Business

ಮಹಾ ಕುಸಿತ: ಐಟಿಸಿ ಷೇರು ಮೌಲ್ಯ ಕುಸಿತ, ಎಲ್ ಐಸಿಗೆ ಬರೊಬ್ಬರಿ 8 ಸಾವಿರ ಕೋಟಿ ನಷ್ಟ
ಸಿಗರೇಟ್ ಮೇಲಿನ ಸೆಸ್ ಹೆಚ್ಚಳ ವಿಚಾರ ಮಂಗಳವಾರ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು, ಕೇವಲ ಒಂದು ದಿನದಲ್ಲಿ ಎಲ್ ಐಸಿ ಸಂಸ್ಥೆ ಬರೊಬ್ಬರಿ 8150 ಕೋಟಿ ರು.ಗಳ ನಷ್ಟ ಅನುಭವಿಸಿದೆ.

ಇನ್ಫೋಸಿಸ್ ಬಿಟ್ಟು ತಪ್ಪು ಮಾಡಿದೆ: ಸಂಸ್ಥಾಪಕ ನಾರಾಯಣ ಮೂರ್ತಿ
ಹೆಸರಾಂತ ಸಾಫ್ಟ್ವೇರ್ ಕಂಪನಿ ಇನ್ಫೋಸಿಸ್ ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ತಪ್ಪು ಮಾಡಿದೆ ಎಂದು ಸಂಸ್ಥೆಯ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.

ಯೂರೋ-4 ಎಫೆಕ್ಟ್: ಹಿಂದೂಸ್ತಾನ್ ಪೆಟ್ರೋಲಿಯಂನಿಂದ 61 ಸಾವಿರ ಕೋಟಿ ಹೂಡಿಕೆ!
ಪ್ರಸ್ತುತ ಚಾಲ್ತಿಯಲ್ಲಿರುವ ಯೂರೋ-4 ಮಾನದಂಡ ನಿರ್ವಹಣೆಗಾಗಿ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ 61 ಸಾವಿರ ಕೋಟಿ ರು.ಹೂಡಿಕೆ ಮಾಡುತ್ತಿರುವುದಾಗಿ ಹೇಳಿದೆ.

ಸೂಪರ್ ಫಾಸ್ಟ್: ಬಿಎಸ್ ಎನ್ ಎಲ್ ನಿಂದ 1000MBPS ಮೆಗಾಸ್ಪೀಡ್ ಇಂಟರ್ ನೆಟ್!
ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಅಲ್ಟ್ರಾಸ್ಪೀಡ್ ಇಂಟರ್ ನೆಟ್ ಸೇವೆಯನ್ನು ನೀಡಲು ಮುಂದಾಗಿದೆ.

ಗಗನಕ್ಕೇರಿದ ಟೊಮಾಟೋ ದರ: ಕೆಜಿಗೆ 80 ರಿಂದ 100 ರು.
ಚಿಲ್ಲರೆ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಟೊಮಾಟೋ ದರ ಮುಗಿಲು ಮುಟ್ಟಿದ್ದು, ಒಂದು ಕೆಜಿ ಟೊಮಾಟೋ ದರ ಬರೊಬ್ಬರಿ 80-100 ರು.ಗಳಿಗೇರಿದೆ ಎಂದು ತಿಳಿದುಬಂದಿದೆ.

ಖಾಸಗಿ ಭದ್ರತಾ ವ್ಯವಹಾರಕ್ಕೆ ಬಾಬಾ ರಾಮ್ ದೇವ್; 'ಸುರಕ್ಷಾ ಪರಾಕ್ರಮ' ಸಂಸ್ಥೆಗೆ ಚಾಲನೆ!
ದಿನಬಳಕೆ ವಸ್ತುಗಳ ತಯಾರಿಕೆ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಹೊಸದೊಂದು ಸವಾಲಿಗೆ ಕೈಹಾಕಿದ್ದು, ತಮ್ಮದೇ ಪ್ರತ್ಯೇಕ ಖಾಸಗಿ ಭದ್ರತಾ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ನಿಜ: ಜಿಯೋದಿಂದ ದೂರು ದಾಖಲು!
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.

ಶೇ.50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ: ರವಿಶಂಕರ್ ಪ್ರಸಾದ್
ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿದ ಬಳಿಕ ಶೇ.50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಜಿಎಸ್ ಟಿ ಗೊಂದಲಕ್ಕೆ ಕೇಂದ್ರದ ತೆರೆ ಪ್ರಯತ್ನ: ಬಂತು ಜಿಎಸ್ ಟಿ ಆ್ಯಪ್
ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಕುರಿತಂತೆ ಗೊಂದಲಗಳು ಮುಂದುವರೆದಿರುವಂತೆಯೇ ಇದಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈಹಾಕಿದ್ದು, ಜಿಎಸ್ ಟಿ ದರ ತೋರಿಸುವ ಜಿಎಸ್ ಟಿ ಆ್ಯಪ್ ಬಿಡುಗಡೆ ಮಾಡಿದೆ.

