

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ವಿವಿಧ ರಸ್ತೆಗಳಲ್ಲಿ
ಪಥಸಂಚಲನ ನಡೆಸಿದರು.
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅತಿ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸಂಬಂಧ ರಸ್ತೆ ಪಥ ಸಂಚಲನ ನಡೆಸಲಾಯಿತು.
ಬಂಡೇಪಾಳ್ಯ ವೃತ್ತದಿಂದ ಆರಂಭವಾದ ಪಥಸಂಚಲನ ಮುನೇಶ್ವರ ಲೇಔಟ್, ಮಥುರ ಗಾರ್ಮೆಂಟ್ಸ್ ರಸ್ತೆ, ಮದೀನ ನಗರ ಹಾಗೂ ಅತಿಸೂಕ್ಷ್ಮ ಮತಗಟ್ಟೆ ಪ್ರದೇಶಗಳಾದ ಮಂಗಮ್ಮನ ಪಾಳ್ಯ, ಉರ್ದು ಸ್ಕೂಲ್ ರಸ್ತೆ, ಇಲ್ಮಾ ಸ್ಕೂಲ್ ರಸ್ತೆ, ಟಿಂಬರ್ ಗಲ್ಲಿ ರಸ್ತೆ, ಮಂಗಮ್ಮನಪಾಳ್ಯ ಮುಖ್ಯರಸ್ತೆ, ಸಿಟಿಜನ್ ಬೇಕರಿ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಹೆಚ್.ಎಸ್.ಆರ್. ಲೇಔಟ್ 2ನೇ ಸೆಕ್ಟರ್ ಸರ್ಕಾರಿ ಶಾಲೆಯ ಆವರಣದಲ್ಲಿ ಮುಕ್ತಾಯವಾಯಿತು. ಮಡಿವಾಳ ಉಪವಿಭಾಗದ ಪೊಲೀಸ್ ಅ„ಕಾರಿ, ಸಿಬ್ಬಂದಿ, 2 ಕೆಎಸ್‍ಆರ್‍ಪಿ ತುಕಡಿ, ಗೃಹರಕ್ಷಕ ದಳ ಸಿಬ್ಬಂದಿ ಸೇರಿ 150 ಅ„ಕಾರಿ ಮತ್ತು ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.