ಮೊಸಳೆ ಕಾಲುಸೂಪ್​; ತೈವಾನ್ ರೆಸ್ಟೋರೆಂಟ್ ನ ‘ಗಾಡ್ಝಿಲ್ಲಾ ರಾಮೆನ್​’ ಡಿಶ್ ವೈರಲ್!

ವಿದೇಶಿಗರ ಆಹಾರ ಪದ್ಧತಿ ಎಷ್ಟು ಚಿತ್ರವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ಡಿಶ್ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಶ್ ಭಾರಿ ವೈರಲ್ ಆಗುತ್ತಿದೆ.
ತೈವಾನ್ ಮೊಸಳೆ ಕಾಲುಸೂಪ್
ತೈವಾನ್ ಮೊಸಳೆ ಕಾಲುಸೂಪ್
Updated on: 

ವಿದೇಶಿಗರ ಆಹಾರ ಪದ್ಧತಿ ಎಷ್ಟು ಚಿತ್ರವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ಡಿಶ್ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಶ್ ಭಾರಿ ವೈರಲ್ ಆಗುತ್ತಿದೆ.

ಇಂದಿನ ಆಧುನಿಕ ಯುಗದಲ್ಲಿ ಯಾವುದಾದರೂ ವಿಚಿತ್ರ ಸನ್ನಿವೇಶಗಳು ಸಾಮಾಜಿಕ ಮಾಧ್ಯಮದ ಕಣ್ಣು ತಪ್ಪಿಸಿ ಹೋಗುವುದುಂಟೇ.. ಇಲ್ಲೊಂದು ರೆಸ್ಟೋರೆಂಟ್ ನ ವಿಶೇಷ ಡಿಶ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.  ತೈವಾನೀಸ್ ರೆಸ್ಟೊರೆಂಟ್‌ನಿಂದ ತಯಾರಿಸಲಾದ ಈ ಖಾದ್ಯವು ವಿಶೇಷವಾಗಿ ತನ್ನ ವಿಲಕ್ಷಣ ಅಂಶದಿಂದಾಗಿ ವ್ಯಾಪಕ ವೈರಲ್ ಆಗುತ್ತಿದೆ.

ತೈವಾನ್ ನ ಯುನ್ಲಿನ್ ಕೌಂಟಿಯ ಡೌಲಿಯು ಸಿಟಿಯಲ್ಲಿರುವ ರೆಸ್ಟೋರೆಂಟ್ ನಲ್ಲಿ ಈ ಡಿಶ್ ತಯಾರಿಸಲಾಗುತ್ತಿದ್ದು, ಇದಕ್ಕೆ "ಗಾಡ್ಜಿಲ್ಲಾ" ರಾಮೆನ್ ಎಂದು ಹೆಸರಿಡಲಾಗಿದೆ. ಗಾಡ್ಜಿಲ್ಲಾ" ರಾಮೆನ್ ಎಂದರೆ ಮೊಸಳೆ ಕಾಲು ಸೂಪು.. ಹೌದು ಅಕ್ಷರಶಃ ಮೊಸಳೆಯ ಕಾಲು ಸೂಪು.. ಈ ರೆಸ್ಟೋರೆಂಟ್ ನಲ್ಲಿ ಮೊಸಳೆ ಮಾಂಸಾಹಾರಗಳೇ ವಿಶೇಷವಾಗಿದ್ದು, ಪ್ರಮುಖವಾಗಿ ಮೊಸಳೆಯ ಕಾಲನ್ನು ಹಬೆಯಲ್ಲಿ ಬೇಯಿಸಿ ಸೂಪ್ ಮಾಡಿ ಗ್ರಾಹಕರಿಗೆ ನೀಡುತ್ತಾರೆ.

ಈ ಮೊಸಳೆ ಕಾಲು ಸೂಪ್ ನ ಬೆಲೆ 4 ಸಾವಿರ ರೂಗಳಂತೆ.. ಇದು ಪ್ರೀ ಆರ್ಡರ್​ ಮಾಡಿದಲ್ಲಿ ಮಾತ್ರ ಲಭ್ಯ. ತೈವಾನಿನ ನು ವು ಮಾವೋ ಕುಯೀ (Nu Wu Mao Kuei) ಹೋಟೆಲ್ ಈ ಹೊಸ ಖಾದ್ಯವನ್ನು ಪ್ರಚುರಪಡಿಸಲೆಂದು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ಅಪ್​ಲೋಡ್ ಮಾಡುತ್ತಿದೆ. ವಿಡಿಯೋದಲ್ಲಿರುವ ಸ್ಥಳೀಯ ಯುವತಿ ಸೂಪ್ ಕುಡಿಯುತ್ತಿದ್ದು, ಇದೇ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ. ಅಂದಹಾಗೆ ಟೈಟುಂಗ್​ನಲ್ಲಿರುವ ಫಾರ್ಮ್​ ಒಂದರಿಂದ ಈ ಮೊಸಳೆಯನ್ನು ಖರೀದಿಸಲಾಗಿದೆ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ. ಮೊಸಳೆ ಕಾಲುಸೂಪ್​ ಇಷ್ಟಪಡದವರಿಗೆ ಬಿದಿರಿನ ಮೊಳಕೆ, ಮೊಟ್ಟೆ, ಬೇಬಿ ಕಾರ್ನ್​ಮತ್ತು ಬಗೆಬಗೆಯ ರಾಮನ್​ ಸೂಪ್​ಗಳು ಲಭ್ಯ ಎಂದೂ ಹೋಟೆಲ್​ ತಿಳಿಸಿದೆ.

ಈ ಎಲ್ಲ ಖಾದ್ಯಗಳ ಪೈಕಿ ಸದ್ಯ ಮೊಸಳೆ ಕಾಲುಸೂಪ್​ ವಿಶೇಷ ಆಕರ್ಷಣೆಯಾಗಿದ್ದು, ಈ ಖಾದ್ಯ ತಯಾರಿಸಲು 40 ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com