IPL 2025: Rohit Sharma ಗೆ ಶಸ್ತ್ರಚಿಕಿತ್ಸೆ? ಕಾರಣ ಏನು ಗೊತ್ತಾ?

ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಳೆದ ಕೆಲವು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
Rohit Sharma
ರೋಹಿತ್ ಶರ್ಮಾ
Updated on: 

ಮುಂಬೈ: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದ ಭಾರತ ತಂಡದ ಹಿಟ್ ಮ್ಯಾನ್ ರೋಹಿತ್ ಶರ್ಮಾ ತುರ್ತು ಶಸ್ತ್ರಚಿಕಿತ್ಸೆಗೊಳಗಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು.. ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಳೆದ ಕೆಲವು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ರೋಹಿತ್ ಶರ್ಮಾ ಅವರನ್ನು ಕಳೆದ ಐದು ವರ್ಷದಿಂದ ಕಾಡುತ್ತಿರುವ ಸಮಸ್ಯೆಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಹಾಲಿ ಐಪಿಎಲ್ ಟೂರ್ನಿ ಮುಗಿದ ಕೂಡಲೇ ರೋಹಿತ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ.

Rohit Sharma
IPL 2025: 500 ಮಿಸ್ಡ್ ಕಾಲ್, 4 ದಿನ ಫೋನ್ ಸ್ವಿಚ್ ಆಫ್..; Vaibhav Suryavanshi ಗೆ ಕೋಚ್ Rahul Dravid ಎಚ್ಚರಿಕೆ!

ರೋಹಿತ್ ಗೆ ಏನಾಯ್ತು?

ವರದಿಗಳ ಪ್ರಕಾರ, ರೋಹಿತ್ ಕಳೆದ ಐದು ವರ್ಷಗಳಿಂದ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಐಪಿಎಲ್ ನಂತರ ಅವರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.

ಸುದೀರ್ಘ ವಿಶ್ರಾಂತಿ

ರೋಹಿತ್ ಶರ್ಮಾ ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡುತ್ತಿಲ್ಲ. ಮುಂದಿನ 3 ತಿಂಗಳು ಯಾವುದೇ ಏಕದಿನ ಸರಣಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೋಹಿತ್‌ಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ರೋಹಿತ್ ಶರ್ಮಾ 2016 ರಲ್ಲಿ ಕ್ವಾಡ್ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ 3 ತಿಂಗಳು ಬೇಕಾಯಿತು. ಮಂಡಿರಜ್ಜು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ 3-4 ತಿಂಗಳುಗಳು ಬೇಕಾಗಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Rohit Sharma
ICC Cricket ಇತಿಹಾಸದಲ್ಲೇ ಅತೀ ಹೆಚ್ಚು Viewership: ದಾಖಲೆ ಬರೆದ 2025 Champions Trophy

2027ರ ಏಕದಿನ ವಿಶ್ವಕಪ್ ಗೆ ಸಿದ್ಧತೆ?

ಕ್ರೀಡಾಸುದ್ದಿ ವಾಹಿನಿಯೊಂದರ ಮತ್ತೊಂದು ಸುದ್ದಿ ಪ್ರಕಾರ ರೋಹಿತ್ ಶರ್ಮಾ, 2027 ರ ವಿಶ್ವಕಪ್​ಗಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇದು ಸರಿಯಾದ ಸಮಯ ಎಂದು ರೋಹಿತ್ ಭಾವಿಸಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ರೋಹಿತ್ ಭಾರತ ತಂಡದ ಏಕದಿನ ಮತ್ತು ಟೆಸ್ಟ್ ತಂಡಗಳಿಗೆ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಹೀಗಾಗಿ ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಬಿಸಿ ಇದ್ದಿದ್ದರಿಂದ ಅವರು ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದರು. ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದ ಕಾರಣ ಮತ್ತು ದೊಡ್ಡ ಪಂದ್ಯಾವಳಿಗಳ ಕಾರಣದಿಂದಾಗಿ ಈ ಶಸ್ತ್ರಚಿಕಿತ್ಸೆಯನ್ನು ಬಹಳ ಸಮಯದಿಂದ ಮುಂದೂಡುತ್ತಿದ್ದಾರೆ.

ಆದರೆ ಈಗ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು, ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಸಿಗುತ್ತದೆ ಎಂಬ ಕಾರಣಕ್ಕೇ ಅವರು ಮಂಡಿರಜ್ಜು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com