ಫನ ತ್ಯಾಜ್ಯ ಘಟಕಕ್ಕೆ ಸುಪ್ರೀಂ ಅನುಮತಿ

ನಗರಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯವನ್ನು ಶಕ್ತಿಯಾಗಿ ಪರಿವರ್ತಿಸುವ ಬೆಂಗಳೂರಿನ ಘಟಕಕ್ಕೆ ಅನುಮತಿ ವಿಚಾರದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ...
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ನಗರಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯವನ್ನು ಶಕ್ತಿಯಾಗಿ ಪರಿವರ್ತಿಸುವ ಬೆಂಗಳೂರಿನ ಘಟಕಕ್ಕೆ ಅನುಮತಿ ವಿಚಾರದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ನೆಲಮಂಗಲದ ಬಳಿಯ ಗೋರೂರಿನಲ್ಲಿ ಸಟಾರೇಮ್ ಖಾಸಗಿ ಸಂಸ್ಥೆಯ ಘನತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವ ಘಟಕಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಗೋರೂರಿನ ಉದ್ದೇಶಿತ ಘಟಕ ಸರಿಯಾದ ಹೆಜ್ಜೆ. ಇದು ನಗರ ಕಸ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಜೊತೆಗೆ ವಿದ್ಯುತ್ ಕೊರತೆ ಸಮಸ್ಯೆ ನೀಗಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಬಿ.ಎಸ್.ಸಚ್ಚಿದಾನಂದಮೂರ್ತಿ ಮತ್ತು ಇತರರು ಈ ಘಟಕಕ್ಕೆ ಸಂಬಂಧಿಸಿದಂತೆ 2015ರ ಅಕ್ಟೋಬರ್‍ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಟಿ.ಜಿ.ಹಳ್ಳಿ ಸಂರಕ್ಷಿತ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಆರಂಭಿಸಿರುವುದರಿಂದ ಬೆಂಗಳೂರಿಗೆ ನೀರು ನೀಡುವ ಟಿ.ಜಿ.ಹಳ್ಳಿ ಸಂರಕ್ಷಿತ ಪ್ರದೇಶ ಮಾಲಿನ್ಯಉಂಟಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಿದ್ದರು.

ಘಟಕದ ಅಭಿವೃದ್ಧಿ ಮತ್ತು ಚಟುವಟಿಕೆಯನ್ನು ವೈಜ್ಞಾನಿಕಗೊಳಿಸಬೇಕು. ಟಿ.ಜಿ.ಹಳ್ಳಿಯಲ್ಲಿನ ನೀರಿನ ಗುಣಮಟ್ಟ ಮತ್ತು ಗಾತ್ರ ಯಾವುದಕ್ಕೂ ಹಾನಿಯಾಗಬಾರದು ಎಂದು ಮುಖ್ಯ ನ್ಯಾ.ಟಿ. ಎಸ್.ಠಾಕೂರ್, ನ್ಯಾ.ಭಾನುಮತಿ ಮತ್ತು ಎ.ಎಸ್.ಸಿಕ್ರಿ ಅವರನ್ನು ಒಳಗೊಂಡ ಪೀಠ ಹೇಳಿದೆ. ಜೊತೆಗೆ ಪೀಠವು ತಾಂತ್ರಿಕ ಅಂಶಗಳನ್ನು ಪ್ರಶ್ನಿಸಿದ್ದು, ಪರಿಸರ, ಅರಣ್ಯ ಮತ್ತು ಕೆಎಸ್ ಪಿಸಿಬಿ ಸೇರಿದಂತೆ ಸಂಬಂಧಿತ ಇಲಾಖೆಗಳಅನುಮತಿ ಪಡೆಯುವಂತೆ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com