ಒಂದೇಟು
2008ರಲ್ಲಿ ಫೇಸ್ಬುಕ್ಗೆ ಸೇರಿದ ಒಬ್ಬ ಹುಡುಗನಿಗೆ 154 ಫ್ರೆಂಡ್ಸ್. 2012ರಲ್ಲಿ ಫೇಸ್ಬುಕ್ಗೆ ಸೇರಿದ ಅವನ ತಂಗಿಗೆ 1154 ಫ್ರೆಂಡ್ಸ್!
ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ಅಭ್ಯಾಸ ಹುಡುಗಿಯರಿಗಿದ್ದರೆ ಅವರಿಗೆ ಬಾಯ್ಫ್ರೆಂಡ್ ಇಲ್ಲ ಅಂತ ಅರ್ಥ.
ನಿಮ್ಮ ಹಾದಿಯಲ್ಲಿ ಎಲ್ಲವೂ ಸಿಗುತ್ತಿದೆ ಎಂದಾದರೆ ನೀವು ತಪ್ಪು ದಾರಿಯಲ್ಲಿ ಹೊರಟಿದ್ದೀರಿ.
ಯಾವತ್ತೂ ಓಪನ್ ಮೈಂಡ್ ಆಗಬೇಡಿ, ಮೆದುಳು ಕೆಳಗೆ ಬೀಳಬಹುದು.
ಬೆಳಕಿನ ವೇಗ ಎಲ್ಲರಿಗೂ ಗೊತ್ತು. ಕತ್ತಲಿನ ವೇಗ ಯಾರಿಗಾದರೂ ಗೊತ್ತಾ?
ಎಂಎಸ್ ಎಂಎಸ್!
ಕಂಪ್ಯೂಟರ್ ಕ್ಲಾಸ್ ನಡೆಯುತ್ತಿತ್ತು.
ಟೀಚರ್: ಯಾವುದಾದ್ರೂ ಮೈಕ್ರೋಸಾಫ್ಟ್ ಪ್ರಾಡಕ್ಟ್ಗಳನ್ನು ಹೇಳಿ.
ಫಂಟಾ: ಎಂಎಸ್ ವರ್ಡ್.
ಬಂಟಾ: ಎಂಎಸ್ ಎಕ್ಸೆಲ್.
ಸೊಂಟಾ: ಎಂಎಸ್ ಪವರ್ಪಾಯಿಂಟ್.
ಕೋಲ್ಯ: ಎಂಎಸ್ ಧೋನಿ!
ನಿಜವಾದ ಕುರುಡ!
ಕೋಲ್ಯ, ಕೋಲ್ಯಿಣಿ ದೇವಸ್ಥಾನಕ್ಕೆ ಹೋಗಿದ್ದರು. ಹಿಂದಿರುವಾಗ ಕೋಲ್ಯಿಣಿ ಅಲ್ಲಿದ್ದ ಭಿಕ್ಷುಕನಿಗೆ 1000 ರು. ನೋಟು ಹಾಕಿದಳು.
ಕೋಲ್ಯ: ಯಾಕೆ ಅಷ್ಟೊಂದು ದೊಡ್ಡಮೊತ್ತದ ಹಣವನ್ನು ಭಿಕ್ಷೆ ಹಾಕ್ದೆ? ಅವನು ಕುರುಡ ಅಲ್ಲ ಕಣೆ, ಕುರುಡನ ರೀತಿ ಆ್ಯಕ್ಟ್ ಮಾಡ್ತಿದ್ದಾನಷ್ಟೇ.
ಕೋಲ್ಯಿಣಿ: ಅದು ನನಗೂ ಗೊತ್ತು. ಅವನು ನನಗೆ 'ಮೇಡಂ ನೀವು ಐಶ್ವರ್ಯಾ ರೈ ಥರ ಕಾಣ್ತಿದ್ದೀರ' ಅಂತ ಹೇಳ್ದ.
ಕೋಲ್ಯ: ಓಹ್, ಹೌದಾ? ಹಾಗಾದ್ರೆ ಅವನು ನಿಜಕ್ಕೂ ಕುರುಡನೇ ಇರ್ಬೇಕು!
=
ಕೋಲ್ಯ ವೆಸ್ಟ್ಇಂಡೀಸ್ಗೆ ಹೋಗಿದ್ದ. ಅಲ್ಲೊಂದು ಪಾರ್ಟಿಗೆ ಒಬ್ಬ ಮನುಷ್ಯ ಬೆತ್ತಲೆಯಾಗಿ ಬಂದಿದ್ದ. ಕೋಲ್ಯ ಬಹುಶಃ ಆತ ಬ್ಲ್ಯಾಕ್ಡ್ರೆಸ್ ಹಾಕ್ಕೊಂಡೇ ಬಂದಿದ್ದಾನೆ ಅಂತ ಭಾವಿಸಿದ. ಸೀದಾ ಅವನ ಹತ್ತಿರ ಹೋಗಿ ಕೇಳಿದ, 'ನಿಮ್ಮ ಡ್ರೆಸ್ ಚೆನ್ನಾಗಿದೆ. ಆದ್ರೆ, ಯಾಕೆ ಟೈ ಅನ್ನು ಕೆಳಗೆ ಕಟ್ಕೊಂಡಿದ್ದೀರಿ?'.
=
ಕೋಲ್ಯಿಣಿ: ನಿಮ್ಮ ಬೆಸ್ಟ್ ಫ್ರೆಂಡ್ ಜತೆ ಮಲಗಿದ್ರೆ ನಿಮಗೇನನ್ಸುತ್ತೆ?
ಕೋಲ್ಯ: 'ಲೆಸ್ಬಿಯನ್' ಅಂತ ಅನ್ಸುತ್ತೆ.
=
ಕೋಲ್ಯ ಟೆಲಿಫೋನ್ ಬೂತೊಳಗೆ ಹೊಕ್ಕಿದ್ದ. ಹೊರಗೊಬ್ಬಳು ಹುಡುಗಿ ಅರ್ಧ ಗಂಟೆಯಿಂದ ಕಾಯುತ್ತಿದ್ದಳು.
ಹುಡುಗಿ: ರೀ ಅರ್ಧ ಗಂಟೆಯಿಂದ ನೋಡ್ತಿದ್ದೀನಿ. ಒಂದು ಮಾತಾಡ್ತಿಲ್ಲ, ಬರೀ ಫೋನ್ ಇಟ್ಕೊಂಡ್ ಪೋಸ್ ಕೊಡ್ತಿದ್ದೀರ. ಬರ್ರೀ ಹೊರಗೆ.
ಕೋಲ್ಯ: ತಡಿರ್ರೀ, ಆ ಕಡೆಯಿಂದ ನನ್ನ ಹೆಂಡ್ತಿ ಮಾತಾಡ್ತಿದ್ದಾಳೆ.
=
ಕೋಲ್ಯನಿಗೆ ಮ್ಯಾನೇಜರ್ ಆಗಿ ಪ್ರಮೋಷನ್ ಸಿಕ್ತು. ಹೆಂಡ್ತಿಗೆ ಡಿಫರೆಂಟಾಗಿ ಸರ್ಪ್ರೈಸ್ ಕೊಡ್ಬೇಕು ಅಂತ ಕೂಡಲೇ ಒಂದು ಮೆಸೇಜ್ ಕಳುಹಿಸಿದ; 'ಇವತ್ತು ರಾತ್ರಿ ನೀನು ಮ್ಯಾನೇಜರ್ ಜತೆ ಮಲಗ್ತಿದ್ದೀಯ'.
ನಿಶ್ಶಬ್ದಕೋಶ
ಸೊಳ್ಳೆ: ಪ್ರಕೃತಿ ಸೃಷ್ಟಿಸಿದ ಎಫ್ಎಂ.
ಪುಕ್ಕ: ಹಕ್ಕಿಗಳಲ್ಲಿ ಇರುವ ಗರಿ. ರೆಕ್ಕೆ ಇರುವ ಫ್ಯಾನ್ಗಳಲ್ಲಿ ಇದಿರುವುದಿಲ್ಲ.
ಫಿಕ್ಸಿಂಗ್: ಕ್ರಿಕೆಟ್ಗೆ ಸಂಬಂಧಿಸಿದ ಪದ.
ವಾಚ್ಮನ್: ಕೈಗಡಿಯಾರ ಹೊಂದಿರುವಂಥ ವ್ಯಕ್ತಿ.
ಡ್ರೈವಿಂಗ್: ಒಣಗಿದ ರೆಕ್ಕೆ!
ಹರಿದಕೋಟು
= ನಾನು ಬದುಕುವುದಕ್ಕಾಗಿ ಚೆಂಡಿಗೆ ಹೊಡೆಯುತ್ತೇನೆ. ಅದು ಪ್ರತಿಯಾಗಿ ಬಂದಾಗ ಪಾಠವನ್ನೂ ಕಲಿಯುತ್ತೇನೆ.
= ನಾನು ನರ್ವಸ್ ಆದಾಗಲೆಲ್ಲ ದೈಹಿಕ ನೋವುಗಳು ಮರೆತುಹೋಗುತ್ತವೆ. ಪ್ರ್ಯಾಕ್ಟೀಸ್ಗೆ ವಿಪರೀತ ಶ್ರಮ ಸುರಿಯುತ್ತೇನೆ.
- ಮಾರಿಯಾ ಶರಾಪೋವಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

