

ಬೆಂಗಳೂರು: ಲೋಕಾಯುಕ್ತಕ್ಕೆ ರಾಜಿನಾಮೆ ಸಲ್ಲಿಸಿರುವ ನ್ಯಾ.ಭಾಸ್ಕರ್‍ರಾವ್ ಅವರನ್ನು ಕೂಡಲೇ ಬಂಧೀಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.
ನ್ಯಾ.ಭಾಸ್ಕರ್ ರಾವ್ ಅವರನ್ನು ಬಂಧಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರದ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪಕ್ಷದ ವಕ್ತಾರ ರಮೇಶ್ ಬಾಬು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತರ ಹುದ್ದೆಗೆ ರಾಜಿನಾಮೆ ನೀಡಿರುವ ಭಾಸ್ಕರ್‍ರಾವ್ ಕ್ರಮ ಸ್ವಾಗತಾರ್ಹ. ಆದರೆ, ನ್ಯಾಯಾಧೀೀಶರಾದ ಭಾಸ್ಕರ್‍ರಾವ್ ತಮ್ಮ ಮಗನ ಮೇಲೆ ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ರಾಜಿನಾಮೆ ನೀಡಿದ್ದರೆ ಸಂಸ್ಥೆಯ ಹಾಗೂ ವ್ಯವಸ್ಥೆ ಗೌರವವನ್ನು ಉಳಿಸಲು ಸಾಧ್ಯವಾಗುತ್ತಿತ್ತು ಎಂದರು.