#MeToo: ನನಗಾಗ 15 ವರ್ಷ, 'ಶಿಶುಕಾಮಿ' ಅನು ಮಲಿಕ್ ಕಿಸ್ ಮಾಡು ನಿನಗೆ ಛಾನ್ಸ್ ಕೊಡ್ತೀನಿ ಅಂದಿದ್ರೂ: ಗಾಯಕಿ ಶ್ವೇತ

ನನಗಾಗ 15 ವರ್ಷವಿತ್ತು ಆಗ ಬಾಲಿವುಡ್ ನ ಸಂಗೀತ ನಿರ್ದೇಶಕರಾಗಿದ್ದ ಅನು ಮಲಿಕ್ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ನನ್ನನ್ನು ಚುಂಬಿಸು ನಿನಗೆ...
ಶ್ವೇತ ಪಂಡಿತ್, ಅನು ಮಲಿಕ್
ಶ್ವೇತ ಪಂಡಿತ್, ಅನು ಮಲಿಕ್
Updated on: 
ಮುಂಬೈ: ನನಗಾಗ 15 ವರ್ಷವಿತ್ತು ಆಗ ಬಾಲಿವುಡ್ ನ ಸಂಗೀತ ನಿರ್ದೇಶಕರಾಗಿದ್ದ ಅನು ಮಲಿಕ್ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ನನ್ನನ್ನು ಚುಂಬಿಸು ನಿನಗೆ ಹಾಡಲು ಅವಕಾಶ ನೀಡುತ್ತೇನೆ ಎಂದು ಹೇಳಿದ್ದರು ಎಂದು ಗಾಯಕಿ ಶ್ವೇತ ಪಂಡಿತ್ ಗಂಭೀರ ಆರೋಪ ಮಾಡಿದ್ದಾರೆ. 
ಸದ್ಯ ದೇಶದಲ್ಲಿ #MeToo ಆಂದೋಲನದ ಅಬ್ಬರ ಜೋರಾಗಿದೆ. ಈ ಮೂಲಕ ಹಲವು ನಟಿಯರು, ಗಾಯಕಿಯರು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಶ್ವೇತ ಪಂಡಿತ್ ತಮ್ಮ ಟ್ವೀಟರ್ ಖಾತೆಯಲ್ಲಿ ಅನು ಮಲಿಕ್ ವಿರುದ್ಧ ಆರೋಪ ಮಾಡಿದ್ದು ಆತ ಶಿಶುಕಾಮಿ ಎಂದು ಹೇಳಿದ್ದಾರೆ. 
ಅನು ಮಲಿಕ್ ಲೈಂಗಿಕ ಪೀಡಕ. ನನ್ನ ಬಾಲ್ಯದ ಕೆಲ ಕಹಿ ನೆನಪುಗಳನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಇಂದು ಮಾತನಾಡದಿದ್ದರೆ, ಇನ್ನೆಂದಿಗೂ ಸಾಧ್ಯವಾಗುವುದಿಲ್ಲ. ಇದು ನನ್ನ #MeToo. ಈ ಮೂಲಕ ನಾನು ಅಪ್ತಾಪ್ತ ಹೆಣ್ಣು ಮಕ್ಕಳು ಅನು ಮಲಿಕ್ ಬಗ್ಗೆ ಎಚ್ಚೆತ್ತುಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ ಎಂದರು. 
2000 ಇಸವಿಯಲ್ಲಿ ನನ್ನ ಮೊಹೋಬತೆ ಗೀತೆ ಸಖತ್ ಹಿಟ್ ಆಗಿತ್ತು. ಇದಾದ ನಂತರ 2001ರಲ್ಲಿ ಅನು ಅವರ ಮ್ಯಾನೇಜರ್ ಕಡೆಯಿಂದ ನನಗೆ ಕರೆ ಬಂದಿತ್ತು. ಕೆಲಸದ ವಿಷಯವಾಗಿ ಮಾತನಾಡಲು ನನ್ನನ್ನು ಅಂಧೇರಿ ಎಂಪೈರ್ ಸ್ಟುಡಿಯೋಗೆ ಕರೆಸಿಕೊಂಡಿದ್ದರು. 
ಅಲ್ಲಿ ನನ್ನ ಧ್ವನಿ ಪರೀಕ್ಷೆ ಮುಗಿದ ನಂತರ ಆತ ನನಗೆ ಮುತ್ತು ಕೊಟ್ಟರೆ ನಿನಗೆ ಒಂದು ಹಾಡು ಹಾಡಲು ಅವಕಾಶ ನೀಡುತ್ತೇನೆ ಎಂದಿದ್ದರು. ಇದು ನನ್ನ ಜೀವನದಲ್ಲಿ ಕರಾಳ ಅನುಭವ. ಇದರಿಂದ ನಾನು ಕೆಲ ಕಾಲ ಖಿನ್ನತೆಗೂ ಒಳಗಾಗಿದ್ದೆ. ಜೊತೆಗೆ ಈ ವಿಷಯವನ್ನು ಪೋಷಕರ ಬಳಿ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com