ಭಾರತದ ನೌಕಾ ಸಾಮರ್ಥ್ಯದ ಕುರಿತು ಪಾಕಿಸ್ತಾನದ ಆತಂಕ

ಭಾರತದ ಅಭಿವೃದ್ಧಿ ಹೊಂದುತ್ತಿರುವ ನೌಕಾ ಸಾಮರ್ಥ್ಯ ಪಾಕಿಸ್ತಾನಕ್ಕೆ ಬೆದರಿಕೆಯಾಗಬಲ್ಲದು ಎಂದು ಆಂಗ್ಲ ಧೈನಿಕವೊಂದು ಹೇಳಿದೆ...
ಭಾರತದ ನೌಕಾದಳ (ಸಂಗ್ರಹ ಚಿತ್ರ)
ಭಾರತದ ನೌಕಾದಳ (ಸಂಗ್ರಹ ಚಿತ್ರ)
Updated on: 

ಇಸ್ಲಾಮಾಬಾದ್: ಭಾರತದ ಅಭಿವೃದ್ಧಿ ಹೊಂದುತ್ತಿರುವ ನೌಕಾ ಸಾಮರ್ಥ್ಯ ಪಾಕಿಸ್ತಾನಕ್ಕೆ ಬೆದರಿಕೆಯಾಗಬಲ್ಲದು ಎಂದು ಆಂಗ್ಲ ಧೈನಿಕವೊಂದು ಹೇಳಿದೆ.

ಎಕ್ಸ್ ಪ್ಯಾಂಡಿಂಗ್ ಹಾರಿಜನ್ಸ್ ಎಂಬ ಪತ್ರಿಕೆಯ ಸಂಪಾದಕೀಯದಲ್ಲಿ ಭಾರತದ ನೌಕಾ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಭಾರತ ದೇಶ ತನ್ನ ನೌಕಾ  ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದೆ. ಇದು ಮುಂದಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಬೆದರಿಕೆಯಾಗುವ ಸಾಧ್ಯತೆಗಳಿದ್ದು, ಪಾಕಿಸ್ತಾನ ಸರ್ಕಾರ ಕೂಡ  ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೂಡಿಕೆ ಮಾಡಬೇಕು ಎಂದು ಪತ್ರಿಕೆ ಹೇಳಿದೆ.

ಭಾರತಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನ ರಕ್ಷಣಾ ಶಸ್ತ್ರಾಸ್ತ್ರ ಮತ್ತು ನೌಕಾಪಡೆಯನ್ನು ಕಡೆಗಣಿಸಲಾಗುತ್ತಿದೆ. ಆದರೆ ಭಾರತ ಈ ವಿಚಾರದಲ್ಲಿ ಸಕ್ರಿಯವಾಗಿದ್ದು, ಕ್ರಮೇಣ ತನ್ನ ನೌಕಾ  ಸಾಮರ್ಥ್ಯವನ್ನು ಬಲಿಪಡಿಸುತ್ತಾ ಸಾಗಿದೆ. ಬಹಳ ವರ್ಷಗಳ ಹಿಂದೆಯೇ ಭಾರತದ ನೌಕಾ ಸಾಮರ್ಥ್ಯ ಪಾಕಿಸ್ತಾನದ ನೌಕಾ ಸಾಮರ್ಥ್ಯವನ್ನು ಮೀರಿ ಬೆಳೆದಿದ್ದು, ಆ ಕ್ಷೇತ್ರದ ಮೇಲಿನ ತನ್ನ  ಹೂಡಿಕೆಯನ್ನು ಭಾರತ ಸರ್ಕಾರ ಹೆಚ್ಚಿಸುತ್ತಲೇ ಇದೆ.

ಚೀನಾ ಕೂಡ ದಕ್ಷಿಣ ಏಷ್ಯಾ ಸಮುದ್ರದಲ್ಲಿ ತನ್ನ ಪಾರುಪತ್ಯ ಸಾಧಿಸುವ ನಿಟ್ಟಿನಲ್ಲಿ ಶ್ರೀಲಂಕಾದ ಗ್ವಾಡರ್ ಮತ್ತು ಹಂಬೋಂಟೊಟಾ ಬಂದರುಗಳಲ್ಲಿ ಬಂಡವಾಳ ಹೂಡುತ್ತಿದೆ. ಬಾಂಗ್ಲಾದೇಶದ  ಸನೋಡಿಯಾ ಸಮುದ್ರತಳದಲ್ಲಿ ಜಲಮಾರ್ಗ ರಚನೆಯತ್ತ ಚೀನಾ ಗಮನ ಕೇಂದ್ರೀಕರಿಸಿದೆ. ಇದು ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಚೀನಾ ಪಾಶ್ಚಿಮಾತ್ಯ ದೇಶಗಳಗೆ ಒತ್ತಡ  ಹೇರುವುದಂತೂ ಖಚಿತ. ಭಾರತ ದೇಶದ ವೃದ್ಧಿಯಾಗುತ್ತಿರುವ ರಕ್ಷಣಾ ಸಾಮರ್ಥ್ಯವನ್ನು ಗಮನಿಸಿದರೆ ಚೀನಾಕ್ಕೆ ಭಾರತ ಪ್ರಬಲ ಸ್ಪರ್ಧಿಯಾಗಬಲ್ಲದು.

ಅಮೆರಿಕ ದೇಶದೊಂದಿಗಿನ ಭಾರತ ಸ್ನೇಹ ಕೂಡ ವೃದ್ಧಿಯಾಗುತ್ತಿದ್ದು, ಚೀನಾದ ಎದುರಿಗಿನ ತನ್ನ ಸಾಂಪ್ರದಾಯಿಕ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಭಾರತ ಜಪಾನ್ ಮತ್ತು  ಅಮೆರಿಕ ದೇಶಗಳೊಡನೆ ತನ್ನ ನೌಕಾಪಡೆಯನ್ನು ತರಬೇತಿಗೆ ಕಳುಹಿಸಿಕೊಡುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಹೀಗಾಗಿ ಪಾಕಿಸ್ತಾನ ಕೂಡ ಈ ನಿಟ್ಟಿನಲ್ಲಿ  ಆಲೋಚಿಸಬೇಕಿದೆ ಎಂದು ಪತ್ರಿಕೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com