ಅಪ್ಪ ಮಕ್ಕಳ ಜುಗಲ್ ಬಂದಿ

ವಂಶಪಾರಂಪರ್ಯ ರಾಜಕಾರಣ ಕಾಂಗ್ರೆಸ್ಗಷ್ಟೇ ಮೀಸಲು ಎಂಬಂತಾಗಿತ್ತು. ಆದರೀಗ ಕಾಲ ಬದಲಾಗಿದೆ. ಯಾವ ಪಕ್ಷಗಳು, ವ್ಯಕ್ತಿಗಳು ವಿರೋಧಿಸುತ್ತ ಬಂದಿದ್ದರೋ ಅಂಥವರೇ ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ. ಇದರಲ್ಲಿ ರಾಜ್ಯವೂ ಹೊರತಲ್ಲ.
ವಂಶಪಾರಂಪರ್ಯ ರಾಜಕಾರಣಕ್ಕೆ ಕಾಂಗ್ರಸ್ ಹೆಸರುವಾಸಿಯಾಗಿದೆ. ಹಿಂದೆಲ್ಲ ವಿಪಕ್ಷಗಳು ಕಾಂಗ್ರೆಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಹೊರಿಸಿ ಚುನಾವಣ ಪ್ರಚಾರದಲ್ಲಿ ಒಂದು ಅಸ್ತ್ರವಾಗಿಯೂ ಬಳಸಿಕೊಳ್ಳುತ್ತಿದ್ದವು. ಆದರೀಗ ಕಾಲ ಬದಲಾಗಿದೆ. ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣವನ್ನು ಕಾಣಬಹುದು.
ಕೆಲವು ಕುಟುಂಬಗಳಲ್ಲಿ ಒಬ್ಬರು ಒಂದೊಂದು ಪಕ್ಷವನ್ನು ಪ್ರತಿನಿಧಿಸಿದರೆ, ಒಂದೇ ಪಕ್ಷವನ್ನು ಪ್ರತಿಸಿಧಿಸುವವರೂ ಇದ್ದಾರೆ. ಹಾಗೆಯೇ ಪ್ರತಿಸ್ಪರ್ಧಿಗಳಾಗಿಯೂ ವೈರತ್ವ ಬೆಳೆಸಿಕೊಂಡಿರುವುದನ್ನು ಕಾಣಬಹುದು. ಗಂಡ ಒಂದು ಪಾರ್ಟಿಯಾದರೆ, ಹೆಂಡತಿ ಅಥವಾ ಮಗ ಮತ್ತೊಂದು ಪಾರ್ಟಿ. ಇಂತಹ ಕುಟುಂಬ ರಾಜಕಾರಣವನ್ನು ಕರ್ನಾಟಕದಲ್ಲೂ ಕಾಣಬಹುದು.
ಹೈದರಾಬಾದ್-ಕರ್ನಾಟಕದಲ್ಲಿ ಕಾಂಗ್ರೆಸ್ನ ಫ್ಯಾಮಿಲಿ ಪಾಲಿಟಿಕ್ಸ್ ಜೋರಾಗಿದೆ. ಈ ಬಾರಿಯ ಲೋಕಸಭೆ ಟಿಕೆಟ್ ಹಂಚಿಕೆಯೇ ಅದನ್ನು ಸಾರಿ ಹೇಳುತ್ತಿದೆ. ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಶಾಸಕರ ತಂದೆಗೇ ಲೋಕಸಭೆ ಟಿಕೆಟ್ ನೀಡಲಾಗಿದೆ. ರಾಯಚೂರಿಲ್ಲಿ ತಂದೆ ಶಾಸಕ. ಮಗನಿಗೆ ಲೋಕಸಭೆ ಟಿಕೆಟ್. ಕೊಪ್ಪಳದಲ್ಲಿ ಮಗ ಶಾಸಕ. ಅಪ್ಪ ಸಂಸದರಾಗಲು ಹೊರಟಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜೆ.ಎಚ್. ಪಟೇಲ್ - ಮಾಜಿ ಮುಖ್ಯಮಂತ್ರಿ (ಜೆಡಿಎಸ್)
ಮಹಿಮಾ ಪಟೇಲ್ - (ಮಗ)
ಭೈರೇಗೌಡ - ಮಾಜಿ ಸಚಿವರು
ಕೃಷ್ಣಭೈರೇಗೌಡ - ಶಾಸಕರು,
ಸಚಿವರು (ಕಾಂಗ್ರೆಸ್)
ಎಚ್. ಡಿ. ದೇವೇಗೌಡ - ಮಾಜಿ ಮುಖ್ಯಮಂತ್ರಿ (ಜೆಡಿಎಸ್)
ಎಚ್.ಡಿ. ರೇವಣ್ಣ - ಶಾಸಕ (ಜೆಡಿಎಸ್)
ಎಚ್.ಡಿ. ಕುಮಾರ ಸ್ವಾಮಿ - ಮಾಜಿ ಮುಖ್ಯಮಂತ್ರಿ (ಜೆಡಿಎಸ್)
ಲೇಔಟ್ ಕೃಷ್ಣಪ್ಪ (ಅಪ್ಪ) - ಶಾಸಕ (ಕಾಂಗ್ರೆಸ್)
ಪ್ರಿಯಾ ಕೃಷ್ಣ (ಮಗ) - ಶಾಸಕ (ಕಾಂಗ್ರೆಸ್)
ಎಸ್. ಬಂಗಾರಪ್ಪ - ಮಾಜಿ ಮುಖ್ಯಮಂತ್ರಿ
ಕುಮಾರ ಬಂಗಾರಪ್ಪ - (ಕಾಂಗ್ರೆಸ್)
ಮಧು ಬಂಗಾರಪ್ಪ - (ಜೆಡಿಎಸ್)
ಗೀತಾ ಶಿವರಾಜ್ಕುಮಾರ್ - (ಜೆಡಿಎಸ್)
ಧರ್ಮಸಿಂಗ್ - ಮಾಜಿ ಮುಖ್ಯಮಂತ್ರಿ (ಕಾಂಗ್ರೆಸ್)
ಡಾ. ಅಜಯ್ಸಿಂಗ್ - ಜೇವರ್ಗಿ ಶಾಸಕ (ಮಗ)
ಜಾಲಪ್ಪ (ಕಾಂಗ್ರೆಸ್)
ಜೆ. ನರಸಿಂಹಸ್ವಾಮಿ
ಯಡಿಯೂರಪ್ಪ - ಮಾಜಿ ಮುಖ್ಯಮಂತ್ರಿ
ವೈ. ರಾಘವೇಂದ್ರ - ಮಾಜಿ ಸಂಸದ
ಆರ್. ವಿ. ದೇಶಪಾಂಡೆ - ಸಚಿವರು
ಪ್ರಶಾಂತ್ ದೇಶಪಾಂಡೆ - ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (ಮಗ)
ಎಸ್. ಆರ್. ಬೊಮ್ಮಾಯಿ - ಮಾಜಿ ಮುಖ್ಯಮಂತ್ರಿ (ಜನತಾ ದಳ)
ಬಸವರಾಜ್ ಬೊಮ್ಮಾಯಿ - ಮಾಜಿ ಸಚಿವರು (ಬಿಜೆಪಿ)
ಅಜೀಜ್ ಸೇಠ್ - ಮಾಜಿ ಸಚಿವರು
ತನ್ವೀರ್ ಸೇಠ್ - ಮಾಜಿ ಶಾಸಕ
ಚೆನ್ನಿಗಪ್ಪ - ಮಾಜಿ ಸಚಿವರು (ಜೆಡಿಎಸ್)
ಗೌರಿಶಂಕರ್ - ಮಾಜಿ ಶಾಸಕ (ಜೆಡಿಎಸ್)
ಮಲ್ಲಿಕಾರ್ಜುನ ಖರ್ಗೆ - ಮಾಜಿ ಕೇಂದ್ರ ಸಚಿವರು
ಪ್ರಿಯಾಂಕ ಖರ್ಗೆ - ಚಿತ್ತಾಪುರ ಶಾಸಕ (ಮಗ)
ಮನೋರಮ ಮಧ್ವರಾಜ್ -ಮಾಜಿ ಸಚಿವರು
ಪ್ರಮೋದ್ ಮಧ್ವರಾಜ್ - ಮಾಜಿ ಶಾಸಕ
ಪ್ರಕಾಶ್ ಹುಕ್ಕೇರಿ - ಸದ್ಯ ಸಚಿವರು
ಗಣೇಶ್ ಹುಕ್ಕೇರಿ - ಎಂಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. (ಮಗ)
ವೀರಪ್ಪ ಮೊಯ್ಲಿ - ಕೇಂದ್ರ ಸಚಿವರು
ಹರ್ಷ ಮೊಯ್ಲಿ - ಟಿಕೆಟ್ ಆಕಾಂಕ್ಷಿಯಾಗಿದ್ದರು. (ಮಂಗಳೂರು ಕ್ಷೇತ್ರ) (ಮಗ)
ಕಟ್ಟಾಸುಬ್ರಹ್ಮಣ್ಯನಾಯ್ಡು - ಮಾಜಿ ಸಚಿವರು
ಜಗದೀಶ್ ನಾಯ್ಟು - ಕಾರ್ಪೊರೇಟರ್ (ಬಿಜೆಪಿ)
ವೆಂಕಟೇಶ್ ನಾಯಕ್ - ಶಾಸಕರು (ಕಾಂಗ್ರೆಸ್)
ಬಿ.ವಿ. ನಾಯಕ್ - ರಾಯಚೂರು ಅಭ್ಯರ್ಥಿ (ಮಗ)
ಶಾಮನೂರು ಶಿವಶಂಕರಪ್ಪ - ಸಚಿವರು (ಕಾಂಗ್ರೆಸ್)
ಎಸ್.ಎಸ್. ಮಲ್ಲಿಕಾರ್ಜುನ್ - ಶಾಸಕರು (ಮಗ)
ಸಿ.ಎಂ. ಉದಾಸಿ - ಮಾಜಿ ಸಚಿವ
ಶಿವಕುಮಾರ ಉದಾಸಿ -ಹಾವೇರಿ ಕ್ಷೇತ್ರದ ಅಭ್ಯರ್ಥಿ (ಬಿಜೆಪಿ)
ಮಾರ್ಗರೇಟ್ ಆಳ್ವ - ರಾಜ್ಯಪಾಲರು
ನಿವೇದಿತ್ ಆಳ್ವ - (ಮಗ) (ಕಾಂಗ್ರಸ್)
ಗುಂಡೂರಾವ್ ಮಾಜಿ ಮುಖ್ಯಮಂತ್ರಿ (ಕಾಂಗ್ರೆಸ್)
ದಿನೇಶ್ಗುಂಡೂರಾವ್ ಶಾಸಕ, ಸಚಿವರು (ಕಾಂಗ್ರೆಸ್)
ಗುರುಪಾದಪ್ಪ ನಾಗಮಾರಪಲ್ಲಿ - ಬೀದರ್ ಶಾಸಕ (ಅಪ್ಪ)
ಸೂರ್ಯಕಾಂತ ನಾಗಮಾರಪಲ್ಲಿ - ಎಂಪಿ ಟೆಕೆಟ್ ಆಕಾಂಕ್ಷಿಯಾಗಿದ್ದರು. (ಮಗ)
ಬಸವರಾಜ್ ಹಿಟ್ನಾಳ್ - ಕೊಪ್ಪಳ ಅಭ್ಯರ್ಥಿ
ರಾಘವೇಂದ್ರ ಬಸವರಾಜ ಹಿಟ್ನಾಳ್-ಶಾಸಕ (ಮಗ)
-ಆರ್.ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


