ಇಂಡೋ-ಆಫ್ಘನ್ ಐತಿಹಾಸಿಕ ಟೆಸ್ಟ್: ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಅತೀ ದೊಡ್ಡ ಗೆಲುವು

ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಫ್ಘಾನಿಸ್ತಾನದ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 262 ರನ್ ಗಳ ಗೆಲುವು ಸಾಧಿಸಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತದ ಅತೀ ದೊಡ್ಡ ಗೆಲುವು ಎಂದು ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಫ್ಘಾನಿಸ್ತಾನದ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ  ಇನ್ನಿಂಗ್ಸ್ ಮತ್ತು 262 ರನ್ ಗಳ ಗೆಲುವು ಸಾಧಿಸಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತದ ಅತೀ ದೊಡ್ಡ ಗೆಲುವು ಎಂದು ದಾಖಲಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ್ದ 474ರನ್ ಗಳಿಗೆ ಉತ್ತರವಾಗಿ ಬ್ಯಾಟಿಂಗ ಆರಂಭಿಸಿದ್ದ ಆಫ್ಗಾನಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 109 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಫಾಲೋಆನ್ ಹೇರಿದ ಭಾರತ ಮತ್ತೆ ಆಫ್ಘಾನಿಸ್ತಾನಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆಗಲೂ ಮತ್ತೆ ತನ್ನ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆಫ್ಘಾನಿಸ್ತಾನ ಕೇವಲ 103ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಅತೀ ದೊಡ್ಡ ಗೆಲುವು
ಇನ್ನು ನಿನ್ನೆ ಬೆಂಗಳೂರಿನ ಎಂ ಚಿ್ನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತಕ್ಕೆ ಸಿಕ್ಕ ಗೆಲುವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಂ ಇಂಡಿಯಾ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ. 2007ರಲ್ಲಿ ಬಾಂಗ್ಲಾದೇಶದ ವಿರುದ್ಧ ಢಾಕಾದಲ್ಲಿ ದೊರೆತಿದ್ದ ಇನ್ನಿಂಗ್ಸ್ ಮತ್ತು 239ರನ್ ಗಳ ಗೆಲುವು ಭಾರತದ ಅತೀದೊಡ್ಡ ಗೆಲುವಾಗಿತ್ತು, ಈ ದಾಖಲೆಯನ್ನು ಆಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಮುರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com