Israel, Iran

US-Iran war: ಇರಾನ್ ಡ್ರೋನ್ಗಳನ್ನು ಹೊಡೆದುರುಳಿಸಿದ ಅಮೆರಿಕಾ; ರಾಡಾರ್ ಕೇಂದ್ರಗಳ ಮೇಲೆ ಭಾರೀ ದಾಳಿ, ಹಾರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ!
ಇರಾನ್ನಿಂದ ಉಡಾಯಿಸಲಾದ ಡ್ರೋನ್ಗಳು ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಹಡಗುಗಳಿಗೆ ಹಾಗೂ ಅಂತರರಾಷ್ಟ್ರೀಯ ಸಾಗರ ಸಂಚಾರಕ್ಕೆ ತಕ್ಷಣದ ಅಪಾಯವನ್ನು ಉಂಟುಮಾಡಿದ್ದವು. ಈ ಹಿನ್ನೆಲೆಯಲ್ಲಿ ಅವುಗಳನ್ನು ಗುರಿಯಾಗಿಸಿ ಹೊಡೆದುರುಳಿಸಲಾಗಿದೆ.

ಅಮೆರಿಕ ಯೋಧರ ಹತ್ಯೆ ಮಾಡಿದರೆ ಯುದ್ಧ ಪುನರಾರಂಭ: ಇರಾನ್'ಗೆ ಟ್ರಂಪ್ ಖಡಕ್ ಎಚ್ಚರಿಕೆ
ಇರಾನ್ಗೆ ಈಗ ನೌಕಾಪಡೆ ಇಲ್ಲ, ವಾಯುಪಡೆ ಇಲ್ಲ. ಅವರ ನಾಯಕತ್ವವನ್ನು ನಾವು ಸಂಪೂರ್ಣವಾಗಿ ನಾಶಪಡಿಸಿದ್ದೇವೆ. ಆದರೂ ಕೆಲವು ಮಾಧ್ಯಮಗಳು ಅವರು ಯುದ್ಧದಲ್ಲಿ ಚೆನ್ನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಇದು ನಂಬಲಸಾಧ್ಯ.

ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಅಸಮಾಧಾನ: ಖಮೇನಿ ಭೇಟಿಗೆ ಟ್ರಂಪ್ ಒಲವು; ಇರಾನ್ ಕಡೆಗೆ ಸ್ನೇಹದ ಹಸ್ತ..?
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇರಾನ್ನಲ್ಲಿ ಅಮೆರಿಕದ F-15 ಫೈಟರ್ ಜೆಟ್ ಹೊಡೆದುರುಳಿಸಿದ ಚೀನಾದ ಕ್ಷಿಪಣಿ!
ಫೆಬ್ರವರಿ 28 ರಂದು ಪ್ರಾರಂಭವಾದ ಸಂಘರ್ಷದ ಸಮಯದಲ್ಲಿ ಚೀನಾ ಇರಾನ್ಗೆ ಹೆಚ್ಚುವರಿ ಮಿಲಿಟರಿ ಬೆಂಬಲವನ್ನು ನೀಡಿರಬಹುದು ಎಂದು ಹೇಳಲಾಗುತ್ತಿದೆ.

ಇರಾನ್ ಜೊತೆ ಶಾಂತಿ ಒಪ್ಪಂದದತ್ತ ಅಮೆರಿಕಾ; ಅಣ್ವಸ್ತ್ರ ತ್ಯಜಿಸಲು ಒಪ್ಪಿದ ಟೆಹ್ರಾನ್: ಟ್ರಂಪ್ ಮಹತ್ವದ ಹೇಳಿಕೆ..!
ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, “ನನಗೆ ಬೇಕಾಗಿರುವ ಪ್ರಮುಖ ಭರವಸೆ ಎಂದರೆ ಇರಾನ್ ಅಣ್ವಸ್ತ್ರಗಳನ್ನು ಹೊಂದದಿರುವುದು. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್ಗೆ ಟ್ರಂಪ್ ಪಟ್ಟು; ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!
“ಪರಮಾಣು ಶಸ್ತ್ರರಹಿತ ಇರಾನ್” ಎಂಬ ಗುರಿಯ ಮೇಲೆ ಟ್ರಂಪ್ ಆಡಳಿತ ಗಟ್ಟಿಯಾಗಿ ನಿಂತಿದ್ದು, ಈಗಾಗಲೇ ಅಂತಿಮ ಹಂತ ತಲುಪಿದ್ದ ಮಾತುಕತೆಗೆ ಮತ್ತೆ ಇದೀಗ ಮತ್ತೆ ಅನಿಶ್ಚಿತತೆಯ ಹಂತ ತಲುಪಿದೆ.

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ
ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಅಧಿಕಾರವಿಲ್ಲದ ಮತ್ತು ಹೆಸರು ಬಹಿರಂಗಪಡಿಸದ ಷರತ್ತು ವಿಧಿಸಿ ಮಾತನಾಡಿದ ಅಧಿಕಾರಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟೇ ಬರಬೇಕಿರುವ ತಿಳುವಳಿಕೆ ಒಪ್ಪಂದಕ್ಕೆ ಸಹಿ...

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್ಗಳನ್ನು ಹೊಡೆದುರುಳಿಸಿದ ಅಮೆರಿಕಾ; ಹೋರ್ಮುಜ್ನಲ್ಲಿ ಉದ್ವಿಗ್ನತೆ ತೀವ್ರ..!
ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಗುರುತಿಸಿದ ಅಮೆರಿಕ ಪಡೆಗಳು, ಬಂದರ್ ಅಬ್ಬಾಸ್ ಪ್ರದೇಶದಲ್ಲೇ ನಿಖರ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಿಯಂತ್ರಣ ವ್ಯವಸ್ಥೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ; ಅಮೆರಿಕಾ ವೈಮಾನಿಕ ದಾಳಿಗೆ ಇರಾನ್ ಆಕ್ರೋಶ; ಕದನ ವಿರಾಮ ಒಪ್ಪಂದ ಉಲ್ಲಂಘನೆ ಆರೋಪ!
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೆನೈ, “ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ನಿಲುವು ಎಂದಿಗೂ ಬದಲಾಗುವುದಿಲ್ಲ” ಎಂದು ಘೋಷಿಸಿದ್ದು, ಇನ್ನೊಂದೆಡೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ನಲ್ಲಿ ಸೈನಿಕ ಕಾರ್ಯಾಚರಣೆಗಳನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ.

