ಆಸಿಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಧೋನಿ ಅಜೇಯ 87 ರನ್ ಗಳಿಸಿದ್ದು, ಆ ಮೂಲಕ ರನ್ ಚೇಸಿಂಗ್ ವೇಳೆಯ ತಮ್ಮ ಸರಾಸರಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿಕೊಂಡಿದ್ದಾರೆ. ಹಾಲಿ ಅಂಕಿ ಅಂಶಗಳ ಅನ್ವಯ ಚೇಸಿಂಗ್ ವೇಳೆ ಮಹೇಂದ್ರ ಸಿಂಗ್ ಧೋನಿ ಅವರ ರನ್ ಸರಾಸರಿ 103.07 ರಷ್ಟಿದೆ. ಅಲ್ಲದೆ ಚೇಸಿಂಗ್ ವೇಳೆ ಧೋನಿ ಒಟ್ಟು 73 ಪಂದ್ಯಗಳಿಂದ 103.07 ಸರಾಸರಿಯಲ್ಲಿ 2, 783 ರನ್ ಸಿಡಿಸಿದ್ದಾರೆ. ಈ ಪೈಕಿ 2 ಭರ್ಜರಿ ಶತಕಗಳೂ ಕೂಡ ಸೇರಿವೆ. ಆ ಮೂಲಕ ರನ್ ಚೇಸಿಂಗ್ ವೇಳೆ ಅತೀ ಹೆಚ್ಚು ಸರಾಸರಿ ಹೊಂದಿರುವ ವಿಶ್ವದ ಬ್ಯಾಟ್ಸ,ಮನ್ ಗಳ ಪಟ್ಟಿಯಲ್ಲಿ ಧೋನಿ ಅಗ್ರ ಸ್ಥಾನಕ್ಕೇರಿದ್ದಾರೆ.