ಜಿಲ್ಲಾ ಸುದ್ದಿ

ಉಪನ್ಯಾಸಕರ ಧರಣಿ 27ದಿನಕ್ಕೆ

ಉಪನ್ಯಾಸಕರ ಧರಣಿ 27ದಿನಕ್ಕೆ
ಅನುದಾನಕ್ಕೆ ಒಳಪಡುತ್ತಿರುವ ಪಿಯು ಕಾಲೇಜು ಉಪನ್ಯಾಸಕರ ಹೋರಾಟದಲ್ಲಿ ಪ್ರೊ. ಚಂಪಾ ಭಾಗವಹಿಸಿದ್ದರು.
Published On :

ಬೆಂಗಳೂರು: ಅನುದಾನಕ್ಕೆ ಒಳಪಟ್ಟರೂ ಅನುಮತಿಗಾಗಿ ಕಾಯುತ್ತಿರುವ 21 ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪಿಯು ಕಾಲೇಜುಗಳ ಆಡಳಿತ ಮಂಡಳಿ, ಉಪನ್ಯಾಸಕರ ಹಾಗೂ ನೌಕರರ ಒಕ್ಕೂಟ ನಡೆಸುತ್ತಿರುವ ಹೋರಾಟ 27ನೇ ದಿನಕ್ಕೆ ಕಾಲಿಟ್ಟಿದೆ.

ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಶನಿವಾರ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರು ಬೆಂಬಲ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ``ಪಾಠ ಮಾಡಿ ದೇಶದ ಭವಿಷ್ಯ ರೂಪಿಸಬೇಕಾದ ಉಪನ್ಯಾಸಕರು ಇಂದು ಬೀದಿಗೆ ಬಂದಿದ್ದಾರೆ.

ಭವಿಷ್ಯ ರೂಪಿಸಬೇಕಾದವರೇ ತಮ್ಮ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿರುವುದು ದುರ್ದೈವದ ಸಂಗತಿ. ಸಂಬಂಧಪಟ್ಟ ಇಲಾಖೆ ಉಪನ್ಯಾಸಕರಿಗೆ ತತ್‍ಕ್ಷಣದ ನ್ಯಾಯ ಒದಗಿಸಬೇಕು,'' ಎಂದು ಅವರು ಒತ್ತಾಯಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಜಾಲಮಂಗಲ ನಾಗರಾಜ, ಎಂ. ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.