ಇನ್ನು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಆಮ್ಲಾ ಕೂಡ ರೇಸ್ ನಲ್ಲಿದ್ದು, ಈಗಾಗಲೇ 2 ಸಾವಿರ, 3 ಸಾವಿರ, 4 ಸಾವಿರ, 5 ಸಾವಿರ ಮತ್ತು 6 ಸಾವಿರ ರನ್ ಗಳನ್ನು ವೇಗವಾಗಿ ಪೂರೈಸಿದ ದಾಖಲೆ ಹೊಂದಿರುವ ಆಮ್ಲಾ, ಇದೀಗ 8 ಸಾವಿರ ಗಡಿಯಲ್ಲಿದ್ದಾರೆ. ಪ್ರಸ್ತುತ ಆಮ್ಲಾ 153 ಏಕದಿನ ಇನ್ನಿಂಗ್ಸ್ ನಲ್ಲಿ 7186 ರನ್ ಗಳಿಸಿದ್ದು, 8 ಸಾವಿರ ರನ್ ಗಳಿಕೆಗೆ ಕೇವಲ 814 ರನ್ ಗಳ ಬಾಕಿ ಇದೆ. ಈ ಹಿಂದೆ ಇದೇ ಆಮ್ಲಾ ಕೊಹ್ಲಿ ಅವರ ವೇಗದ 7 ಸಾವಿರ ರನ್ ಗಳಿಕೆ ದಾಖಲೆಯನ್ನು ಮುರಿದಿದ್ದರು. ಆಮ್ಲಾ 166 ಇನ್ನಿಂಗ್ಸ್ ಗಳಲ್ಲಿ 7 ಸಾವಿರ ರನ್ ಪೂರೈಸಿದ್ದರೆ, ಆಮ್ಲಾ ಇದನ್ನು ಕೇವಲ 150 ಇನ್ನಿಂಗ್ಸ್ ಗಳಲ್ಲಿ ಪೂರೈಸಿ ದಾಖಲೆ ಬರೆದಿದ್ದರು.