ಇಂಡೋ-ಆಫ್ಘನ್ ಐತಿಹಾಸಿಕ ಟೆಸ್ಟ್: ಏಷ್ಯಾದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯವಾದ 2ನೇ ಪಂದ್ಯ

ಆಫ್ಘಾನಿಸ್ತಾನದ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಪಂದ್ಯ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಏಷ್ಯಾ ಖಂಡದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯ ಎಂಬ ದಾಖಲೆಯನ್ನು ಇಂಡೋ-ಆಫ್ಘನ್ ಪಂದ್ಯ ಬರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಆಫ್ಘಾನಿಸ್ತಾನದ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಪಂದ್ಯ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಏಷ್ಯಾ ಖಂಡದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯ ಎಂಬ ದಾಖಲೆಯನ್ನು ಇಂಡೋ-ಆಫ್ಘನ್ ಪಂದ್ಯ ಬರೆದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಮುಕ್ತಾಯವಾದ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 239ರನ್ ಗಳ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ್ದ 474ರನ್ ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಆಫ್ಗಾನಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 109 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಫಾಲೋಆನ್ ಹೇರಿದ ಭಾರತ ಮತ್ತೆ ಆಫ್ಘಾನಿಸ್ತಾಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆಗಲೂ ಮತ್ತೆ ತನ್ನ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆಫ್ಘಾನಿಸ್ತಾನ ಕೇವಲ 103ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಆ ಮೂಲಕ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು. ಅಲ್ಲದೆ 2ನೇ ದಿನಗಾಟದ ವೇಳೆ ಭಾರತದ ನಾಲ್ಕು ವಿಕೆಟ್ ಸೇರಿದಂತೆ ಬರೊಬ್ಬರಿ 24 ವಿಕೆಟ್ ಗಳು ಉರುಳಿದ್ದವು. ಕೇವಲ ಎರಡೇ  ದಿನದಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯ ಮುಕ್ತಾಯವಾಯಿತು.  ಇನ್ನು ಏಷ್ಯಾ ಖಂಡದಲ್ಲಿ ನಡೆದ ಪಂದ್ಯಗಳ ಪೈಕಿ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡ 2ನೇ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಒಟ್ಟು 1028 ಎಸೆತಗಳನ್ನು ಮಾತ್ರ ಹಾಕಲಾಗಿದೆ. ಈ ಹಿಂದೆ ಶಾರ್ಜಾದಲ್ಲಿ 2002ರಲ್ಲಿ ಪಾಕಿಸ್ತಾನ ಮತ್ತು ಆಸ್ಚ್ರೇಲಿಯಾ ನಡುವಿನ ಪಂದ್ಯ ಕೂಡ ಎರಡೇ ದಿನದಲ್ಲಿ ಮುಕ್ತಾಯವಾಗಿತ್ತು.
ಇನ್ನು 1889ರಲ್ಲಿ ಪೋರ್ಟ್ ಎಲಿಜೆಬೆತ್ ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಕೂಡ ಎರಡೇ ದಿನದಲ್ಲಿ ಮುಕ್ತಾಯವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com