ಬೈಟುಕಾಫಿ

ಸ್ಟೈಲಿಶ್ ರಾಜಕಾರಣಿಗಳು

ಸ್ಟೈಲಿಶ್ ರಾಜಕಾರಣಿಗಳು
Published On :

ಜಯಲಲಿತಾ
ಕಡು ಬಣ್ಣದ, ಅಂಚಿನಲ್ಲಿ ಮಾತ್ರ ಕುಸುರಿ ಕಲೆಯಿರುವ ಸೀರೆಯುಡುವ ಜಯಲಲಿತಾ  ಡ್ರೆಸ್ಸಿಂಗ್ ಶೈಲಿಯಲ್ಲಿ  ತಮ್ಮದೇ ಆದ ಛಾಪು ಮೂಡಿಸಿದವರು. ರೇಷ್ಮೆ ಸೀರೆಗಳನ್ನೇ ಧರಿಸುವ ಜಯಲಲಿತಾ, ಸೆರಗನ್ನು ಪೂರ್ತಿಯಾಗಿ ಹೊದ್ದು, ಅದರ ಮೇಲೊಂದು ಶಾಲು ಧರಿಸುತ್ತಾರೆ. ದಿರಿಸಿನಲ್ಲಿ ಗಾಂಭೀರ್ಯವಿದ್ದರೂ ಚೆನ್ನೈನ ಆ ಸುಡುಸೆಖೆಯಲ್ಲಿ ಹೇಗೆ ಆರಾಮವೆನಿಸೀತು ಎಂಬುದು ಎಲ್ಲರ ಅಚ್ಚರಿ.!

ರೇಣುಕಾ ಚೌಧರಿ
ಸರಳತೆಯನ್ನೇ ಮೈಗೂಡಿಸಿಕೊಂಡಿರುವ ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ  ಸೀರೆಯುಟ್ಟರೂ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಾರೆ.

ರಮ್ಯಾ
ಮೂವತ್ತರ ಹರೆಯದಲ್ಲೇ ಇನ್ನೂ ನಾಯಕಿಯಾಗಿ ಬೇಡಿಕೆಯಲ್ಲಿದ್ದಾಗಲೇ ಗ್ಲಾಮರಸ್ ಜಗತ್ತಿನಿಂದ ದೂರಾಗಿ  ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೋಹಕ ತಾರೆ ರಮ್ಯಾ, ತನ್ನ ಬಣ್ಣದ ಬದುಕಿನಲ್ಲಿ ಧರಿಸಿದ ಎಲ್ಲ ದಿರಿಸುಗಳಿಗೂ ಟಾಟಾ ಹೇಳಿ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಗೌರವಯುತವಾಗಿ ತೋರಬೇಕೇಂಬ ಕಾರಣಕ್ಕೆ ಕಾಟನ್, ಖಾದಿ ಸೀರೆಗಳನ್ನು ಹಾಗೂ ಮಟ್ಟಸವಾಗಿ ಮೈಮುಚ್ಚುವ ಚೂಡಿದಾರ್‌ಗಳನ್ನು  ಧರಿಸಲು ಆರಂಭಿಸಿದರು.  ವಿಶೇಷವೆಂದರೆ ತುಂಡುಡುಗೆಗಿಂತ  ತುಂಬುಡುಗೆಯೇ ಹೆಚ್ಚು ಮಂದಿಯನ್ನು ಸೆಳೆಯಲು ಯಶಸ್ವಿಯಾಯಿತು.

ಅಖಿಲೇಶ್ ಯಾದವ್
ಪಕ್ಕದ್ಮನೆ ಹುಡುಗನಂತೆ ಕಾಣಿಸಿಕೊಳ್ಳುವ ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್, ಡ್ರೆಸ್ಸಿಂಗ್ ಸೆನ್ಸ್ ಮತ್ತು ಚಾಣಾಕ್ಷತನಕ್ಕೆ ಫುಲ್ ಮಾರ್ಕ್ಸ್ ಕೊಡಲೇ ಬೇಕು. ಯುವ ರಾಜಕಾರಣಿಯಾಗಿ ಮಿಂಚುತ್ತಿರುವ ಅಖಿಲೇಶ್ ತಮ್ಮ ಬಿಳಿ ಕುರ್ತಾ ಮೇಲೊಂದು ಕೋಟು ತೊಟ್ಟು ಸಿಂಪಲ್ಲಾಗಿ ಕಾಣಿಸಿಕೊಳ್ಳುತ್ತಾರೆ.

ಸಚಿನ್ ಪೈಲಟ್
26ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸುವ ಮೂಲಕ ಅತಿ ಕಿರಿಯ ಸಂಸದನೆಂಬ ಹೆಗ್ಗಳಿಕೆಗೆ ಪಾತ್ರರಾದ ಸಚಿನ್ ಪೈಲಟ್ ಹುಡುಗಿಯರ ಫೇವರಿಟ್ ರಾಜಕಾರಣಿ. ಸಾಂಪ್ರದಾಯಿಕ ರಾಜಸ್ತಾನಿ ಉಡುಗೆಯಲ್ಲಿ ಕಾಣಿಸಿಕೊಂಡರೂ, ಮಾಡರ್ನ್ ಡ್ರೆಸ್‌ಗಳಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡರೂ ಸಚಿನ್ ತಮ್ಮ ಸರಳತೆಯ ಮೂಲಕ ಆಕರ್ಷಣೆಯ ಕೇಂದ್ರವಾಗುತ್ತಾರೆ.

ಓಮರ್ ಅಬ್ದುಲ್ಲಾ
ಪಠಾಣಿ ಕುರ್ತಾ ಪೈಜಾಮಾ ತೊಟ್ಟು ಪಕ್ಕಾ ಕಾಶ್ಮೀರಿ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುವ  ಓಮರ್ ಅಬ್ದುಲ್ಲಾ ಅವರ ಸರಳತೆಯೇ ಪ್ಲಸ್ ಪಾಯಿಂಟ್. ಕಾಶ್ಮೀರದ ಅತೀ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಓಮರ್ ಅವರ ಸಿಂಪ್ಲಿಸಿಟಿ ಮತ್ತು ಜನರ ಜತೆ ವ್ಯವಹರಿಸುವ ರೀತಿಯೇ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದು.

ಸೋನಿಯಾ ಗಾಂಧಿ

ಇಟಲಿ ಮೂಲದವರಾಗಿದ್ದರೂ ಪತಿ ರಾಜೀವ್ ಗಾಂಧಿಯ ಮರಣಾನಂತರ ರಾಜಕೀಯಕ್ಕೆ ಧುಮುಕಿದ ಸೋನಿಯಾ ಗಾಂಧಿ ಕಾಣಿಸಿಕೊಂಡದ್ದು ಅಪ್ಪಟ ಭಾರತೀಯ ನಾರಿಯಾಗಿಯೇ. ರಾಜಕೀಯಕ್ಕೆ ಬಂದ ನಂತರ ಹ್ಯಾಂಡ್‌ಲೂಮ್ ಸೀರೆಯುಟ್ಟು ದೇಸೀ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸೋನಿಯಾ, ತನ್ನ ಉಡುಗೆ ಮತ್ತು ಸಿಂಪ್ಲಿಸಿಟಿಯ ಮೂಲಕ ರಾಜಕಾರಣದಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದರು.

ರಾಹುಲ್‌ಗಾಂಧಿ

ಮೋಸ್ಟ್ ಎಲಿಜಿಬಲ್ ಬ್ಯಾಚಲರ್, ಡಿಂಪಲ್ ಸ್ಮೈಲ್ ಮೂಲಕ ಯುವ ಮನಸ್ಸುಗಳನ್ನು ಆಕರ್ಷಿಸಿದ ಯುವರಾಜ ರಾಹುಲ್ ಗಾಂಧಿ, ಅಪ್ಪ ರಾಜೀವ್ ಗಾಂಧಿಯಂತೆಯೇ ಸುರಸುಂದರಾಂಗ. ಸಾಧಾರಣ ಜನರೊಡನೆ ಬೇಗನೆ ಬೆರೆತುಕೊಳ್ಳುವ, ಅಬ್ಬರವಿಲ್ಲದೆ ಪ್ರಚಾರದಲ್ಲಿ ತೊಡಗಿಕೊಳ್ಳುವ  ಈ ಕಾಂಗ್ರೆಸ್ ಅಭ್ಯರ್ಥಿ ಕುರ್ತಾ ಪೈಜಾಮದಲ್ಲಿಯೂ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳುತ್ತಾರೆ.

-ಕೀರ್ತಿ ಕೋಲ್ಗಾರ್
-ನವೀನ್ ಸಾಗರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.