'Toxic' advance booking: ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ 1.2 ಮಿಲಿಯನ್ ಡಾಲರ್ ಕಲೆಕ್ಷನ್! ಭಾರತದಲ್ಲಿ ನಾಳೆಯಿಂದ ಬುಕಿಂಗ್‌ ಆರಂಭ, ಟಿಕೆಟ್ ದರ ಎಷ್ಟಿರಲಿದೆ?

Toxic' ಅಮೆರಿಕದಲ್ಲಿ ಮುಂಗಡ ಬುಕಿಂಗ್ ಮೂಲಕ $121,258 ಗಳಿಸಿದೆ. ಈ ಚಿತ್ರವು 204 ಸ್ಥಳಗಳು ಮತ್ತು 589 ಪ್ರದರ್ಶನ ಕಾಣುತ್ತಿದ್ದು, 5,550 ಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ ಆಗಿದೆ
Yash
ಟಾಕ್ಸಿಕ್ ನಲ್ಲಿ ಯಶ್
Updated on

'Toxic: A Fairy Tale for Grown-Ups'ಚಿತ್ರದ ಮೂಲಕ ಯಶ್ ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ, ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಅಮೆರಿಕದಲ್ಲಿ ಭರ್ಜರಿ ಅಡ್ವಾನ್ಸ್ ಬುಕಿಂಗ್ (advance bookings)ಆಗಿದ್ದು, ಇಲ್ಲಿಯವರೆಗೆ 5,500 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಅಮೆರಿಕದಲ್ಲಿ 'Toxic'ಗೆ ಭರ್ಜರಿ ಮುಂಗಡ ಬುಕಿಂಗ್: 'ವೆಂಕಿ ಬಾಕ್ಸ್ ಆಫೀಸ್' (Venky Box Office) ವರದಿಯ ಪ್ರಕಾರ, 'Toxic' ಅಮೆರಿಕದಲ್ಲಿ ಮುಂಗಡ ಬುಕಿಂಗ್ ಮೂಲಕ $121,258 ಗಳಿಸಿದೆ. ಈ ಚಿತ್ರವು 204 ಸ್ಥಳಗಳು ಮತ್ತು 589 ಪ್ರದರ್ಶನ ಕಾಣುತ್ತಿದ್ದು, 5,550 ಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ ಆಗಿದೆ. ಇದರ ಮುಂಗಡ ಮಾರಾಟದಲ್ಲಿ ಈಗಾಗಲೇ 1 ಕೋಟಿ ರೂ.ಗಳ ಗಡಿಯನ್ನು ದಾಟಿದೆ. ಬಿಡುಗಡೆಗೆ ಮುನ್ನವೇ ಬುಕಿಂಗ್ ಮುಂದುವರಿದಿರುವುದರಿಂದ, ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಚಿತ್ರದ ಮುಂಗಡ ಟಿಕೆಟ್ ಮಾರಾಟದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

1 million BMS interests: 'BookMyShow'ನಲ್ಲಿ 1 ಮಿಲಿಯನ್ ಆಸಕ್ತಿ (interests) ಪಡೆದ 13ನೇ ಭಾರತೀಯ ಚಿತ್ರವಾಗಿ 'Toxic' ಹೊರಹೊಮ್ಮಿದೆ: 'Toxic' ಚಿತ್ರವು 'BookMyShow'ನಲ್ಲಿ 1 ಮಿಲಿಯನ್ ಆಸಕ್ತಿಯನ್ನು (interests) ದಾಖಲಿಸಿದೆ. ಈ ಮೈಲಿಗಲ್ಲನ್ನು ತಲುಪಿದ 13ನೇ ಭಾರತೀಯ ಚಿತ್ರವಾಗಿ 'Toxic' ಗುರುತಿಸಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ. 'KGF Chapter 2'ನ ಭಾರಿ ಯಶಸ್ಸಿನ ನಂತರ, ಯಶ್ ಅವರ ವೃತ್ತಿಜೀವನದಲ್ಲಿ ಈ ಮಟ್ಟದ ಜನಪ್ರಿಯತೆಯನ್ನು ಅಥವಾ ನಿರೀಕ್ಷೆಯನ್ನು ಪಡೆದ ಎರಡನೇ ಚಿತ್ರ ಇದಾಗಿದೆ.

'KGF 2' ನಂತರ ಮತ್ತೆ ಬೆಳ್ಳಿ ತೆರೆಗೆ ಯಶ್ !'KGF: Chapter 2' ಬಿಡುಗಡೆಯಾದ ಸುಮಾರು ನಾಲ್ಕು ವರ್ಷಗಳ ನಂತರ 'Toxic' ಚಿತ್ರದ ಮೂಲಕ ಯಶ್ ಬೆಳ್ಳಿಪರದೆಗೆ ಮರಳುತ್ತಿದ್ದಾರೆ. ನಟ ಯಶ್ ಈ ಚಿತ್ರವನ್ನು ಸಹ-ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ. ಚಿತ್ರದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿವೆ.

ಭಾರತದಲ್ಲಿ 'Toxic' ಮುಂಗಡ ಬುಕಿಂಗ್ ಆಗಸ್ಟ್ 21 ರಂದು ಆರಂಭ: ಅಮೆರಿಕದಲ್ಲಿ ಚಿತ್ರದ ಮುಂಗಡ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದರೂ, ಭಾರತದಲ್ಲಿ ಬುಕಿಂಗ್ ಇನ್ನೂ ಆರಂಭವಾಗಬೇಕಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ 'Toxic' ಚಿತ್ರದ ಮುಂಗಡ ಬುಕಿಂಗ್ ಭಾರತದಲ್ಲಿ ಆಗಸ್ಟ್ 21 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಯಶ್ ಅಭಿನಯದ ಈ ಚಿತ್ರವು ಭರ್ಜರಿ ಓಪನಿಂಗ್ ಕಾಣಲಿದೆ ಎಂದು ಟ್ರೇಡ್ ತಜ್ಞರು ನಿರೀಕ್ಷಿಸುತ್ತಿದ್ದಾರೆ; ಮುಂಗಡ ಬುಕಿಂಗ್ ಪ್ರವೃತ್ತಿ ಇದೇ ರೀತಿ ಮುಂದುವರೆದರೆ ಚಿತ್ರವು ಬಿಡುಗಡೆಯ ದಿನದಂದೇ ಸುಮಾರು ₹100 ಕೋಟಿ ರೂ. ಗಳಿಸಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.

'ಟಾಕ್ಸಿಕ್' (Toxic) ಚಿತ್ರದ ಟಿಕೆಟ್ ದರ ಎಷ್ಟಿರಲಿದೆ? 'ಟಾಕ್ಸಿಕ್' ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಇದನ್ನು ಇತರ ಭಾರತೀಯ ಭಾಷೆಗಳಿಗೂ ಡಬ್ ಮಾಡಲಾಗುತ್ತದೆ. ಯಶ್ ಅವರ ಜನಪ್ರಿಯತೆಯ ಕಾರಣದಿಂದಾಗಿ, ಕೆಲವು ಪ್ರದೇಶಗಳಲ್ಲಿ ವಿಶೇಷ ಪ್ರದರ್ಶನಗಳ ಟಿಕೆಟ್ ದರಗಳು ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬೆಳಿಗ್ಗೆ 6 ಗಂಟೆಯ ವಿಶೇಷ ಪ್ರದರ್ಶನಗಳ ಟಿಕೆಟ್ ದರಗಳು ₹500 ರಿಂದ ₹600 ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ; ಅದೇ ರೀತಿ ಸಾಮಾನ್ಯ ಪ್ರದರ್ಶನಗಳ ದರಗಳು ಎಂದಿಗಿಂತಲೂ ಸುಮಾರು ₹50 ರಿಂದ ₹100 ರಷ್ಟು ಹೆಚ್ಚಿರಬಹುದು. ಆದರೆ, ಮುಂಬೈ ಮತ್ತು ದೆಹಲಿಯಲ್ಲಿ ಅತ್ಯಂತ ದುಬಾರಿ ಪ್ರದರ್ಶನಗಳ ಟಿಕೆಟ್ ದರವು ₹2,600 ರಷ್ಟಿರಬಹುದು.

ಆಗಸ್ಟ್ 26 ರಂದು ಚಿತ್ರ ಬಿಡುಗಡೆಯಾಗಲಿರುವುದರಿಂದ ಈಗ ಎಲ್ಲರ ಗಮನವು ಭಾರತದಲ್ಲಿನ ಅದರ ಮುಂಗಡ ಬುಕಿಂಗ್ ಮತ್ತು ಬಿಡುಗಡೆಯ ದಿನದ ಪ್ರದರ್ಶನದ ಮೇಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com