RBI

ಎಚ್‌ಡಿಎಫ್‌ಸಿ ಬ್ಯಾಂಕ್ ಡಿಜಿಟಲ್ ಚಟುವಟಿಕೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್‌ಬಿಐ ಬ್ರೇಕ್!
ಕಳೆದ ಎರಡು ವರ್ಷಗಳಲ್ಲಿ ಆನ್‌ಲೈನ್ ಸೇವೆಗಳಲ್ಲಿ ಆಗಾಗ್ಗೆ ಅಡೆತಡೆ ಎದುರಿಸಿದ ನಂತರ ಯೋಜಿತ ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆಯನ್ನೂ ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ

ಮಿಲಿಯನ್ ಫಾಲೋವರ್ಸ್ ಕ್ಲಬ್ ಸೇರಿದ ಆರ್ ಬಿಐ ಟ್ವಿಟರ್ ಖಾತೆ!
ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಿಲಿಯನ್ ಟ್ವಿಟರ್ ಫಾಲೋರ್ವಸ್ ಹೊಂದುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕೇಂದ್ರಿಯ ಬ್ಯಾಂಕ್ ಎಂಬ ಖ್ಯಾತಿಗೊಳಗಾಗಿದೆ.

ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತ: ಆರ್‌ಬಿಐ ನೇಮಿತ ಆಡಳಿತಾಧಿಕಾರಿ
ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಆರ್‌ಬಿಐ ನಿಗದಿಪಡಿಸಿದ ಗಡುವಿನೊಳಗೆ ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ನೇಮಕ ಮಾಡಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಆಡಳಿತಾಧಿಕಾರಿ ಟಿ ಎನ್ ಮನೋಹರನ್ ಹೇಳಿದ್ದಾರೆ.

ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ 30 ದಿನ ನಿರ್ಬಂಧ; ಹಣ ವಿತ್ ಡ್ರಾಗೆ 25,000 ರೂ ಮಿತಿ ಹೇರಿಕೆ
ದೇಶದ ಮತ್ತೊಂದು ಖಾಸಗಿ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಹಣ ವಿತ್ ಡ್ರಾಗೆ 25,000 ರೂ ಮಿತಿ ಹೇರಿದೆ.

ಆರ್ ಬಿಐ ಇನ್ನೋವೇಶನ್ ಹಬ್‌ನ ಮೊದಲ ಅಧ್ಯಕ್ಷರಾಗಿ ಕ್ರಿಸ್ ಗೋಪಾಲಕೃಷ್ಣನ್ ನೇಮಕ
ಭಾರತೀಯ ರಿಸರ್ವ್ ಬ್ಯಾಂಕ್‌ನ(ಆರ್‌ಬಿಐ) ಇನ್ನೋವೇಶನ್ ಹಬ್‌ನ ಮೊದಲ ಅಧ್ಯಕ್ಷರಾಗಿ ಇನ್ಫೊಸಿಸ್ ಸಹ ಸಂಸ್ಥಾಪಕ, ಮಾಜಿ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಅವಧಿಯಲ್ಲಿಯೇ ಅಧಿಕ: ಚಿಲ್ಲರೆ ಹಣದುಬ್ಬರ ಶೇ.7.61ಕ್ಕೆ ಏರಿಕೆ!
ಕಳೆದ ಆರೂವರೆ ವರ್ಷಗಳಲ್ಲಿಯೇ ಚಿಲ್ಲರೆ ಹಣದುಬ್ಬರ ಶೇಕಡ 7.61ಕ್ಕೆ ಏರಿಕೆಯಾಗಿದೆ. ಆಹಾರ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ಅಕ್ಟೋಬರ್ ನಲ್ಲಿ ಹಣದುಬ್ಬರ ಹೆಚ್ಚಾಗಿದೆ ಎನ್ನಲಾಗಿದೆ.

ದ್ವಿತೀಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.8.6 ಕುಸಿತ, ಮೊದಲ ಬಾರಿಗೆ ಭಾರತದಲ್ಲಿ ಸತತ ಆರ್ಥಿಕ ಹಿಂಜರಿತ!
ಕಳೆದ ಜುಲೈಯಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 8.6ರಷ್ಟು ಕುಸಿದಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ವರ್ಷದ ಮೊದಲ ಮೊದಲಾರ್ಧದಲ್ಲಿ ಸತತ ಎರಡು ಬಾರಿ ತ್ರೈಮಾಸಿಕದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸತತ ಇಳಿಕೆ ಕಂಡುಬಂದಿದೆ ಎಂದು ಆರ್ ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.

ಸರ್ಕಾರದ ಚಕ್ರ ಬಡ್ಡಿ ಮನ್ನಾ ಯೋಜನೆ: ಅಧಿಸೂಚನೆ ಹೊರಡಿಸಿದ ಆರ್‌ಬಿಐ
ಲಾಕ್‌ಡೌನ್ ಅವಧಿಯಲ್ಲಿ ಸಾಲಗಾರರ ಚಕ್ರ ಬಡ್ಡಿ ಮನ್ನಾ ಮಾಡುವ ಸರ್ಕಾರದ ಯೋಜನೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಗೆ ಆರ್ ಬಿಐ
ಸಾಲದ ಕಂತು ಮುಂದೂಡಿಕೆ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಆರ್ ಬಿಐ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

