US Travel Ban: ಪ್ರಯಾಣ ನಿಷೇಧ ವಿಸ್ತರಿಸಿದ ಟ್ರಂಪ್; 12 ದೇಶಗಳ ಮೂಲ ಪಟ್ಟಿಗೆ ಪ್ಯಾಲೆಸ್ಟೀನಿಯನ್ನರು ಸೇರಿ 20 ದೇಶಗಳ ಸೇರ್ಪಡೆ..!

ನ್ಯಾಷನಲ್ ಗಾರ್ಡ್ ಟ್ರೂಪ್‍ನ ಇಬ್ಬರು ಯೋಧರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಫ್ಘಾನ್ ಪ್ರಜೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ವಲಸೆ ಬರುವವರನ್ನು ತಡೆಯಲು ಕೈಗೊಳ್ಳುವ ಕಾರ್ಯಯೋಜನೆಯ ಅಂಗವಾಗಿ ಈ ನಿಷೇಧ ಘೋಷಿಸಲಾಗಿದೆ.
President Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ 30 ದೇಶಗಳಿಗೆ ಪ್ರವಾಸ ನಿಷೇಧ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ನ್ಯಾಷನಲ್ ಗಾರ್ಡ್ ಟ್ರೂಪ್‍ನ ಇಬ್ಬರು ಯೋಧರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಫ್ಘಾನ್ ಪ್ರಜೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ವಲಸೆ ಬರುವವರನ್ನು ತಡೆಯಲು ಕೈಗೊಳ್ಳುವ ಕಾರ್ಯಯೋಜನೆಯ ಅಂಗವಾಗಿ ಈ ನಿಷೇಧ ಘೋಷಿಸಲಾಗಿದೆ.

ಒಟ್ಟು 12 ದೇಶಗಳ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದ್ದು, ಇತರ ಏಳು ದೇಶಗಳ ನಾಗರಿಕರು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.

ಪ್ರವಾಸ ನಿಷೇಧ ದೇಶಗಳ ಪಟ್ಟಿಯನ್ನು ವಿಸ್ತರಿಸುವ ನಿರ್ಧಾರವನ್ನು ಪ್ರಕಟಿಸಿರುವ ಟ್ರಂಪ್ ಸರ್ಕಾರ, ವ್ಯಾಪಕ ಭ್ರಷ್ಟಾಚಾರ, ವಂಚನಾತ್ಮಕ ಅಥವಾ ವಿಶ್ವಾಸಾರ್ಹವಲ್ಲದ ನಾಗರಿಕ ದಾಖಲೆಗಳು ಮತ್ತು ಅಪರಾಧ ದಾಖಲೆಗಳನ್ನು ಹೊಂದಿರುವ ದೇಶಗಳ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡುವ ವಿಚಾರದಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಜನವರಿ 1 ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಕೆಲ ದೇಶಗಳ ಜನರು ವೀಸಾ ಅವಧಿ ಮುಗಿದರೂ ವಾಸ ಮುಂದುವರಿಸಿರುವುದು ತಿಳಿದುಬಂದಿದೆ. ಅಮೆರಿಕಾ ಗಡೀಪಾರು ಮಾಡಿದರೂ ಇಂತಹ ದೇಶಗಳು ತಮ್ಮ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳಲು ನಿರಾಕರಿಸಿವೆ ಎಂದು ತಿಳಿಸಿದೆ.

President Donald Trump
ಭಾಷಣ ಎಡಿಟ್ ಮಾಡಿ ಪ್ರಸಾರ: BBC ವಿರುದ್ಧ ಗುಡುಗಿದ ಟ್ರಂಪ್; 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ..!

ಹೊಸ ಆದೇಶದ ಅನ್ವಯ 12 ಅಪಾಯ ಸಾಧ್ಯತೆಯ ದೇಶಗಳ ಪ್ರಜೆಗಳಿಗೆ ಅಮೆರಿಕ ಭೇಟಿಯನ್ನು ನಿಷೇಧಿಸಲಾಗಿದೆ ಅಥವಾ ಅತ್ಯಧಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದೀಗ ಈ ಪಟ್ಟಿಗೆ ಮತ್ತಷ್ಟು ದೇಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಒಟ್ಟಾರೆ 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣ ನಿಷೇಧವನ್ನು ವಿಸ್ತರಿಸಿದೆ.

ಕಳೆದ ಜೂನ್‌ನಲ್ಲಿ ಅಧ್ಯಕ್ಷರು 12 ದೇಶಗಳ ನಾಗರಿಕರು ಅಮೆರಿಕಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗುವುದು ಮತ್ತು ಇತರ ಏಳು ದೇಶಗಳ ನಾಗರಿಕರು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ" ಎಂದು ಘೋಷಿಸಿದ್ದರು. ಇದೀಗ ಈ ಪಟ್ಟಿಗೆ ಮತ್ತಷ್ಟು ದೇಶಗಳನ್ನು ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಯಾಣ ನಿಷೇಧಕ್ಕೆ ಒಳಪಟ್ಟ ದೇಶಗಳ ಸಂಖ್ಯೆ 30ಕ್ಕೇರಿದೆ.

ಹೊಸ ಘೋಷಣೆಯು ಮೂಲ 12 ಹೈ-ರಿಸ್ಕ್ ದೇಶಗಳಾದ ಅಫ್ಘಾನಿಸ್ತಾನ, ಬರ್ಮಾ, ಚಾಡ್, ಕಾಂಗೋ ಗಣರಾಜ್ಯ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ ದೇಶಗಳ ಪ್ರಜೆಗಳಿಗೆ ಸಂಪೂರ್ಣ ನಿರ್ಬಂಧಗಳು ಮತ್ತು ಪ್ರವೇಶ ಮಿತಿಗಳನ್ನು ಮುಂದುವರೆಸಿದೆ.

ಇತ್ತೀಚಿನ ವಿಶ್ಲೇಷಣೆಯ ಆಧಾರದ ಮೇಲೆ ಇದು ಐದು ಹೆಚ್ಚುವರಿ ದೇಶಗಳ ಮೇಲೆ ಸಂಪೂರ್ಣ ಯುಎಸ್‌ ಪ್ರಯಾಣ ನಿರ್ಬಂಧಗಳು ಮತ್ತು ಪ್ರವೇಶ ಮಿತಿಗಳನ್ನು ಸೇರಿಸುತ್ತದೆ.

ಆ 5 ಹೊಸ ದೇಶಗಳೆಂದರೆ ಬುರ್ಕಿನಾ ಫಾಸೊ, ಮಾಲಿ, ನೈಜರ್, ದಕ್ಷಿಣ ಸುಡಾನ್ ಮತ್ತು ಸಿರಿಯಾ, ಹಾಗೆಯೇ ಪ್ಯಾಲೆಸ್ಟೀನಿಯನ್-ಪ್ರಾಧಿಕಾರ ನೀಡಿದ ಪ್ರಯಾಣ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳು ಕೂಡ ಸೇರಿದ್ದಾರೆ.

President Donald Trump
H-1B ವೀಸಾಗೆ ಶುಲ್ಕ: ಕ್ಯಾಲಿಫೋರ್ನಿಯಾ ಸೇರಿ 20 ರಾಜ್ಯಗಳಿಂದ ಟ್ರಂಪ್ ಆಡಳಿತದ ವಿರುದ್ಧ ಕೇಸ್

ಹೊಸ ಆದೇಶವು ಹಿಂದೆ ಭಾಗಶಃ ನಿರ್ಬಂಧಗಳಿಗೆ ಒಳಪಟ್ಟಿದ್ದ ಲಾವೋಸ್ ಮತ್ತು ಸಿಯೆರಾ ಲಿಯೋನ್ ದೇಶಗಳ ಮೇಲೆ, ಸಂಪೂರ್ಣ ನಿರ್ಬಂಧಗಳು ಮತ್ತು ಪ್ರವೇಶ ಮಿತಿಗಳನ್ನು ವಿಧಿಸುತ್ತದೆ.

ಇದು 7 ಮೂಲ ಹೈ-ರಿಸ್ಕ್ ದೇಶಗಳಲ್ಲಿ 4 ದೇಶಗಳಾದ ಬುರುಂಡಿ, ಕ್ಯೂಬಾ, ಟೋಗೊ ಮತ್ತು ವೆನೆಜುವೆಲಾಗಳ ಪ್ರಜೆಗಳ ಮೇಲೆ ಭಾಗಶಃ ನಿರ್ಬಂಧಗಳನ್ನು ಮುಂದುವರೆಸಿದೆ. ತುರ್ಕಮೆನಿಸ್ತಾನ್ ಅಮೆರಿಕದೊಂದಿಗೆ ರಾಜತಾಂತ್ರಿಕ ಸಂಬಂಧ ಬೆಳೆಸುತ್ತಿರುವುದರಿಂದ, ಆ ದೇಶದಿಂದ ವಲಸೆ ರಹಿತ ವೀಸಾಗಳ ಮೇಲಿನ ಅಸ್ತಿತ್ವದಲ್ಲಿರುವ ನಿಷೇಧವನ್ನು ಹೊಸ ಘೋಷಣೆ ತೆಗೆದುಹಾಕುತ್ತದೆ.

ಅದೇ ರೀತಿ ಹೊಸ ಘೋಷಣೆಯು ಅಂಗೋಲಾ, ಆಂಟಿಗುವಾ ಮತ್ತು ಬಾರ್ಬುಡಾ, ಬೆನಿನ್, ಕೋಟ್ ಡಿ'ಐವೊಯಿರ್, ಡೊಮಿನಿಕಾ, ಗ್ಯಾಬೊನ್, ದಿ ಗ್ಯಾಂಬಿಯಾ, ಮಲಾವಿ, ಮಾರಿಟಾನಿಯಾ, ನೈಜೀರಿಯಾ, ಸೆನೆಗಲ್, ಟಾಂಜಾನಿಯಾ, ಟೋಂಗಾ, ಜಾಂಬಿಯಾ ಮತ್ತು ಜಿಂಬಾಬ್ವೆ ಸೇರಿದಂತೆ ಒಟ್ಟು 15 ಹೆಚ್ಚುವರಿ ದೇಶಗಳ ಮೇಲೆ ಭಾಗಶಃ ನಿರ್ಬಂಧಗಳು ಮತ್ತು ಪ್ರವೇಶ ಮಿತಿಗಳನ್ನು ಹೇರಿದೆ.

ಕಾನೂನುಬದ್ಧ ಶಾಶ್ವತ ನಿವಾಸಿಗಳು, ಅಸ್ತಿತ್ವದಲ್ಲಿರುವ ವೀಸಾ ಹೊಂದಿರುವವರು, ಕ್ರೀಡಾಪಟುಗಳು ಮತ್ತು ರಾಜತಾಂತ್ರಿಕ ವೀಸಾ ವರ್ಗಗಳು ಮತ್ತು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಈ ಘೋಷಣೆಯು ವಿನಾಯಿತಿಯನ್ನು ನೀಡಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com