ಆಟೋ ಚಾಲಕ ಸೆರೆ

ದೆಹಲಿ ಮೂಲದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರ್ವಜನಿಕರ ಎದುರಿನಲ್ಲೇ ಹಲ್ಲೆ ನಡೆಸಿ, ಆಟೋದಿಂದ ಹೊರಗೆಳೆದು...
ಬಂಧಿತ ಆಟೋ ಚಾಲಕನ ಲೈಸೆನ್ಸ್ ಫೋಟೋ (ಚಿತ್ರ ಕೃಪೆ: ಫೇಸ್ ಬುಕ್ )
ಬಂಧಿತ ಆಟೋ ಚಾಲಕನ ಲೈಸೆನ್ಸ್ ಫೋಟೋ (ಚಿತ್ರ ಕೃಪೆ: ಫೇಸ್ ಬುಕ್ )
Updated on: 

ಬೆಂಗಳೂರು: ದೆಹಲಿ ಮೂಲದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರ್ವಜನಿಕರ ಎದುರಿನಲ್ಲೇ ಹಲ್ಲೆ ನಡೆಸಿ, ಆಟೋದಿಂದ ಹೊರಗೆಳೆದು ಅಮಾನವೀಯವಾಗಿ ವರ್ತಿ ಸಿದ್ದ ಓಲಾ ಆಟೋ ಚಾಲಕನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಸಿಂಗಸಂದ್ರ ಸಮೀಪದ ಸುಭಾಷ್ ನಗರ ನಿವಾಸಿ ರಿಜ್ವಾನ್ ಬಾಷಾ (40) ಬಂಧಿತ. ಹಲ್ಲೆಗೊಳಗಾದ ದಿವ್ಯಾ ಶರ್ಮಾ, ಆಕೆ ಪತಿ ವಿಪುಲ್ ಸಿರೋಹಿ ನೀಡಿದ ದೂರಿನ ಮೇರೆಗೆ ರಿಜ್ವಾನ್‍ನನ್ನು ಬಂಧಿಸಿ, ಕೋರ್ಟ್‍ಗೆ ಹಾಜರುಪಡಿಸಲಾಗಿದೆ.

ಬುಧವಾರ ಹಲ್ಲೆ ಘಟನೆ ನಡೆದಿತ್ತು. ಘಟನೆ ಬಗ್ಗೆ ದಿವ್ಯಾ ಶರ್ಮಾ ಫೇಸ್ ಬುಕ್ ನಲ್ಲಿ ತಮಗಾದ ನೋವನ್ನು ಹೇಳಿಕೊಂಡಿದ್ದರು. ಗಂಭೀರ ಪ್ರಕರಣವಾಗಿದ್ದರಿಂದ ಹಲ್ಲೆಗೊಳಗಾದ ಮಹಿಳೆ ವಿಳಾಸ ಪತ್ತೆಹಚ್ಚಿ ಪೊಲೀಸರು ಸಂಪರ್ಕ ಮಾಡಿದ್ದರು. ಮೊದಲು ಅಧಿಕೃತವಾಗಿ ದೂರು ನೀಡಲು ನಿರಾಕರಿಸಿದರು. ಮನವೊಲಿಕೆ ನಂತರ ದೂರು ನೀಡಿದರು.

ಆಟೋ ಚಾಲಕನ ಸ್ವವಿವರಗಳ ಡಿಸ್ಲೇ ಕಾರ್ಡ್‍ನ್ನು ಮೊಬೈಲ್ ನಲ್ಲಿ ಫೋಟೋ ತೆಗೆದು ಹಾಕಿದ್ದರಿಂದ ಆರೋಪಿ ವಿಳಾಸ ಪತ್ತೆಹಚ್ಚಲು ಕಷ್ಟವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com