ಕೀಮೋ ಪೌಲ್ ರನ್ನು ಧೋನಿ ಕೇವಲ 00.08 ಸೆಕೆಂಡ್ ನಲ್ಲಿ ಸ್ಟಂಪೌಟ್ ಮಾಡಿದ್ದು, ಆ ಮೂಲಕ ಮತ್ತೆ ಧೋನಿ ಸ್ಟಂಪಿಂಗ್ ನಲ್ಲಿ ತಾವೇ ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಸ್ಟಂಪೌಟ್ ಮಾಡಿದ ಆಟಗಾರ ಎಂಬ ಕೀರ್ತಿಗೂ ಮಾಹಿ ಭಾಜನರಾಗಿದ್ದಾರೆ. ಈ ಹಿಂದೆ ಇದೇ ಮಾಹಿ 00.0 ಸೆಕೆಂಡ್ ನಲ್ಲಿ ಸ್ಟಂಪೌಟ್ ಮಾಡಿ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ.