

ಇಸ್ಲಾಮಾಬಾದ್: ಗಡಿಯಲ್ಲಿರುವ ಭಯೋತ್ಪಾದಕರ ಕ್ಯಾಂಪ್ ಗಳನ್ನೇ ಗುರಿಯಾಗಿಸಿಕೊಂಡು ಭಾರತೀಯ ಸೇನೆ ನಡೆಸುತ್ತಿರುವ ದಾಳಿಯನ್ನು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಖಂಡಿಸಿದ್ದು, 'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ' ಎಂದು ಗುರುವಾರ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಯಲ್ಲಿ ಭಾರತೀಯ ಸೇನೆ ಅಪ್ರಚೋದಿತ ದಾಳಿಯನ್ನು ನಡೆಸುತ್ತಿದೆ. ಪರಿಣಾಮ ಪಾಕಿಸ್ತಾನದ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ
ನಮ್ಮ ಶಾಂತಿಯುತ ನಡೆ ಹಾಗೂ ಪ್ರಯತ್ನವನ್ನು ನಮ್ಮ ದೌರ್ಬಲ್ಯವೆಂದು ತಪ್ಪಾಗಿ ತಿಳಿಯಬಾರದು. ನಮ್ಮ ಗಡಿಯ ಸಾರ್ವಭೌಮತ್ವ ರಕ್ಷಣೆಗೆ ನಾವು ಸಂಪೂರ್ಣವಾಗಿ ಸಮರ್ಥವಾಗಿದ್ದೇವೆ. ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ನಿಷ್ಕ್ರಿಯಗೊಳಿಸಲು ನಮ್ಮ ಸೇನೆ ಸನ್ನದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.