

ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿ ಡಿ.31ರಂದು ನಡೆಯಲಿರುವ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಬಿಗ್-10 ಮಾರ್ಗಗಳಲ್ಲಿ ಅಂದು ಬಸ್‍ಗಳ ಸಂಚಾರ ಅವಧಿಯನ್ನು ತಡರಾತ್ರಿ 2.30ರವರೆಗೆ ವಿಸ್ತರಿಸಿದೆ.
ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಬಿಗ್-10 ಮಾರ್ಗಗಳಾದ ಕಾಡುಗೋಡಿ ಬಸ್ ನಿಲ್ದಾಣ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕೆಂಗೇರಿ ಹೌಸಿಂಗ್
ಬೋರ್ಡ್ ಕ್ವಾರ್ಟ್‍ರ್ಸ್, ಜನಪ್ರಿಯ ಟೌನ್‍ಶಿಪ್, ನೆಲಮಂಗಲ, ಯಲಹಂಕ ಉಪನಗರ, ಆರ್.ಕೆ. ಹೆಗಡೆ ನಗರ, ಬಾಗಲೂರು ಹಾಗೂ ಹೊಸಕೋಟೆ ಮಾರ್ಗಗಳಲ್ಲಿ ಬಸ್‍ಗಳು ತಡರಾತ್ರಿ 2.30ರವರೆಗೆ ಸಂಚರಿಸಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.