ಸಚಿನ್, ಸೆಹ್ವಾಗ್ ದಾಖಲೆ ಧೂಳಿಪಟ; ದಾಖಲೆಯ 7ನೇ ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ!

ಶತಕಗಳ ವೀರ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ದಾಖಲೆಯೊಂದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೂಳಿಪಟ್ಟ ಮಾಡಿದ್ದು ದಾಖಲೆಯ 7ನೇ ದ್ವಿಶತಕ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಪುಣೆ: ಶತಕಗಳ ವೀರ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ದಾಖಲೆಯೊಂದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೂಳಿಪಟ್ಟ ಮಾಡಿದ್ದು ದಾಖಲೆಯ 7ನೇ ದ್ವಿಶತಕ ಬಾರಿಸಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 81ನೇ ಟೆಸ್ಟ್ ನಲ್ಲಿ 7ನೇ ದ್ವಿಶತಕ ಬಾರಿಸಿದ್ದಾರೆ. ವೀರೇಂದ್ರ ಸೆಹ್ವಾಗ್ 104 ಪಂದ್ಯಗಳಲ್ಲಿ 6 ದ್ವಿಶತಕ ಬಾರಿಸಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 200 ಟೆಸ್ಟ್ ಪಂದ್ಯದಲ್ಲಿ 6ನೇ ದ್ವಿಶತಕ ಬಾರಿಸಿದ್ದರು. 

ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ದ್ವಿಶತಕ ಸಿಡಿಸಿದ ಸಾಧನೆ ಮಾಡಿರುವುದು ಡಾನ್ ಬ್ರಾಡ್ಮನ್(12), ಕುಮಾರ ಸಂಗಕ್ಕಾರ(11) ಮತ್ತು ಬ್ರಿಯಾನ್ ಲಾರಾ(9) ಬಾರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com