ಪ್ರಧಾನಿ ಮೋದಿಗೂ ಒಳ್ಳೆಯ ಇಂಗ್ಲಿಷ್​​ ಬರುತ್ತದೆ.. ಆದರೆ, ಮಾತನಾಡಲ್ಲ ಅಷ್ಟೇ: ಟ್ರಂಪ್​ ಹಾಸ್ಯ ಚಟಾಕಿ

ಭಾರತದ ಪ್ರಧಾನಿ ನರೇಂದ್ರ ಮೋದಿಗೂ ಒಳ್ಳೆಯ ಇಂಗ್ಲಿಷ್ ಬರುತ್ತದೆ. ಆದರೆ ಅವರು ಮಾತನಾಡುವುದಿಲ್ಲ ಅಷ್ಟೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಟ್ರಂಪ್ ಮೋದಿ
ಟ್ರಂಪ್ ಮೋದಿ
Updated on

ಪ್ರಧಾನಿ ಮೋದಿ ಸಹಿತ ನಗೆಗಡಲಲ್ಲಿ ತೇಲಿದ ಸುದ್ದಿಗೋಷ್ಠಿ, ಟ್ರಂಪ್‌ ಕೈಗೆ ಪ್ರೀತಿಯಿಂದ ಹೊಡೆದ ಮೋದಿ

ಪ್ಯಾರಿಸ್: ಭಾರತದ ಪ್ರಧಾನಿ ನರೇಂದ್ರ ಮೋದಿಗೂ ಒಳ್ಳೆಯ ಇಂಗ್ಲಿಷ್ ಬರುತ್ತದೆ. ಆದರೆ ಅವರು ಮಾತನಾಡುವುದಿಲ್ಲ ಅಷ್ಟೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾದ ಅಧ್ಯಕ್ಷ ಟ್ರಂಪ್​ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ, ವಹಿವಾಟು ಬಗ್ಗೆ ಚರ್ಚಿಸಲಾಯಿತು.  ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಮಾತನಾಡಿದರು. ಈ ವೇಳೆ ಒಂದು ಸ್ವಾರಸ್ಯಕರ ಸಂಗತಿಯೂ ನಡೆಯಿತು. 

ಪ್ರಧಾನಿ ಮೋದಿ ಇಂಗ್ಲಿಷ್ ಗೊತ್ತು, ಮಾತನಾಡಲ್ಲ
ಸುದ್ದಿಗೋಷ್ಠಿ ವೇಳೆ ಪ್ರಧಾನಿ ಮೋದಿ ತುಂಬಾ ಗಂಭೀರವಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಮೊದಲು ನಾವಿಬ್ಬರು ಮಾತನಾಡುತ್ತೇವೆ. ಆಮೇಲೆ ನಿಮಗೆ ಅದರ ಬಗ್ಗೆ ಹೇಳ್ತೀವಿ ಎಂದು ಮೋದಿ ಹಿಂದಿಯಲ್ಲೇ ಹೇಳಿದರು. ಈ ಮಾತಿನ ನಡುವೆಯೇ ಟ್ರಂಪ್‌ 'ಮೋದಿಗೆ ಇಂಗ್ಲೀಷ್‌ ತುಂಬಾ ಚೆನ್ನಾಗಿ ಬರುತ್ತೆ, ಆದ್ರೆ ಮಾತಾಡಲ್ಲ ಅಷ್ಟೇ ಎಂದು ಹೇಳುತ್ತಾರೆ. ಟ್ರಂಪ್ ರ ಈ ಹೇಳಿಕೆ ಸ್ವತಃ ಮೋದಿ ಸೇರಿದಂತೆ ಇಡೀ ಸುದಿಗೋಶ್ಟಿಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ಅಂತೆಯೇ ಟ್ರಂಪ್ ಹೇಳಿಕೆ ನಕ್ಕ ಮೋದಿ ಕೂಡ ಕೈಹಿಡಿದು ಹೊಡೆದು ಜೋರಾಗಿ ನಗುತ್ತಾರೆ. ಆ ಮೂಲಕ ತಮ್ಮ ಮತ್ತು ಟ್ರಂಪ್ ರ ನಡುವಿನ ಸ್ನೇಹವನ್ನು ಜಗತ್ತಿಗೆ ಸಾರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com