Andhra, Karnataka

ಸ್ಟಿಂಗ್ ಆಪರೇಷನ್: ಕಾಂಗ್ರೆಸ್ ಮೊದಲ ವಿಕೆಟ್ ಪತನ, ಕೃಪಾ ಆಳ್ವಾ ಪಕ್ಷದಿಂದ ಉಚ್ಛಾಟನೆ
ಕೃಪಾ ಆಳ್ವಾರನ್ನ ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಲಾಗಿದೆ. ಸ್ಟಿಂಗ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ 6 ವರ್ಷಗಳ ಕಾಲ ಕೃಪಾ ಆಳ್ವಾ ಅವರನ್ನ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.

ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲವೇ? ಖಜಾನೆ ಖಾಲಿಯಾಗಿದೆಯೇ? ಧೈರ್ಯವಿದ್ದರೆ ಸ್ಪಷ್ಟವಾಗಿ ಒಪ್ಪಿಕೊಳ್ಳಿ; ಷರತ್ತುಗಳ ಜಾಲ ಹೆಣೆದು ರೈತರನ್ನು ಸತಾಯಿಸಬೇಡಿ..!
ಪುಡಿಗಾಸಿನ ಪರಿಹಾರಕ್ಕೆ 17 ಷರತ್ತುಗಳು; ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ತಪ್ಪದ ಆಪತ್ತು. ರಾಜ್ಯದಲ್ಲಿ ಬರದ ಬೇಗೆಯಲ್ಲಿ ಅನ್ನದಾತರು ಕಂಗಾಲಾಗಿದ್ದಾರೆ. ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ನೆರವಾಗಬೇಕಾದ ಕಾಂಗ್ರೆಸ್ ಸರ್ಕಾರ ಘೋಷಿಸಿರುವುದು ಕೇವಲ ರೂ.2,500 ಪರಿಹಾರ.

ರಾಜ್ಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ: ನಿಯಮ ಉಲ್ಲಂಘಿಸಿದ 24 ಕುಡಿಯುವ ನೀರಿನ ಘಟಕಗಳಿಗೆ ನೋಟಿಸ್..!
ರಾಜ್ಯದಾದ್ಯಂತ 45 ಪ್ಯಾಕೇಜ್ಡ್ ಕುಡಿಯುವ ನೀರಿನ ತಯಾರಿಕಾ ಘಟಕಗಳನ್ನು ಪರಿಶೀಲಿಸಲಾಗಿದೆ. ಪ್ರಯೋಗಾಲಯ ಪರೀಕ್ಷೆಗಾಗಿ 32 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವಿವಿಧ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 24 ಘಟಕಗಳಿಗೆ ನೋಟಿಸ್ ನೀಡಲಾಗಿದೆ.

ಸಿಎಂ ಸಭೆ ವಿಫಲ: ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಆಕ್ರೋಶ; ಹೋರಾಟ ತೀವ್ರಗೊಳಿಸುವ ಎಚ್ಚರಿಕೆ..!
ರೈತರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಅವರು, ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

BIMS ಆಸ್ಪತ್ರೆಗೆ ಉಪ ಲೋಕಾಯುಕ್ತ ದಿಢೀರ್ ದಾಳಿ: ಲಕ್ಷಾಂತರ ರೂ ಮೌಲ್ಯದ ಅವಧಿ ಮುಗಿದ ರೇಬೀಸ್ ಲಸಿಕೆ ಪತ್ತೆ; ಅಧಿಕಾರಿಗಳಿಗೆ ತರಾಟೆ..!
ಈ ವೇಳೆ ರೇಬೀಸ್‌ನಂತಹ ಗಂಭೀರ ಕಾಯಿಲೆಗೆ ತುತ್ತಾದ ರೋಗಿಗಳಿಗೆ ಈಗಾಗಲೇ ಅವಧಿ ಮುಗಿದಿರುವ ಲಸಿಕೆಗಳನ್ನೇ ನೀಡುತ್ತಿರುವುದು ಕಂಡುಬಂದಿದೆ.

ಇನ್ನು ಮೂರು ವರ್ಷ ಖಾಸಗಿ ಪಿಯು ಕಾಲೇಜು ಸ್ಥಾಪನೆಗೆ ಅನುಮತಿಯಿಲ್ಲ: ರಾಜ್ಯ ಸರ್ಕಾರ ನಿರ್ಧಾರ
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದ್ದು, 15 ದಿನಗಳೊಳಗೆ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರನ್ನು ಆಹ್ವಾನಿಸಿದೆ.

2027ನೇ ಸಾಲಿನ SSLC, ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ಇಂದು ಪ್ರಕಟವಾದ ಅಂತಿಮ ವೇಳಾಪಟ್ಟಿ ಪ್ರಕಾರ, ಎಸ್ಎಸ್ಎಲ್ ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31ರ ವರೆಗೆ ನಡೆಯಲಿದೆ.

'ಸತೀಶ್ ಜಾರಕಿಹೊಳಿ ಬಳಿ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ, ಕರ್ನಾಟಕದಲ್ಲಿ SIR ಪಿತೂರಿ ನಡೆದಿದೆ': ಪ್ರಿಯಾಂಕ್ ಖರ್ಗೆ; Video
ರಾಜ್ಯದ ಮತದಾರರ ಪಟ್ಟಿಯಿಂದ ಭಾರಿ ಸಂಖ್ಯೆಯಲ್ಲಿ ಹೆಸರುಗಳನ್ನು ತೆಗೆದುಹಾಕಿರುವ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

'ಕರ್ನಾಟಕದಲ್ಲಿ SIR ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ; ಬೇರೆ ರಾಜ್ಯಗಳ ಬಗ್ಗೆ ನಮ್ಮ ಆಕ್ಷೇಪ': ಸಚಿವ ಸತೀಶ್ ಜಾರಕಿಹೊಳಿ ವ್ಯತಿರಿಕ್ತ ಹೇಳಿಕೆ; Video
ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಿರುವುದು ಸಮರ್ಥನೀಯ ಎಂದು ಹೇಳಿರುವ ಅವರು, ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

