

ಬೀಜಿಂಗ್: ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆಯಾಗುವ ಭಾರತದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಇಷ್ಟು ದಿನ ಭಾರತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾ ಇದೀಗ ಒತ್ತಡಕ್ಕೆ ಮಣಿದಿದೆ. ಅಲ್ಲದೆ ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆ(ಎನ್‍ಎಸ್‍ಜಿ) ವಿಚಾರದಲ್ಲಿ ತಾನು ರಚನಾತ್ಮಕ ಪಾತ್ರವಹಿಸುವುದಾಗಿ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು, ಭಾರತ ಮತ್ತು ಪಾಕಿಸ್ತಾನಕ್ಕೆ ಒಕ್ಕೂಟದ ಸದಸ್ಯತ್ವ ನೀಡುವ ಸಂಬಂಧ ಎನ್‍ಎಸ್‍ಜಿ ಸದಸ್ಯರು ಮೂರು ಸುತ್ತಿನ ಅನಧಿಕೃತ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ನೂತನ ಸದಸ್ಯರ ಸೇರ್ಪಡೆ ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರವಹಿಸಲಿದ್ದು, ಈ ಸಂಬಂಧ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದೆ. ಎನ್ ಎಸ್ ಜಿ ಸದಸ್ಯತ್ವಕ್ಕೆ ಭಾರತ ನಡೆಸುತ್ತಿರುವ ಯತ್ನಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ಚೀನಾವು ಧನಾತ್ಮಕ ಪಾತ್ರ ವಹಿಸಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ.
ಜೈಶ೦ಕರ್ ರೆ ಹೊಣೆ
ಏತನ್ಮಧ್ಯೆ, ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಯತ್ನಗಳಿಗೆ ಬೆಂಬಲ ಕ್ರೋಢೀಕರಿಸುವ ಸಲುವಾಗಿ ನಾಳೆ ನಡೆಯಲಿರುವ ಎನ್‍ಎಸ್‍ಜಿ ರಾಷ್ಟ್ರಗಳ ಸಭೆಗೆ ಒಂದು ದಿನ ಮುಂಚಿತವಾಗಿಯೇ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಬುಧವಾರ ಸಿಯೋಲ್‍ಗೆ ತೆರಳಿದರು. ಎನ್‍ಎಸ್‍ಜಿ ಸದಸ್ಯತ್ವ ಪಡೆಯಲು 48 ಸದಸ್ಯರಾಷ್ಟ್ರಗಳ ಬೆ೦ಬಲ ಪಡೆಯುವ ನಿಟ್ಟಿನಲ್ಲಿ ವಿದೇಶಾ೦ಗ ಕಾರ್ಯದಶಿ೯ ಜೈಶ೦ಕರ್ ಸಿಯೋಲ್‍ಗೆ ಪ್ರವಾಸ ತೆರಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಜೂನ್ 23, 24ರ೦ದು ಮುಖ್ಯಸಭೆ ನಡೆಯಲಿದೆ.
ಎನ್‍ಎಸ್‍ಜಿ ಸದಸ್ಯ ರಾಷ್ಟ್ರಗಳ ಸಭೆ ನಡೆಸಿ ಅ೦ತಿಮ ಹ೦ತದ ಒತ್ತಡ ಹೇರಲು ಭಾರತ ನಿಧ೯ರಿಸಿದ್ದು, ಚೀನಾ ಹೊರತು ಪಡಿಸಿ ಉಳಿದ ರಾಷ್ಟ್ರಗಳ ಬೆ೦ಬಲ ಗಳಿಸುವ ನಿಟ್ಟಿನಲ್ಲಿ ರಾಜತಾ೦ತ್ರಿಕ ಮಾಗ೯ ಅನುಸರಿಸಲು ಭಾರತ ಮು೦ದಾಗಿದೆ. ವಿದೇಶಾ೦ಗ ಇಲಾಖೆಯ ಅ೦ತಾರಾಷ್ಟ್ರೀಯ ಭದ್ರತಾ ವಿಭಾಗದ ಮುಖ್ಯಸ್ಥ ಅಮನ್‍ದೀಪ್‍ಸಿ೦ಗ್ ಗಿಲ್ ಈಗಾಗಲೇ ಸಿಯೋಲ್‍ನಲ್ಲಿದ್ದು, ಹಲವು ರಾಷ್ಟ್ರಗಳ ಪ್ರತಿನಿಧಿಗಳೊ೦ದಿಗೆ ಮಾತುಕತೆ ನಡೆಸುತ್ತಿದ್ದಾರೆ.