ಬೈಟುಕಾಫಿ

ಏಡಿ ಮೋಡಿ

ಬೆದರಿಕೆ ಹುಟ್ಟಿಸುವ ಆಕಾರದ ಕೊಂಬು, ಭಾರಿ ಗಾತ್ರದ ಈ ಏಡಿ ಒಂದೇ ಒಂದು ಸಿಕ್ಕರೂ ಸಾಕು, ಭರಪೂರ ಕಾಸು.

ಈ ಏಡಿಗೆ ಪ್ರತಿ ಕಿ.ಗ್ರಾಂ.ಗೆ 400ರಿಂದ 450 ತನಕ ಬೆಲೆ ಇದೆ. ಒಂದು ಏಡಿ 2 ಕಿಲೊ ತನಕ ತೂಗುತ್ತದೆ. ಅಂದರೆ ಒಂದು ಏಡಿ ಹಿಡಿದರೆ ಆತನಿಗೆ 800-900 ಆದಾಯ ಗ್ಯಾರಂಟಿ. ಚಿಕ್ಕದಾದರೂ 1 ಕಿಲೊಗಂತೂ ಮೋಸ ಇಲ್ಲ. ಆ ದಿನದ ಮಟ್ಟಿಗೆ ಅಷ್ಟು ಗಳಿಕೆ ಸಾಕು. ಕೊಂಬುಗಳನ್ನು ಕಟ್ಟಿ ಮಾರಾಟಕ್ಕೆ ಹೋದರೆ ಕಾಸು ಗಿಟ್ಟುತ್ತದೆ.

ಈ ಏಡಿಯ ಮೋಡಿಗೆ ಬೆರಗಾಗಲೇಬೇಕು. ದಿನದ ಸಂಭ್ರಮಕ್ಕೆ ಒಂದೇ ಒಂದು ಏಡಿ ಸಿಕ್ಕರೆ ಸಾಕು. ಭರಪೂರ ಕಾಸು. ನೆಮ್ಮದಿಯ ನಿದ್ದೆ. ಕಾರವಾರದಿಂದ ಸಿಂಗಪುರಕ್ಕೆ ಪ್ರಯಾಣಿಸುವ ಈ ಏಡಿಯ ಹಿಂದೆ ಸಾವಿರಾರು ಜನರಿದ್ದಾರೆ.
ಇದು ರಕ್ಕಸಾಕಾರದ ಮಡ್ ಕ್ರ್ಯಾಬ್. ಸ್ಥಳೀಯರು ಇದಕ್ಕೆ 'ನುಕ್ ಏಡಿ' ಎನ್ನುತ್ತಾರೆ. ಬೆದರಿಕೆ ಹುಟ್ಟಿಸುವ ಆಕಾರದ ಕೊಂಬು, ಭಾರಿ ಗಾತ್ರದ ಈ ಏಡಿ ನೋಡುಗರಿಗೆ ಅಚ್ಚರಿ ಹುಟ್ಟಿಸುತ್ತದೆ.

ನಾಮ ಹಲವು
ಉತ್ತರ ಕನ್ನಡದ ಕುಮಟಾದಿಂದ ಕಾರವಾರ ತಾಲೂಕಿನ ಸದಾಶಿವಗಢ ತನಕ ಈ ಏಡಿ ದೊರೆಯುತ್ತದೆ. ನುಕ್ ಏಡಿ, ಲುಕ್ಕೇರಿ ಎಸಡಿ, ಕಂಡ್ಲ ಎಸಡಿ, ಕುರ್ಲೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಸಮುದ್ರದಂಚಿನ ಗಜನಿ ಹಾಗೂ ಕೃಷಿ ಭೂಮಿಯಲ್ಲಿ ಈ ಏಡಿಗಳು ಸಿಗುವುದು ಹೆಚ್ಚು. ದಿನವಿಡಿ ಜಾಲಾಡಿದಾಗ ಒಂದು ಏಡಿ ಸಿಕ್ಕರೆ ಅಂದಿನ ಬೇಟೆ ಮುಗಿಯಿತು. ಕುಮಟಾದ ಹಿರೇಗುತ್ತಿ, ಮಾದನಗೇರಿ, ನುಶಿಕೋಟೆ ಮತ್ತಿತರ ಪ್ರದೇಶದಲ್ಲಿ ಮಡ್ ಕ್ರ್ಯಾಬ್ ಹಿಡಿಯುವುದರಲ್ಲೇ ಕೆಲ ಕುಟುಂಬಗಳು ತೊಡಗಿಕೊಂಡಿವೆ.

ಏಡಿಗಾಗಿ ಹುಡುಕಾಟ
ಕಾರವಾರ, ಕುಮಟಾ ಮತ್ತಿತರ ಕಡೆಗಳಲ್ಲಿ ಈ ಏಡಿಗಳನ್ನು ಕೊಳ್ಳಲು ಕೇರಳದ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದಾರೆ. ಏಡಿ ಹಿಡಿಯುವವರು, ಮಾರಾಟಗಾರರು ಹೀಗೆ ಸಾವಿರಾರು ಜನರು ಏಡಿಯ ಹಿಂದೆ ಇದ್ದಾರೆ. ಹಾಗಂತ ಒಬ್ಬ ಇಡಿ ದಿನ ಜಾಲಾಡಿದರೂ ಹೆಚ್ಚೆಂದರೆ 3-4 ಏಡಿಗಳು ಆತನಿಗೆ ಸಿಗಲು ಸಾಧ್ಯ. ಅದಕ್ಕಿಂತ ಹೆಚ್ಚು ದೊರೆಯಲಾರದು. ಹಗಲು ರಾತ್ರಿ ಏಡಿಗಾಗಿ ಹುಡುಕಾಟ ನಡೆಸುವವರೂ ಇದ್ದಾರೆ.

ಕೇರಳಿಗರಿಂದ ಫೇಮಸ್
ಈ ಏಡಿಗೆ ಹಿಂದೆ ಮಾರುಕಟ್ಟೆಯೇ ಇರಲಿಲ್ಲ. ಸ್ಥಳೀಯರು ಹೆಚ್ಚಾಗಿ ಉಪಯೋಗಿಸುತ್ತಲೂ ಇರಲಿಲ್ಲ. ಆದರೆ ಕೇರಳದ ವ್ಯಾಪಾರಿಗಳು ಇದನ್ನು ನೋಡಿ ಮಾರುಕಟ್ಟೆ ಒದಗಿಸಿದರು. ಅವರಿಂದಾಗಿ ನಮಗೆ ಹೆಚ್ಚು ಹಣ ದೊರೆಯುವಂತಾಯಿತು ಎಂದು ಮಾದನಗೇರಿಯ ಶೀಲಾ ಹರಿಕಂತ್ರ ಹೇಳುತ್ತಾರೆ.

ಸಿಂಗಾಪುರಕ್ಕೆ ಪ್ರಯಾಣ
ಮೊದಲೆಲ್ಲ ಈ ಏಡಿಯನ್ನು ಕೇವಲ ಸ್ಥಳೀಯವಾಗಿಯೇ ಬಳಕೆ ಮಾಡಲಾಗುತ್ತಿತ್ತು. ಯಾವಾಗ ಈ ಏಡಿ ಕೇರಳ ವ್ಯಾಪಾರಸ್ಥರ ಕಣ್ಣಿಗೆ ಬಿತ್ತೋ ಆವಾಗ ಬೃಹತ್ ಮಾರುಕಟ್ಟೆಯೇ ತೆರೆದುಕೊಂಡಿತು. ಕೇರಳಿಗರು ಸಿಂಗಾಪುರದಲ್ಲಿ ಈ ಏಡಿಗೆ ಇರುವ ಭಾರಿ ಬೇಡಿಕೆ ಪತ್ತೆ ಹಚ್ಚಿದ್ದರು. ಹೀಗಾಗಿ ಸಿಂಗಾಪುರಕ್ಕೆ ಕಳುಹಿಸುವ ಯೋಜನೆ ರೂಪಿಸಿದರು. ಕಳೆದ ಹತ್ತಾರು ವರ್ಷಗಳಿಂದ ಈ ಏಡಿ ಸಿಂಗಾಪುರಕ್ಕೆ ತೆರಳುತ್ತಿದೆ. ಬಸ್ಸಿನ ಮೂಲಕ ಬೆಂಗಳೂರು ಅಲ್ಲಿಂದ ಚೆನ್ನೈ ನಂತರ ವಿಮಾನವೇರಿ ಏಡಿಗಳು ಸಿಂಗಾಪುರಕ್ಕೆ ತೆರಳುತ್ತವೆ.

ಖಾದ್ಯಕ್ಕೆ ಬೇಡಿಕೆ
ಸಿಂಗಾಪುರದ ರೆಸ್ಟೊರೆಂಟ್ ಹಾಗೂ ರೆಸಾರ್ಟ್ಗಳಲ್ಲಿ ಏಡಿಗಳಿಂದ ತಯಾರಿಸುವ ಖಾದ್ಯಕ್ಕೆ ಭಾರಿ ಬೇಡಿಕೆ. ಎಷ್ಟು ಏಡಿಗಳನ್ನು ಹಿಡಿದರೂ ಡಿಮ್ಯಾಂಡ್ಗೆ ಕೊರತೆ ಇಲ್ಲ. ಕೇವಲ ಏಡಿಗಳ ಖಾದ್ಯವೇ ಇರುವ ರೆಸ್ಟೋರೆಂಟ್ಗಳೂ ಅಲ್ಲಿವೆ. ಇದರಿಂದ ಪ್ರತಿದಿನ ಅರಬ್ಬಿ ಸಮುದ್ರದ ತಟದಲ್ಲಿ ಹಿಡಿದ ಏಡಿಗಳು ಬಿದಿರಿನ ಬುಟ್ಟಿಯಲ್ಲಿ ಕುಳಿತು ಸಿಂಗಾಪುರಕ್ಕೆ ಪ್ರಯಾಣಿಸುತ್ತವೆ.
ಕರಾವಳಿಯಲ್ಲಿ ಗಜನಿ ಭೂಮಿ ಇಂದು ಹಾಳು ಬೀಳುತ್ತಿದೆ. ಇಂತಹ ಪ್ರದೇಶದಲ್ಲಿ ಆಂಧ್ರಪ್ರದೇಶದ ಮಾದರಿಯಲ್ಲಿ ಏಡಿ ಕೃಷಿಗೆ ಅವಕಾಶ ಕಲ್ಪಿಸಿದಲ್ಲಿ ಸಾವಿರಾರು ಕುಟುಂಬ ಬದುಕು ಕಂಡುಕೊಳ್ಳಲು ಸಾಧ್ಯ. ಮಾದನಗೇರಿ ಬಳಿ ಸಾವಿರಾರು ಎಕರೆ ಗಜನಿ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ಕಾಸ್ಟಿಕ್ ಸೋಡಾ ಕಂಪನಿಗಾಗಿ ನೀಡಲಾಗಿತ್ತು. ನಂತರ ಈ ಭೂಮಿ ಮತ್ತೆ ಸರ್ಕಾರದ ವಶಕ್ಕೆ ಬಂತು. ಇಂತಹ ಭೂಮಿಯನ್ನು ಜಲಕೃಷಿಗಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕಾದ ಅಗತ್ಯವಿದೆ.

-ಚಿತ್ರ,ಲೇಖನ: ವಸಂತಕುಮಾರ್ ಕತಗಾಲ
vasant800@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!