ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸುದ್ದಿ ಸಮಾವೇಶದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಖ್ಯಾತ ಹಣಕಾಸು ತಜ್ಞ ವಿಲಿಯಂ ಮುರ್ರೆ ಅವರು, ವರ್ಷಗಳ ಹಿಂದೆ ಭಾರತ ಸರ್ಕಾರ ಕೈಗೊಂಡ ನೋಟು ನಿಷೇಧದಂತಹ ಕ್ರಮಗಳ ಪರಿಣಾಮ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ. ಈಗಾಗಲೇ ಇದರ ಪರಿಣಾಮ ಆರಂಭವಾಗಿದ್ದು, ಭವಿಷ್ಯದಲ್ಲಿ ಇನ್ನೂ ಉತ್ತಮ ಸಂಭಾವ್ಯ ಅವಕಾಶಗಳು ಭಾರತದ ಪಾಲಾಗಲಿವೆ ಎಂದು ಹೇಳಿದ್ದಾರೆ.