಮಕ್ಕಳನ್ನು ತಿದ್ದಿ ತೀಡಿ ಸರಿಯಾಗಿ ಶಿಕ್ಷಿಸದೇ ಸತ್ಪ್ರಜೆಗಳಾಗುತ್ತಾರೆ. ಹಾಗಲ್ಲದೇ ಬೇಕಾಬಿಟ್ಟಿ ಬಿಟ್ಟರೆ ಸಮಾಜ ಕಂಟಕರಾಗಿ ಬೆಳೆಯುತ್ತಾರೆ. ಹೆತ್ತವರೇ ಜಾಗ್ರತೆ. ನಿಮ್ಮ ಕರ್ತವ್ಯವನ್ನು ನೀವು ಸರಿಯಾಗಿ ಪೂರೈಸಿ.

-ಸಂಪಟೂರು ವಿಶ್ವನಾಥ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.