ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕು ಅಕ್ರಮ ಎಂಬ ಅಮೆರಿಕ ಘೋಷಣೆಗೆ ಆಸ್ಟ್ರೇಲಿಯಾ ಬೆಂಬಲ!ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕನ್ನು ಅಕ್ರಮ ಎಂಬ ಅಮೆರಿಕಾದ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾ ಸಹ ಧ್ವನಿಗೂಡಿಸಿದೆ.
ಅಮೆರಿಕ: 2008ರ ಮುಂಬೈ ದಾಳಿ ಸಂಚುಕೋರ ಉಗ್ರ ರಾಣಾ ಜಾಮೀನು ಅರ್ಜಿ ವಜಾ2008ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧನಕ್ಕೀಡಾಗಿರುವ ದಾಳಿ ಪ್ರಕರಣದ ಪ್ರಧಾನ ಸಂಚುಕೋರರಲ್ಲಿ ಒಬ್ಬನಾಗಿರುವ ಉದ್ಯಮಿ ತಹವ್ವೂರ್ ರಾಣಾನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪಿಒಕೆ ಇಲ್ಲದ ಭೂಪಟ, ಜಿನ್ನಾ ಕುರಿತು ಅಸ್ಪಷ್ಟ ಮಾಹಿತಿ, 100ಕ್ಕೂ ಪಠ್ಯಪುಸ್ತಕ ಬ್ಯಾನ್ ಮಾಡಿ ಪಾಕ್!ಪಾಕಿಸ್ತಾನದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮೂದಿಸಿಲ್ಲದ, ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಇದ್ದ 100ಕ್ಕೂ ಹೆಚ್ಚು ಪಠ್ಯಪುಸ್ತಕವನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ರದ್ದುಗೊಳಿಸಿದೆ.
ಪ್ರತೀಕಾರ: ಚೆಂಗ್ಡು ನಲ್ಲಿರುವ ಅಮೆರಿಕ ದೂತವಾಸ ಕಚೇರಿ ಸ್ಥಗಿತಕ್ಕೆ ಚೀನಾ ಆದೇಶಹೂಸ್ಟನ್ ನಲ್ಲಿ ಚೀನಾ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾಗಿರುವ ಚೀನಾ, ಚೆಂಗ್ಡುವಿನಲ್ಲಿರುವ ಅಮೆರಿಕಾದ ದೂತವಾಸ ಕಚೇರಿ ಸ್ಥಗಿತಕ್ಕೆ ಆದೇಶ ನೀಡಿದೆ.
ಕೊರೋನಾ ಆರ್ಭಟಕ್ಕೆ ಅಮೆರಿಕಾ ಕಂಗಾಲು: ಒಂದೇ ದಿನ 76,570 ಮಂದಿಯಲ್ಲಿ ಸೋಂಕು ಪತ್ತೆ, 1,225 ಮಂದಿ ಸಾವುಕೊರೋನಾ ರೌದ್ರನರ್ತನಕ್ಕೆ ಅಮೆರಿಕಾ ಕಂಗಾಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 76,570 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಅಮೆರಿಕಾದಲ್ಲಿ ಮುಂದುವರೆದ ಕೊರೋನಾ ಅಬ್ಬರ: 24 ಗಂಟೆಗಳಲ್ಲಿ 63,937 ಮಂದಿಯಲ್ಲಿ ಸೋಂಕು ಪತ್ತೆಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಬೆನ್ನು ಬಿಡದಂತೆ ಕಾಡುತ್ತಿದ್ದು, ಇದರಂತೆ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 63,937 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ವಿಶ್ವದಾದ್ಯಂತ 24 ಗಂಟೆಗಳಲ್ಲಿ 2,78,877 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 1.53 ಕೋಟಿಗೆ ಏರಿಕೆವಿಶ್ವದಾದ್ಯಂತ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2,78,877 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಈ ವರೆಗೂ ವಿವಿಧ ದೇಶಗಳಲ್ಲಿ ಪತ್ತೆಯಾಗಿರುವ ಒಟ್ಟು ಸೋಂಕಿತರ ಸಂಖ್ಯೆ 15,374,394ಕ್ಕೆ ಏರಿಕೆಯಾಗಿದೆ.
ಮುಂದಿನ ವರ್ಷದ ಆರಂಭದವರೆಗೆ ಕೋವಿಡ್-19 ಲಸಿಕೆ ನಿರೀಕ್ಷಿಸಬೇಡಿ: ಡಬ್ಲ್ಯೂಎಚ್ ಒಕೊನೆಯ ಹಂತದ ಪ್ರಯೋಗದೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ದದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ, ಮುಂದಿನ ವರ್ಷದ ಆರಂಭದವರೆಗೂನಿರೀಕ್ಷಿಸಲಾಗದು ಎಂದು ಡಬ್ಲುೂಎಚ್ ಒ ತಜ್ಞರು ಹೇಳಿದ್ದಾರೆ.
ಹೂಸ್ಟನ್ ನಲ್ಲಿರುವ ದೂತವಾಸ ಕಚೇರಿ ತೆರವಿಗೆ ಅಮೆರಿಕ ಸೂಚನೆ: ಚೀನಾದಿಂದ ಪ್ರತೀಕಾರದ ಎಚ್ಚರಿಕೆ!ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿ ತೆರವುಗೊಳಿಸಲು ಅಮೆರಿಕ ಚೀನಾಗೆ ಸೂಚನೆ ನೀಡಿದ್ದು ನೀಡಿದ್ದು ಅಮೆರಿಕ-ಚೀನಾ ನಡುವಿನ ಶೀತಲ ಸಮರ ಮತ್ತೊಂದು ಹಂತ ತಲುಪಿದೆ.
ಕರೋನ ಸೋಂಕು ಪರೀಕ್ಷೆ, ಅಮೆರಿಕ ಮೊದಲು, ಭಾರತ ಸೆಕೆಂಡ್!ಕರೊನ ಸೋಂಕು ತಡೆಯುವಲ್ಲಿ, ಪರೀಕ್ಷೆ ಮಾಡುವಲ್ಲಿ ಯಾರು ಮೊದಲು? ಯಾರು ಎರಡನೆಯವರು..??
ಪೋಷಕರನ್ನು ಹತ್ಯೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು ಗುಂಡಿಕ್ಕಿ ಕೊಂದ ಬಾಲಕಿತನ್ನ ಹೆತ್ತವರನ್ನು ಕಣ್ಣೆದುರೇ ಮನೆಯಿಂದ ಎಳೆದೊಯ್ದು ಕೊಲೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು 15 ವರ್ಷ ಪ್ರಾಯದ ಖಮರ್ ಗುಲ್ ಎಂಬ ಬಾಲಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಘೋರ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜೀಸಸ್ ಬದಲು ಕಮ್ಯುನಿಸ್ಟ್ ನಾಯಕರ ಭಾವಚಿತ್ರ ಹಾಕಲು ಕ್ರೈಸ್ತರ ಮೇಲೆ ಚೀನಾದಲ್ಲಿ ಒತ್ತಡಚೀನಾದಲ್ಲಿ ಕ್ರೈಸ್ತ ಮತಾನುಯಾಯಿಗಳಿಗೆ ಅವರ ಮನೆಗಳಲ್ಲಿ ಜೀಸಸ್ ನ ಫೋಟೋಗಳನ್ನು ತೆಗೆದು ಕಮ್ಯುನಿಸ್ಟ್ ನಾಯಕರ ಫೋಟೊಗಳನ್ನು ಹಾಕುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ.
ಅಮೆರಿಕದ ಅಲಾಸ್ಕಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆಅಮೆರಿಕದ ಅಲಾಸ್ಕಾದ ಪೆನಿನ್ಸುಲಾದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ ಎಂದು ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಭಾರತೀಯ ಮೂಲದ ದಾದಿಗೆ ಸಿಂಗಾಪುರ ಪ್ರೆಸಿಡೆಂಟ್ ಅವಾರ್ಡ್ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.
ಕೊರೋನಾ ವಿರುದ್ಧ ಮೊದಲು ಲಸಿಕೆ ಕಂಡು ಹಿಡಿದಿದ್ದೇ ಆದರೆ, ಚೀನಾದೊಂದಿಗೆ ಕೆಲಸ ಮಾಡಲು ಅಮೆರಿಕಾ ಸಿದ್ಧ: ಟ್ರಂಪ್ಕೊರೋನಾ ವೈರಸ್ ವಿರುದ್ಧ ಮೊದಲು ಯಶಸ್ವಿಯಾಗಿ ಲಸಿಕೆ ಕಂಡು ಹಿಡಿದ್ದೇ ಆದರೆ, ಚೀನಾದೊಂದಿಗೆ ಕೆಲಸ ಮಾಡಲು ಅಮೆರಿಕಾ ಸಿದ್ಧವಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!