ಕಸ ವಿಲೇವಾರಿ ನಿರ್ಲಕ್ಷ್ಯ ; ಉದ್ದಿಮೆಗಳಿಗೆ ದಂಡ

ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ಪರವಾನಗಿ ನವೀಕರಣಗೊಳಿಸದ ಮಳಿಗೆ, ವಾಹನ ಸಾರಿಗೆ ಸಂಸ್ಥೆ ಹಾಗೂ ಹೋಟೆಲ್‍ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ದಂಡ...
ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ
ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ
Updated on: 

ಬೆಂಗಳೂರು: ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ಪರವಾನಗಿ ನವೀಕರಣಗೊಳಿಸದ ಮಳಿಗೆ, ವಾಹನ ಸಾರಿಗೆ ಸಂಸ್ಥೆ ಹಾಗೂ ಹೋಟೆಲ್‍ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.

ಗಾಂಧಿನಗರ ವ್ಯಾಪ್ತಿಯಲ್ಲಿ ವಿಆರ್ ಎಲ್ ಟ್ರಾವೆಲ್ಸ್, ಎಸ್‍ಆರ್‍ಎಸ್ ಟ್ರಾವೆಲ್ಸ್ ಸೇರಿದಂತೆ 10 ಉದ್ದಿಮೆಗಳಿಗೆ ದಂಡ ಹಾಕಿದ್ದಾರೆ. 8 ಹೋಟೆಲ್, ಬಾರ್-ರೆಸ್ಟೋರೆಂಟ್‍ಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಯತೀಶ್‍ಕುಮಾರ್ ಹಾಗೂ ಪಶ್ಚಿಮ ವಲಯದ ಜಂಟಿ ಆಯುಕ್ತ ನರಸಿಂಹಯ್ಯ ಅವರ ನೇತೃತ್ವದಲ್ಲಿ ಗಾಂಧಿನಗರದ ನಾನಾ ಮಳಿಗೆ ಹಾಗೂ ಉದ್ದಿಮೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.

ಒಟ್ಟು 17 ಉದ್ದಿಮೆಗಳ ಮೇಲೆ ದಾಳಿ ಮಾಡಿದಾಗ ಕಸ ವಿಲೇವಾರಿ ಮಾಡದಿರುವುದು, ಪಾದಚಾರಿ ಮಾರ್ಗದಲ್ಲಿ ಒತ್ತುವರಿ, ಪರವಾನಗಿ ನವೀಕರಿಸದಿರುವುದು ಕಂಡುಬಂತು. ಹೀಗಾಗಿ 8 ಉದ್ದಿಮೆಗಳ ಮಳಿಗೆಗಳಿಗೆ ಬೀಗ ಹಾಕಿ, ಉಳಿದವುಗಳಿಂದ ರು.1.25 ಲಕ್ಷ ದಂಡ ಸಂಗ್ರಹಿಸಲಾಗಿದೆ. ಅಮಾನತು: ಗಾಂಧಿನಗರದ ಮಳಿಗೆ ಹಾಗೂ ಹೋಟೆಲ್‍ಗಳನ್ನು ಕಾಲಕಾಲಕ್ಕೆ ಪರಿಶೀಲಿಸದ ವಾರ್ಡ್ ಆರೋಗ್ಯ ಪರಿವೀಕ್ಷಕ ರಾಮಣ್ಣ ಅವರನ್ನು ಅಮಾನತುಗೊಳಿಸಲಾಗಿದೆ. ಪರೀಶಿಲನೆಗೆ ಒಳಪಟ್ಟ ಮಳಿಗೆ, ಹೋಟೆಲ್‍ಗೆ ದಂಡ ವಿಧಿಸಿದ ನಂತರ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅಮಾನತು ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com