ಎರಡನೇ ಮಹಾಯುದ್ಧದ 75 ನೇ ವಿಜಯೋತ್ಸವ: ಮಾಸ್ಕೋ 'ಮಹಾ ಪರೇಡ್' ನಲ್ಲಿ ರಾಜನಾಥ್ ಸಿಂಗ್ ಭಾಗಿ

ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ  75 ನೇ ವರ್ಷಾಚರಣೆಯ ನೆನಪಿನಾರ್ಥ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿರುವ ಮಹಾ ಪರೇಡ್ ನಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಲ್ಗೊಳ್ಳಲ್ಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ  75 ನೇ ವರ್ಷಾಚರಣೆಯ ನೆನಪಿನಾರ್ಥ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿರುವ ಮಹಾ ಪರೇಡ್ ನಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಲ್ಗೊಳ್ಳಲ್ಲಿದ್ದಾರೆ.

ಇದೇ ಜೂನ್ 24, 2020 ರಂದು ಮಾಸ್ಕೋದಲ್ಲಿ ವಿಕ್ಟರಿ ಪೆರೇಡ್‌ ನಡೆಯಲಿದ್ದು, ರಷ್ಯಾದ ಮತ್ತು ಇತರ ಸ್ನೇಹಿತ ರಾಷ್ಟ್ರಗಳ ಯೋಧರು ಮಾಡಿದ ವೀರತೆ ಮತ್ತು ತ್ಯಾಗಗಳನ್ನು ಗೌರವಿಸಲು ಪೆರೇಡ್ ಆಯೋಜಿಸಲಾಗಿದೆ. ರಷ್ಯಾದ ಒಕ್ಕೂಟದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ರಾಜನಾಥ್ ಅವರನ್ನು ವಿಕ್ಟರಿ ಪೆರೇಡ್‌ಗೆ ಆಹ್ವಾನಿಸಿದ್ದರು. ಇದನ್ನು 2020 ರ ಮೇ 9 ರಂದು ನಿಗದಿಪಡಿಸಲಾಗಿತ್ತು, ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು.

ಮೂಲಗಳ ಪ್ರಕಾರ ಭಾರತ ಟ್ರೈ-ಸರ್ವಿಸ್ 75- ಸದಸ್ಯರು ಇಂಡಿಯನ್ ಮಿಲಿಟರಿ ಕಾಂಟಿಜೆಂಟ್ ವಿಕ್ಟರಿ ಪೆರೇಡ್‌ನಲ್ಲಿ ಭಾಗವಹಿಸಲು ಈಗಾಗಲೇ ಮಾಸ್ಕೋ ತಲುಪಿದೆ. ವಿಕ್ಟರಿ ಡೇ ಪೆರೇಡ್‌ನಲ್ಲಿ ಭಾಗವಹಿಸುವ ಮೆರವಣಿಗೆಯ ದಳವು ಧೀರ ಸಿಖ್ ಲೈಟ್ ಕಾಲಾಳುಪಡೆ ರೆಜಿಮೆಂಟ್‌ನ ಪ್ರಮುಖ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿದೆ. ವಿಜಯ ದಿನದ ಮೆರವಣಿಗೆಯಲ್ಲಿ ಭಾರತೀಯ ಭಾಗವಹಿಸುವಿಕೆಯು ಎರಡನೇ ಮಹಾಯುದ್ಧದಲ್ಲಿ ರಷ್ಯಾ ಮತ್ತು ಇತರ ರಾಷ್ಟ್ರಗಳು ಮಾಡಿದ ಮಹತ್ತರ ತ್ಯಾಗಕ್ಕೆ ಗೌರವದ ಸಂಕೇತವಾಗಿದೆ. ಇದರಲ್ಲಿ ಸಾವಿರಾರು ಭಾರತೀಯ ಸೈನಿಕರು ಸಹ ಹುತಾತ್ಮರಾಗಿದ್ದರು.

ಇನ್ನು ಭಾರತದ ರಷ್ಯಾ ರಾಯಭಾರಿ ನಿಕೋಲಾಯ್ ಕುಡಾಶೇವ್ ಅವರು ರಷ್ಯಾಗೆ ಪ್ರಯಾಣಿಸುತ್ತಿರುವ ರಾಜನಾಥ್ ಅವರಿಗೆ ಸುರಕ್ಷಿತ ಪ್ರಯಾಣವನ್ನು ಹಾರೈಸಿದ್ದಾರೆ. ಜೂನ್ 24 ರಂದು ನಡೆಯುವ ಗ್ರೇಟ್ #ವಿಕ್ಟರಿ ಡೇ ಮಿಲಿಟರಿ ಪೆರೇಡ್‌ಗೆ ಸಾಕ್ಷಿಯಾಗಲು ಸೋಮವಾರ ಮಾಸ್ಕೋಗೆ ಭಾರತದ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ತೆರಳಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com