ಬಯಲಲ್ಲಿ ಆಟವಾದುತ್ತಿರುವ ವಿದ್ಯಾರ್ಥಿನಿಯರು 
ವಿಶೇಷ

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗ

ಇದಲ್ಲದೆ ಸಾಂಪ್ರದಾಯಿಕ ಆಟಗಳನ್ನು ಆಡುವುದರಿಂದ ಗಣಿತ ಲೆಕ್ಕ ಬಿಡಿಸುವುದು ಕೂಡಾ ಸುಲಭವಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾಂಪ್ರದಾಯಿಕ ಆಟಗಳ ಮಹತ್ವವನ್ನು ಅರಿತಿದ್ದಾರೆ.

ಚೆನ್ನೈ:  ತಮಿಳುನಾಡಿನ ಒತಾಕಡೈ ಎಂಬಲ್ಲಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ ಹೋಗಿದ್ದಾರೆ ಎಲ್ಲಿನ ಶಿಕ್ಷಕರು. ಈ ಪ್ರಯೋಗಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. 

ಈ ಪ್ರಯೋಗಕ್ಕೆ ಸರ್ಕಾರಿ ಅನುದಾನವಿಲ್ಲ, ಮುಖ್ಯೋಪಾಧ್ಯಯರು ತಮ್ಮ ಹಣದಿಂದಲೇ ಈ ಯೋಜನೆ ಸಾಕಾರಗೊಳಿಸಿದ್ದಾರೆ ಎನ್ನುವುದು ವಿಶೇಷ. ಮಕ್ಕಳಿಗೆ ಆಮಿಷ ಒಡ್ಡಲು ಸಾಂಪ್ರದಾಯಿಕ ಆಟಗಳನ್ನೇ ಏಕೆ ಬಳಸಿಕೊಂಡಿರಿ ಎಂಬ ಪ್ರಶ್ನೆಗೆ ಮುಖ್ಯೋಪಾಧ್ಯಾಯಿನಿ ಸಸಿತ್ರಾ, ಮೊಬೈಲ್ ಗೇಮುಗಳಿಂದ ಮಕ್ಕಳ ಮನಸ್ಸನ್ನು ಹೊರಗೆ ತರುವ ಉದ್ದೇಶ ಇದರ ಹಿಂದಿತ್ತು ಎಂದು ತಿಳಿಸಿದ್ದಾರೆ.

ಶಾಲೆಯ ನೂತನ ಪ್ರಯೋಗದ ಬಗ್ಗೆ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದಾರೆ. ತೆನ್ ಮೋಳಿ ಎಂಬ ವಿದ್ಯಾರ್ಥಿನಿ 'ನಾನು ಚೆಸ್ ಪ್ಲೇಯರ್. ಈಗ ಬಯಲಲ್ಲಿ, ಮರದ ಕೆಳಗೆ ಕುಳಿತುಕೊಂಡು ಚೆಸ್ ಆಡುವ ಅನುಭವವನ್ನು ಹಿಂದೆಂದೂ ಕಂಡಿಲ್ಲ' ಎಂದು ಸಂಸಸ ವ್ಯಕ್ತಪಡಿಸುತ್ತಾಳೆ.

ಇದಲ್ಲದೆ ಸಾಂಪ್ರದಾಯಿಕ ಆಟಗಳನ್ನು ಆಡುವುದರಿಂದ ಗಣಿತ ಲೆಕ್ಕ ಬಿಡಿಸುವುದು ಕೂಡಾ ಸುಲಭವಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಡಿಕೆ ಶಿವಕುಮಾರ್ ಪತ್ರ!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video