ಹೌಡಿಯಲ್ಲಿ ಪಾಕ್ ಕುರಿತ ಮೋದಿ ಭಾಷಣ ಆಕ್ರಮಣಕಾರಿಯಾಗಿತ್ತು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಹೌಡಿಯಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ್ದ ಭಾಷಣ ಆಕ್ರಮಣಕಾರಿಯಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಇಬ್ಬರೂ ಒಪ್ಪಿದರೆ ಕಾಶ್ಮೀರಕ್ಕಾಗಿ ಉತ್ತಮ ಮಧ್ಯಸ್ಥಗಾರನಾಗುವೆ: ಪಾಕ್ ಪ್ರಧಾನಿಗೆ ಟ್ರಂಪ್ ವಾಗ್ದಾನಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಅಮೆರಿಕಾಗೆ ಆಗಮಿಸಿದ್ದು ಇಂದು ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
ಮಾತನಾಡುವ ಸಮಯ ಮುಗಿದಿದೆ, ಜಗತ್ತೀಗ ಕೆಲಸ ಮಾಡಬೇಕಿದೆ: ಯುಎನ್ ಹವಾಮಾನ ಶೃಂಗದಲ್ಲಿ ಪಿಎಂ ಮೋದಿಏಕಬಳಕೆ ಪ್ಲ್ಯಾಸ್ಟಿಕ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಒಂದು ಬೃಹತ್ ಆಂದೋಲನಕ್ಕೆ ನಾವು ಈ ಸ್ವಾತಂತ್ರ ದಿನದಂದು ಕರೆ ನೀಡಿದ್ದೇವೆ. ಇದು ಜಾಗತಿಕ ಮಟ್ಟದಲ್ಲಿ ಏಕಬಳಕೆಯ ಪ್ಲ್ಯಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವದ ಅತ್ಯಂತ ಪವರ್ಫುಲ್ ಸೆಲ್ಫಿ: ಮೋದಿ-ಟ್ರಂಪ್ ಜೊತೆ ಮಿಂಚಿದ ಕರ್ನಾಟಕದ ಬಾಲಕ!ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
'ಹೌಡಿ ಮೋದಿ ಫ್ಲಾಪ್ ಶೋ' ಒಳಒಳಗೆ ಉರಿದುಕೊಳ್ಳುತ್ತಿರುವ ಪಾಕ್ ಸಚಿವನಿಂದ ಕಿಡಿ, ಫವಾದ್ ಕಾಲೆಳೆದ ನೆಟಿಗರು!ಅಮೆರಿಕದ ಹ್ಯೂಸ್ಟನ್ ನಗರದ ಎನ್ ಆರ್ ಜಿ ಕ್ರೀಡಾಂಗಣದ ತುಂಬೆಲ್ಲಾ ಮೋದಿ ಮೋದಿ ಎಂಬ ಹರ್ಷೋದ್ಗಾರ. ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದ ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ ಪಾಕಿಸ್ತಾನ ಮಾತ್ರ ಒಳ ಒಳಗೆ ಉರಿದುಕೊಳ್ಳುತ್ತಾ ಈ ಕಾರ್ಯಕ್ರಮ ಫ್ಲಾಪ್ ಶೋ ಎಂದು ಹೇಳಿದೆ.
5 ಭಾರತೀಯೇತರ ಕುಟುಂಬಗಳನ್ನು ಪ್ರತೀವರ್ಷ ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ: ಅನಿವಾಸಿ ಭಾರತೀಯರಿಗೆ ಮೋದಿಪ್ರತೀವರ್ಷ 5 ಭಾರತೀಯೇತರ ಕುಟುಂಬಗಳನ್ನು ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ ಎಂದು ಅನಿವಾಸಿ ಭಾರತೀಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ಉಗ್ರರಿಗೆ ಪೋಷಣೆ ನೀಡುತ್ತಿರುವುದು ಯಾರೆಂದು ಇಡೀ ವಿಶ್ವಕ್ಕೆ ಗೊತ್ತಿದೆ: ಟ್ರಂಪ್ ಎದುರೇ ಪಾಕ್"ಗೆ ಮೋದಿ ಚಾಟಿ!ಉಗ್ರರಿಗೆ ಪೋಷಣೆ ನೀಡುತ್ತಿರುವುದು ಯಾರೆಂಬುದು ಇಡೀ ವಿಶ್ವಕ್ಕೇ ಗೊತ್ತಿದೆ. 9/11 ಹಾಗೂ 26/11 ದಾಳಿಯ ಮೂಲಕ ಕೆದಕಿದರೆ, ಅವರು ಯಾರೆಂದು ತಿಳಿಯುತ್ತದೆ ಎಂದು ಹ್ಯೂಸ್ಟನ್'ನಲ್ಲಿ ಭಾನುವಾದ ನಡೆದ ಹೌಡಿ ಮೋದಿ ಸಮಾವೇಶದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರೇ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.
ಹ್ಯೂಸ್ಟನ್ ಕಾರ್ಯಕ್ರಮದಲ್ಲಿ ಭಾಗಿಯಾದ ಟ್ರಂಪ್ ಗೆ ಧನ್ಯವಾದ, ಯುಎಸ್-ಭಾರತ ಬಾಂಧವ್ಯಕ್ಕೆ ಮಹತ್ವದ ಕ್ಷಣ ಎಂದ ಮೋದಿಹ್ಯೂಸ್ಟನ್ ನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ.
ಹೌಡಿ ಮೋದಿ: ಪೋಡಿಯಂ ನಲ್ಲಿ ಅಧ್ಯಕ್ಷರ ಲಾಂಛನದ ಬದಲು ರಾರಾಜಿಸಿದ ಇಂಡೋ-ಯುಎಸ್ ಧ್ವಜ; ಐತಿಹಾಸಿಕ ಘಟನೆ!ಸದೃಢಗೊಳ್ಳುತ್ತಿರುವ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾಗಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಪೋಡಿಯಂ ಲೆಕ್ಟರ್ನ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಲಾಂಛನದ ಬದಲು ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸಿದೆ.
ವಿಶ್ವಸಂಸ್ಥೆ ಸಾಮಾನ್ಯಸಭೆ 74ನೇ ಅಧಿವೇಶನ: ಪ್ರಧಾನಿ ಮೋದಿ ನ್ಯೂಯಾರ್ಕ್ ಗೆ ಆಗಮನಹ್ಯೂಸ್ಟನ್ ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 50 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಕಾರ್ಯಕ್ರಮದ ನಂತರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ಗೆ ಆಗಮಿಸಿದ್ದಾರೆ.
ಪಾಕ್ ಆರ್ಥಿಕ ಮುಗ್ಗಟ್ಟು: ಇಮ್ರಾನ್ ಖಾನ್ ಯುಎಸ್ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನವನ್ನೇ ನೀಡಿದ ಸೌದಿ ರಾಜ!ಪಾಕಿಸ್ತಾನದ ಆರ್ಥಿಕತೆ ತೀವ್ರವಾಗಿ ಹದಗೆಟ್ಟಿದ್ದು, ಅಕ್ಷರಸಹ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಸ್ಥಿತಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಪಾಕ್ ಪ್ರಧಾನಿಯ ಅಮೆರಿಕ ಪ್ರವಾಸಕ್ಕೆ ಸೌದಿ ಅರೇಬಿಯಾ ರಾಜ ನೆರವಾಗಿದ್ದಾರೆ.
ಪ್ರಧಾನಿ ಮೋದಿಗಾಗಿ ವಿಶೇಷ ನಮೋ ಥಾಲಿ ಸಿದ್ಧಪಡಿಸಿದ ಅಮೆರಿಕಾದ ಬಾಣಸಿಗ!ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೆರಿಕಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ತಂಗಿರುವ ಹೋಟೆಲ್ ವೊಂದರ ಬಾಣಸಿಗ ಮೋದಿಗಾಗಿ ವಿಶೇಷ ಆಹಾರವನ್ನು ತಯಾರಿಸಿದ್ದಾರೆ.
ಪಾಕಿಸ್ತಾನದಿಂದ ಸಿಂಧ್ ವಿಮೋಚನೆಗೆ ಹೆಚ್ಚಿದ ಕೂಗು: ಪ್ರಧಾನಿ ಮೋದಿಗೆ ಕಾರ್ಯಕರ್ತರ ಮೊರೆಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ ಜನತೆ ಸ್ವಾತಂತ್ರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಮೊರೆ ಇಟ್ಟಿದ್ದಾರೆ.
ಒಂದೇ ವೇದಿಕೆಯಲ್ಲಿ ಮೋದಿ-ಟ್ರಂಪ್, ಪಾಕ್ ಪ್ರಧಾನಿಗೆ ಇಮ್ರಾನ್ ಖಾನ್ ಗೆ ಕಪಾಳ ಮೋಕ್ಷ ಇದ್ದಹಾಗೆ: ಶಲಭ್ ಕುಮಾರ್ಒಂದೇ ವೇದಿಕೆಯಲ್ಲಿ ಭಾರತದ ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಣಿಸಿಕೊಳ್ಳುತ್ತಿದ್ದು, ಇದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಿಕ್ಕ ಕಪಾಳ ಮೋಕ್ಷ ಎಂದು 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್ ಅವರ ಪ್ರಚಾರ ಸಲಹೆಗಾರರಾಗಿದ್ದ ಶಲಭ್ ಶಲ್ಲಿ ಕುಮಾರ್ ಹೇಳಿದ್ದಾರೆ.
ಮತ್ತೆ ಟ್ರೋಲ್ ಗೀಡಾದ ಇಮ್ರಾನ್ ಖಾನ್; ಮೋದಿ ವರ್ಸಸ್ ಇಮ್ರಾನ್ ಆತಿಥ್ಯದ ಬಗ್ಗೆ ಚರ್ಚೆ!ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಗೆ ಅಮೆರಿಕಾಕ್ಕೆ ಬಂದಿಳಿದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಸ್ವಾಗತ ಆತಿಥ್ಯದ ಬಗ್ಗೆ ನೆಟ್ಟಿಗರ ಟ್ವಟ್ಟರ್ ನಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?