

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಚಂದ್ರಾಪುರ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಆಡುಗೋಡಿಯ ಭವ್ಯ(23) ಮೃತ ಗೃಹಿಣಿ. ಕಲ್ಯಾಣನಗರದ ನಿವಾಸಿ ಮಾಗಡಿಯಲ್ಲಿ ಪ್ರಿಟಿಂಗ್ ಪ್ರೆಸ್ ಇಟ್ಟುಕೊಂಡಿದ್ದ ಚೇತನ್ ಎಂಬುವನನ್ನು ಭವ್ಯ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ಚೇತನ್ ವರದಕ್ಷಿಣೆ ತರುವಂತೆ ಭವ್ಯಗೆ ನಿರಂತರ ಹಿಂಸೆ ನೀಡುತ್ತಿದ್ದ. ಇದಕ್ಕೆ ಬೇಸತ್ತು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಭವ್ಯ ಪೋಷಕರು ವರದಕ್ಷಿಣೆಗಾಗಿಯೇ ಕೊಲೆ ಮಾಡಿದ್ದಾರೆ ಎಂದು ಗಂಡ ಚೇತನ್, ಮಾವ ಕೇಶವರೆಡ್ಡಿ, ಅತ್ತೆ ಶೈಲಜಾ ವಿರುದ್ಧ ದೂರು ನೀಡಿದ್ದಾರೆ. ಚಂದ್ರಲೇಔಟ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.