ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ದಂತ ವೈದ್ಯೆಯ ಬರ್ಬರ ಹತ್ಯೆ!

ಭಾರತ ಮೂಲದ ದಂತ ವೈದ್ಯೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.
ಹತ್ಯೆಯಾದ ದಂತ ವೈದ್ಯ ಪ್ರೀತಿ ರೆಡ್ಡಿ ಅವರ ಸಿಸಿಟಿವಿ ದೃಶ್ಯ
ಹತ್ಯೆಯಾದ ದಂತ ವೈದ್ಯ ಪ್ರೀತಿ ರೆಡ್ಡಿ ಅವರ ಸಿಸಿಟಿವಿ ದೃಶ್ಯ
Updated on: 
ಸಿಡ್ನಿ: ಭಾರತ ಮೂಲದ ದಂತ ವೈದ್ಯೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.
ಆಸ್ಟ್ರೇಲಿಯಾದ ಸಿಡ್ನಿಯ ಜನನಿಬಿಡ ಪ್ರದೇಶದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಭಾರತೀಯ ಮೂಲದ ದಂತ ವೈದ್ಯೆ ಪ್ರೀತಿ ರೆಡ್ಡಿ ಅವರ ಶವ ಇದೀಗ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ. ಸಿಡ್ನಿ ಪೊಲೀಸ್ ಮೂಲಗಳು ತಿಳಿಸಿರುವಂತೆ ವೈದ್ಯೆ ಪ್ರೀತಿ ರೆಡ್ಡಿ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಆಕೆಯ ಕಾರ್ ನಲ್ಲಿದ್ದ ಸೂಟ್ ಕೇಸೊಂದರಲ್ಲಿ ತುಂಬಲಾಗಿದೆ. ಇದೀಗ ಈ ಕಾರು ಪೂರ್ವ ಸಿಡ್ನಿಯ ನ್ಯೂ ಸೌತ್ ವೇಲ್ಸ್ ನಲ್ಲಿ ಪತ್ತೆಯಾಗಿದ್ದು, ಕಾರು ಪರಿಶೀಲನೆ ಮಾಡಿದ ಪೊಲೀಸರಿಗೆ ಕೊಲೆಯ ವಿಚಾರ ತಿಳಿದಿದೆ.
ಆಕೆಯ ದೇಹದ ಮೇಲೆ ಇರಿದ ಗಾಯಗಳು ಸಾಕಷ್ಟಿದ್ದು, ಆಕೆ ತನ್ನ ಮಾಜಿ ಪ್ರಿಯಕರನೊಟ್ಟಿಗೆ ಸಿಡ್ನಿಯ ಮಾರ್ಕೆಟ್ ಸ್ಟ್ರೀಟ್ ನಲ್ಲಿದ್ದ ಹೊಟೇಲ್ ವೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತನ್ನ ಕುಟುಂಬಸ್ಥರೊಂದಿಗೆ ಫೋನಿನಲ್ಲಿ ಮಾತನಾಡಿದ್ದ ಪ್ರೀತಿ, ನಂತರ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂಡ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರೀತಿ ರೆಡ್ಡಿ ಭಾರತೀಯ ಮೂಲದವರಾಗಿದ್ದು, ಅವರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಮಾಜಿ ಪ್ರಿಯಕರ ಕೂಡ ಅಪಘಾತದಲ್ಲಿ ಸಾವು!
ಇದೇ ವೇಳೆ ಆಕೆಯ ಮಾಜಿ ಪ್ರಿಯಕರ ಸಹ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೂ ಕೂಡ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಿಡ್ನಿಯ ಜಾರ್ಜ್ ಸ್ಟ್ರೀಟ್ ನಲ್ಲಿ ಯಾರಿಗೋ ಕಾಯುತ್ತ ನಿಂತಿದ್ದ ಪ್ರೀತಿ, ನಂತರ ನಾಪತ್ತೆಯಾಗಿದ್ದಾರೆ. ಆಕೆ ಕಾಯುತ್ತ ನಿಂತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com