ದೇಶ

ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ ಹೇರುವ ಮುನ್ನವೇ 265 ಕೋಟಿ ರೂ. ಡ್ರಾ ಮಾಡಿದ್ದ ಗುಜರಾತ್ ಸಂಸ್ಥೆ

Srinivasamurthy VN

ವಡೋದರಾ: ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ ಹೇರುವ ಕೇವಲ 2 ದಿನಗಳ ಮುಂಚೆ ಗುಜರಾತ್ ನ ವಡೋದರಾ ಮೂಲದ ಖಾಸಗಿ ಸಂಸ್ಥೆ 265 ಕೋಟಿ ರೂ. ಹಣವನ್ನು ವಿತ್ ಡ್ರಾ ಮಾಡಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್‌ಗೆ ನಿಷೇಧಿತ ಆದೇಶ (ಮೊರಟೋರಿಯಮ್ ಆರ್ಡರ್) ವಿಧಿಸುವ ಎರಡು ದಿನಗಳ ಮೊದಲು ವಡೋದರ ಮಹಾನಗರ ಪಾಲಿಕೆಯ (ವಿಎಂಸಿ) ವಡೋದರ ಸ್ಮಾರ್ಟ್ ಸಿಟಿ ಡೆವಲಪ್‌ಮೆಂಟ್ ಕಂಪೆನಿಯು ವಿಶೇಷ ಉದ್ದೇಶದ ವಾಹನ (ಎಸ್‌ಪಿವಿ) ಯೆಸ್ ಬ್ಯಾಂಕ್‌ನಿಂದ 265 ಕೋಟಿ ರೂ. ಹಣವನ್ನು ಡ್ರಾ ಮಾಡಿಕೊಂಡಿದೆ.

ಈ ಕುರಿತಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಎಸ್‌ಪಿವಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ವಿಎಂಸಿಯ ಉಪ ಆಯುಕ್ತ ಸುಧೀರ್ ಪಟೇಲ್ ಅವರು, 'ಸ್ಮಾರ್ಟ್ ಸಿಟಿ ಮಿಶನ್‌ನ ಅಡಿ ಮಂಜೂರಾಗಿರುವ ಹಣವನ್ನು ಕೇಂದ್ರ ಸರಕಾರದಿಂದ ಸ್ವೀಕರಿಸಿದ್ದೆವು. ಅದನ್ನು ಸ್ಥಳೀಯ ಯೆಸ್ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇಟ್ಟಿದ್ದೆವು. ಯೆಸ್ ಬ್ಯಾಂಕ್ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ಎರಡು ದಿನಗಳ ಹಿಂದೆಯೇ ಹಣವನ್ನು ಡ್ರಾ ಮಾಡಿಕೊಂಡಿದ್ದೇವೆ. ಬ್ಯಾಂಕ್ ಆಫ್ ಬರೋಡದ ಹೊಸ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಗುರುವಾರದಂದು ಆರ್‌ಬಿಐ, ಯೆಸ್ ಬ್ಯಾಂಕ್‌ ಆರ್ಥಿಕ ಬಿಕ್ಕಟ್ಟಿನ ನೆಪ ನೀಡಿ ಬ್ಯಾಂಕ್ ನ ಆಡಳಿತ ಮಂಡಳಿಯನ್ನು ವಜಾ ಮಾಡಿ ಬ್ಯಾಂಕ್ ನಿರ್ವಹಣೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು. ಅಲ್ಲದೆ ಬ್ಯಾಂಕ್ ನ ಪ್ರತಿಯೊಬ್ಬ ಖಾತೆದಾರರು 50,000ಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯುವಂತಿಲ್ಲ ಎಂದು ನಿರ್ಬಂಧ ಹೇರಿತ್ತು.

SCROLL FOR NEXT