ದೇಶ

ಭಾರತದ ಸಂಸ್ಥೆಗೆ ನೊಬೆಲ್ ಸಮನಾದ ರೈಟ್ ಲೈವ್ಲಿಹುಡ್ ಪ್ರಶಸ್ತಿ: ಮಕ್ಕಳ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆ

Harshavardhan M

ನವದೆಹಲಿ: ನೊಬೆಲ್ ಗೆ ಸಮನಾದ ಪ್ರಶಸ್ತಿ ಎಂದೇ ಹೆಸರಾದ 2021 ಸಾಲಿನ ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಈ ಬಾರಿ ನಾಲ್ಕು ಮಂದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು 'ಅಲ್ಟರ್ನೇಟಿವ್ ನೊಬೆಲ್' ಎಂದೇ ಕರೆಯಲಾಗುತ್ತದೆ. 

ಈ ಬಾರಿ ಪ್ರಶಸ್ತಿಗೆ ಭಾಜನರಾದ ನಾಲ್ಕು ಮಂದಿಯಲ್ಲಿ ಭಾರತದ LIFE(Legal Initiative for Forest and Environment) ಎನ್ ಜಿ ಒ ಕೂಡಾ ಸೇರಿದೆ. ಸಮಾಜದ ಕೆಳವರ್ಗದ ಜನರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿಸುವ ಕೆಲಸದಲ್ಲಿ ಈ ಸಂಸ್ಥೆ ನಿರತವಾಗಿದೆ. 

ಅಲ್ಲದೆ LIFE ಸಂಸ್ಥೆ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದೆ. 2005ರಲ್ಲಿ ಇಬ್ಬರು ವಕೀಲರಾದ ರಿತ್ವಿಕ್ ದತ್ತಾ ಮತ್ತು ರಾಹುಲ್ ಚೌಧರಿ LIFE ಸಂಸ್ಥೆಯನ್ನು ಪ್ರಾರಂಭಿಸಿದ್ದರು.

ಕೆನಡಾದ ಸಾಮಾಜಿಕ ಕಾರ್ಯಕರ್ತೆ ಫ್ರೀಡಾ ಹ್ಯೂಸನ್, ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ನಡೆಸುತ್ತಿರುವ ಕೆಮರೂನಿನ ವಾಂಡೋ ಮತ್ತು ರಷ್ಯಾದ ಪರಿಸರ ಹೋರಾಟಗಾರ ವ್ಲಾದಿಮಿರ್ ಸ್ಲಿವ್ಯಾಕ್ ಪ್ರಶಸ್ತಿಗೆ ಭಾಜನರಾದ ಇತರೆ ಮೂವರು.

SCROLL FOR NEXT